Sunday, 09 May, 9.58 pm ವಿಜಯವಾಣಿ

ಮುಖಪುಟ
'ಒಳಗೆ ಸೇರಿದರೆ ಗುಂಡು..' ಖ್ಯಾತಿಯ ಚಿತ್ರಸಾಹಿತಿ ಶ್ರೀರಂಗ ಇನ್ನಿಲ್ಲ

ಬೆಂಗಳೂರು: 'ಒಳಗೆ ಸೇರಿದರೆ ಗುಂಡು.. ಹುಡುಗಿಯಾಗುವಳು ಗಂಡು..' ಖ್ಯಾತಿಯ ಚಿತ್ರಸಾಹಿತಿ ಶ್ರೀರಂಗ ಇಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. 86 ವರ್ಷದ ಅವರು ವಯೋಸಹಜ ಕಾರಣದಿಂದ ನಿಧನರಾದರು. ಶ್ರೀರಂಗ ಅವರು ಬೆಂಗಳೂರಿನ ನಾಗರಬಾವಿಯಲ್ಲಿ ನೆಲೆಸಿದ್ದು, ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

ರಾಘವೇಂದ್ರ ರಾಜ್​ಕುಮಾರ್ ಹಾಗೂ ಮಾಲಾಶ್ರೀ ಅಭಿನಯದ 'ನಂಜುಂಡಿ ಕಲ್ಯಾಣ' ಸಿನಿಮಾದ 'ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು..' ಚಿತ್ರಗೀತೆಯನ್ನು ಶ್ರೀರಂಗ ರಚಿಸಿದ್ದು, ಅದಕ್ಕೆ ಸಿಕ್ಕ ಅಪಾರ ಜನಪ್ರಿಯತೆ ಅವರಿಗೆ ಖ್ಯಾತಿ ತಂದಿತ್ತು. ಅವರು 1000ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ರಚಿಸಿದ್ದರು. ಮಾತ್ರವಲ್ಲ 'ಭೂಲೋಕದಲ್ಲಿ ಯಮರಾಜ' ಸೇರಿ ಕೆಲವು ಚಿತ್ರಗಳಿಗೆ ಕಥೆ-ಸಂಭಾಷಣೆ ಬರೆದಿದ್ದರು.

ಶ್ರೀರಂಗ ಹಾಗೂ ನಟ ಸಂಚಾರಿ ವಿಜಯ್

ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

ಅಪ್ಪ-ಮಗ ಇಬ್ಬರೂ ಕರೊನಾಗೆ ಬಲಿ; ಸೋಂಕಿಗೆ ಒಳಗಾಗಿರುವ ಮತ್ತೊಬ್ಬ ಮಗನ ಪರಿಸ್ಥಿತಿ ಚಿಂತಾಜನಕ..

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top