ಕಲಬುರಗಿ:ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ತಮ್ಮ ಬದಲಿಗೆ ಮಕ್ಕಳಿಗೆ ಪಾಠ ಮಾಡುವಂತೆ ಇನ್ನೊಬ್ಬ ಶಿಕ್ಷಕಿಗೆ ಹೇಳಿದ ಅಪರೂಪದ ಘಟನೆ ಕಲಬುರಗಿಯ ವಾಡಿ ಸಮೀಪದ ಬಾಳಿನಾಯ್ಕ ತಾಂಡಾದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಹೌದು, ಮೂಲಗಳ ಪ್ರಕಾರ ಶಿಕ್ಷಕ ಮಹೇಂದ್ರ ಕುಮಾರ್ ವಾರಕ್ಕೆ ಎರಡು ದಿನ ಮಾತ್ರ ಶಾಲೆಗೆ ತೆರಳಿ, ಹಾಜರಾತಿ ನೋಂದಣಿಗೆ ಸಹಿ ಹಾಕಿ ಹೋಗುತ್ತಿದ್ದರು.
ಈ ಕುರಿತು ಪ್ರತಿಕ್ರಯಿಸಿರುವ ಕಲಬುರಗಿ ಡಿಡಿಪಿಐ ಶೇಖರಪ್ಪಗೌಡ ಬಿರಾದಾರ್, ಶಿಕ್ಷಕರು ತಮ್ಮ ಬದಲಿಗೆ ಬೇರೆಯವರನ್ನು ನೇಮಿಸುವುದು ಅಪರಾಧ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ ಮಹೇಂದ್ರ ಕುಮಾರ್, ಅನಾರೋಗ್ಯದ ಕಾರಣದಿಂದ ನಾನು ದೀರ್ಘ ರಜೆಯಲ್ಲಿದ್ದೆ. ಆದ್ದರಿಂದ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕಿಯನ್ನು ನೇಮಿಸಿದೆ. ಮುಂದೆ ಶಾಲೆಗೆ ಗೈರಾಗುವುದಿಲ್ಲ ಎಂದಿದ್ದಾರೆ. ಆದರೆ ಶಿಕ್ಷಕ ಮಹೇಂದ್ರ ಕುಮಾರ್‌ಗೆ ಕಾರಣ ಕೇಳಿ ಡಿಡಿಪಿಐ ನೋಟಿಸ್ ಜಾರಿ ಮಾಡಿದೆ.
ಚಾಮರಾಜನಗರದಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡಿದ ಕಿಚ್ಚನ ಅಭಿಮಾನಿಗಳು; ಫ್ಯಾನ್ಸ್ ಕೊಟ್ಟ ಎಚ್ಚರಿಕೆ ಏನು?

