Thursday, 29 Jul, 11.10 am ವಿಜಯವಾಣಿ

ದೇಶ
ಒಲಿಂಪಿಕ್ಸ್​: ಕ್ವಾರ್ಟರ್​ ಫೈನಲ್ಸ್ ತಲುಪಿದ ಸಿಂಧು, ಸತೀಶ್​ ಕುಮಾರ್​; ಅರ್ಜೆಂಟಿನಾ ವಿರುದ್ಧ ಭಾರತದ ಹಾಕಿ ತಂಡಕ್ಕೆ ಜಯ

ಟೋಕಿಯೋ : ಒಲಿಂಪಿಕ್ಸ್​ನಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು, ಬಾಕ್ಸರ್​ ಸತೀಶ್ ಕುಮಾರ್​ ಮತ್ತು ಪುರುಷರ ಹಾಕಿ ತಂಡ ಉತ್ತಮ ಪ್ರದರ್ಶನ ತೋರಿ, ತಂತಮ್ಮ ವಿಭಾಗಗಳಲ್ಲಿ ಕ್ವಾರ್ಟರ್​ ಫೈನಲ್ಸ್​ ಪ್ರವೇಶಿಸಿದ್ದಾರೆ. ಜೊತೆಗೆ, ಆರ್ಚರಿಯಲ್ಲಿ 1/16 ಎಲಿಮಿನೇಷನ್ಸ್​ ರೌಂಡ್​ನಲ್ಲಿ ಭಾರತದ ಅತನು ದಾಸ್​ ಅವರು ದಕ್ಷಿಣ ಕೊರಿಯಾದ 3ನೇ ರಾಂಕ್​ ಉಳ್ಳ ಓಹ್ ಜಿನ್​ ಹ್ಯೆಕ್ ವಿರುದ್ಧ 6-5 ಅಂಕದೊಂದಿಗೆ ಗೆಲುವು ಸಾಧಿಸಿ, ಮುನ್ನಡೆದಿದ್ದಾರೆ.

ಇಂದು ಬೆಳಿಗ್ಗೆ ನಡೆದ ರೌಂಡ್ ಆಫ್ 16 ಪ್ರಿಲಿಮಿನರೀಸ್​ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾರತದ ಸತೀಶ್​ ಕುಮಾರ್​ ಜಮಾಯ್ಕಾದ ರಿಕಾರ್ಡೋ ಬ್ರೌನ್ ಅವರನ್ನು 4:1 ಅಂಕಗಳೊಂದಿಗೆ ಪರಾಜಯಗೊಳಿಸಿದರು. ಪುರುಷರ ಸೂಪರ್​ ಹೆವಿ(+91ಕೆಜಿ) ವಿಭಾಗದಲ್ಲಿ ಆಡುತ್ತಿರುವ ಕುಮಾರ್​, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದ್ದು, ಒಲಿಂಪಿಕ್ಸ್​ ಪದಕದಿಂದ ಒಂದು ಹೆಜ್ಜೆ ದೂರವಿದ್ದಾರೆ.

ಪದಕ ತಂದ ಪದವಿ: ಮೀರಾಬಾಯಿ ಆಗಲಿದ್ದಾರೆ ಉನ್ನತ ಪೊಲೀಸ್​ ಅಧಿಕಾರಿ!

ಪೂಲ್ ಎ ವಿಭಾಗದ ಪಂದ್ಯಗಳಲ್ಲಿ ಭಾರತದ ಪುರುಷರ ಹಾಕಿ ತಂಡ ಅರ್ಜೆಂಟಿನಾದ ಬಲಶಾಲಿ ತಂಡದ ವಿರುದ್ಧ ಗೆಲುವು ಸಾಧಿಸಿದ್ದು, ಕ್ವಾರ್ಟರ್​ ಫೈನಲ್ಸ್​ ಹಂತ ತಲುಪಿದೆ. ನಮ್ಮ ತಂಡದ ಪ್ರತಿಭಾವಂತ ಸದಸ್ಯರಾದ ವಿವೇಕ್​ ಸಾಗರ್ ಪ್ರಸಾದ್ ಮತ್ತು ಹರಮನ್​ಪ್ರೀತ್​ ಸಿಂಗ್​ ಗೋಲ್​ಗಳನ್ನು ಸಾಧಿಸಿ 3-1 ಅಂಕದೊಂದಿಗೆ ಭಾರತಕ್ಕೆ ಗೆಲುವು ತಂದರು.

ಬ್ಯಾಡ್ಮಿಂಟನ್ ಚ್ಯಾಂಪಿಯನ್ ಪಿ.ವಿ.ಸಿಂಧು ಅವರು ಡೆನ್ಮಾರ್ಕ್​ನ ಮಿಯಾ ಬ್ಲಿಚ್​ಫೆಲ್​ಡ್ಟ್ ವಿರುದ್ಧ 21-15, 21-13 ಅಂಕಗಳನ್ನು ಗಳಿಸಿ, ಗೆಲುವು ಪಡೆದರು. ಇದರೊಂದಿಗೆ ಮಹಿಳೆಯರ ಸಿಂಗಲ್ಸ್​ ವಿಭಾಗದಲ್ಲಿ ಕ್ವಾರ್ಟರ್​ ಫೈನಲ್ಸ್​ಗೆ ತಲುಪಿರುವ ಸಿಂಧು, ಇಂದು ರೌಂಡ್​ ಆಫ್ 16 ಪಂದ್ಯಗಳನ್ನು ಆಡಲಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಇಂದು ಏನೇನು ಕ್ರೀಡಾಸ್ಪರ್ಧೆ, ಪದಕ ನಿರೀಕ್ಷೆ?

ಮಹಿಳೆಯರ ಶೂಟಿಂಗ್​: 25ಮೀ ಪಿಸ್ತೋಲ್ ಕ್ವಾಲಿಫಿಕೇಷನ್ ಪ್ರಿಸಿಷನ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ 292 ಅಂಕಗಳೊಂದಿಗೆ 5ನೇ ರಾಂಕ್​ನಲ್ಲಿದ್ದಾರೆ. ಸರ್ನೋಬತ್ ರಾಹಿ ಅವರು 287 ಅಂಕಗಳೊಂದಿಗೆ 25ನೇ ರಾಂಕ್​ನಲ್ಲಿದ್ದಾರೆ. ರಾಪಿಡ್ ಫೈರ್​ ಹಂತದ ಸ್ಪರ್ಧೆಗಳು ನಾಳೆ ನಡೆಯಲಿದ್ದು, ಇದರಲ್ಲಿ ಟಾಪ್ 8 ಆಟಗಾರರು ಫೈನಲ್ಸ್​ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತಿಳಿಸಿದೆ. (ಏಜೆನ್ಸೀಸ್)

ಶರೀರಕ್ಕೆ ಮೃದುವಾದ ವ್ಯಾಯಾಮ ನೀಡುವ ಸುಲಭ ಆಸನವಿದು!

ಪೊಲೀಸ್ ಠಾಣೆ ಬಳಿಯೇ ರೌಡಿ ಮೇಲೆ ಹಲ್ಲೆ; ಹಾಡುಹಗಲೇ ಭೀಕರ ಕೊಲೆ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top