* ನಿವೃತ್ತ ಅಧೀಕ್ಷಕಿ ಸುಜಾತಾ ಸಾಲಿಯಾನ್ ಹಾರೈಕೆ
* ಪೊಲೀಸ್ ಧ್ವಜ ದಿನಾಚರಣೆ, ವಂದನೆ ಸ್ವೀಕಾರ
ಉಡುಪಿ: ಪೊಲೀಸ್ ಇಲಾಖೆಯಲ್ಲಿನ ಕೆಲಸ ಸವಾಲಿನಿಂದ ಕೂಡಿರುತ್ತದೆ. 24 ಗಂಟೆಯೂ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಇರುತ್ತದೆ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಇಲಾಖೆ ಒಳ್ಳೆಯ ಹೆಸರು, ಅಧಿಕಾರಿ ಹಾಗೂ ಸಿಬ್ಬಂದಿ ಖ್ಯಾತಿಯನ್ನೂ ಗಳಿಸಬಹುದು.
ಕರ್ನಾಟಕ ಪೊಲೀಸ್ ಧ್ವಜ ದಿನದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿಯ ಚಂದು ಮೈದಾನದಲ್ಲಿ ಗುರುವಾರ (ಏ.2) ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಗೌರವ ವಂದನೆ ಸ್ವೀಕರಿಸಿ, ಧ್ವಜ ಬಿಡುಗಡೆಗೊಳಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ ಹರಿರಾಂ ಶಂಕರ್, ಹೆಚ್ಚುವರಿ ಪೊಲೀಸ್ ವರಿಷ್ಠ ಸುಧಾಕರ್ ಎಸ್. ನಾಯ್ಕ್ ಉಪಸ್ಥಿತರಿದ್ದರು. ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿಗೆ ವೈದ್ಯಕೀಯ ಧನ ಸಹಾಯ ವಿತರಿಸಲಾಯಿತು.
ಡಿಎಆರ್ನ ಆರ್ಪಿಐ ರವಿ ಕುಮಾರ್ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಡಿಎಆರ್ನ ಯೋಗೀಶ್ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
"
ಪೊಲೀಸ್ ಧ್ವಜ ಮಾರಾಟದಿಂದ ಸಂಗ್ರಹಿಸಿದ ಹಣ ನಿವೃತ್ತ ಪೊಲೀಸ್ ಕಲ್ಯಾಣ ನಿಧಿಗೆ ಜಮಾ ಆಗುತ್ತದೆ. ಆ ಹಣವನ್ನೇ ಅರ್ಹರಿಗೆ ಹಂಚಿಕೆ ಮಾಡಲಾಗುತ್ತದೆ. 2025-26ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿಯಿಂದ ವೈದ್ಯಕೀಯ ಧನ ಸಹಾಯಕ್ಕಾಗಿ 64 ಅರ್ಜಿ ಸ್ವೀಕರಿಸಲಾಗಿದ್ದು, ಇಂದು ಒಟ್ಟು 13,08,050 ರೂ. ವಿತರಣೆ ಮಾಡಲಾಗಿದೆ.
- ಹರಿರಾಂ ಶಂಕರ್. ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠ.ಇನ್ನಷ್ಟು ಓದಿ

