ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!

ಪಾನ್​ ಮಸಾಲ ಜಾಹೀರಾತಿನ ಹಣ ಹಿಂತಿರುಗಿಸಿದ ಅಮಿತಾಭ್​ ಬಚ್ಚನ್​!

ವಿಜಯವಾಣಿ

ವಿಜಯವಾಣಿ

1639d

Loading...

ಮುಂಬೈ: ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್, ತಮ್ಮ ಜನ್ಮದಿನದ ಸಂದರ್ಭಕ್ಕೆ ಜನರಿಗೆ ಒಂದು ಉಡುಗೊರೆ ನೀಡಿದ್ದಾರೆ. ಪಾನ್​ ಮಸಾಲಾ ಬ್ರ್ಯಾಂಡ್​ನ ಜಾಹೀರಾತುಗಳಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿರುವ ಬಚ್ಚನ್​, ತನ್ಮೂಲಕ ತಂಬಾಕು ವಿರೋಧಿ ಸಂಘಟನೆಗಳ ಮನವಿಗೆ ಮಾನ್ಯತೆ ನೀಡಿದ್ದಾರೆ.

ಇತ್ತೀಚೆಗೆ ಕಮಲಾ ಪಸಂದ್​ ಪಾನ್​ ಮಸಾಲಾದ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಬಿಗ್​ ಬಿಗೆ ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆಯೊಂದು ಆ ಜಾಹೀರಾತಿನಿಂದ ಹೊರಬರುವಂತೆ ಆಗ್ರಹಿಸಿ ಪತ್ರ ಬರೆದಿತ್ತು. ಪಾನ್​ ಮಸಾಲಾದಿಂದ ಜನರ ಆರೋಗ್ಯಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಸರ್ಕಾರದ ಪಲ್ಸ್​ ಪೋಲಿಯೋ ಅಭಿಯಾನದ ರಾಯಭಾರಿಯಾದ ಬಚ್ಚನ್ ಈ ತೆರನ ಜಾಹೀರಾತು ಮಾಡಬಾರದು ಎಂದಿತ್ತು. ಬಚ್ಚನ್​ರ ಹಲವು ಅಭಿಮಾನಿಗಳೂ ಸಾಮಾಜಿಕ ಮಾಧ್ಯಮದಲ್ಲಿ ಪಾನ್​ ಮಸಾಲಾ ಜಾಹೀರಾತಿನಲ್ಲಿ ಭಾಗವಹಿಸಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಶಾರುಖ್​ ಪುತ್ರನ​ ಜಾಮೀನು ಅರ್ಜಿ ವಿಚಾರಣೆ ಮುಂದಕ್ಕೆ

ಈ ಹಿನ್ನೆಲೆಯಲ್ಲಿ ಕಳೆದ ವಾರ ಬಚ್ಚನ್​, ಪಾನ್​ ಮಸಾಲಾ ಕಂಪೆನಿಯೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಅಂತ್ಯಗೊಳಿಸಿದ್ದು, ಅವರು ಜಾಹೀರಾತಿಗಾಗಿ ನೀಡಿದ ಹಣವನ್ನು ಹಿಂತಿರುಗಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪಾನ್​ ಮಸಾಲಾ ಜಾಹೀರಾತು 'ಸರ್ರೊಗೇಟ್​ ಅಡ್ವರ್ಟೈಸಿಂಗ್​' ಅಂದರೆ ನಿಷೇಧಿತ ವಸ್ತುಗಳ ಪ್ರಚಾರ ಮಾಡಿದಂತೆ ಎಂಬುದು ತಮಗೆ ಗೊತ್ತಿರಲಿಲ್ಲ ಎಂದು ಬಚ್ಚನ್ ಹೇಳಿದ್ದಾರೆ.

ನ್ಯಾಷನಲ್ ಆರ್ಗನೈಸೇಷನ್ ಫಾರ್ ಟೊಬಾಕೊ ಎರಾಡಿಕೇಷನ್​(NOTE)ನ ಅಧ್ಯಕ್ಷರಾಗಿರುವ ಕ್ಯಾನ್ಸರ್​ ತಜ್ಞ ಡಾ. ಶೇಖರ್ ಸಲ್ಕಾರ್​, 'ಬಚ್ಚನ್​​ ಅವರು ಯೂತ್​ ಐಕಾನ್​ ಆಗಿದ್ದು, ಅವರ ಈ ಹೆಜ್ಜೆ ಯುವ ಜನಾಂಗದ ಮನಃಪರಿವರ್ತನೆಗೆ ಸಹಾಯಕವಾಗುತ್ತದೆ' ಎಂದಿದ್ದಾರೆ. ಇದು ಅವರ 80ನೇ ಹುಟ್ಟಿದಹಬ್ಬಕ್ಕೆ ಅವರು ಕೊಡುತ್ತಿರುವ 'ರಿಟರ್ನ್​ ಗಿಫ್ಟ್' ಎಂದಿದ್ದಾರೆ. (ಏಜೆನ್ಸೀಸ್)

ಇಬ್ಬರು ಉಗ್ರವಾದಿಗಳನ್ನು ಸದೆಬಡಿದ ಜಮ್ಮು ಕಾಶ್ಮೀರ ಪೊಲೀಸರು

ಆಮ್‌ ಆದ್ಮಿ ಪಾರ್ಟಿಗೆ ವಕೀಲ ಜಗದೀಶ್ ಸೇರ್ಪಡೆ

Your Reaction?

6
5
1
Dailyhunt
Disclaimer: This content has not been generated, created or edited by Dailyhunt. Publisher: Vijayvani