ಕಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಂಢಾಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಲ್ಕತ್ತಾ ನೈಟ್ರೈಡರ್ಸ್ ತಂಡವು ಸನ್ಸೈಸರ್ಸ್ ಹೈದರಾಬಾದ್ ವಿರುದ್ಧ 5ರನ್ಗಳ ರೋಷಕ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಆಯಂಡ್ರೆ ರಸೆಲ್ ಸ್ಪೋಟಕ ಬ್ಯಾಟಿಂಗ್ ಕಲ್ಕತ್ತಾ ಅಭಿಮಾನಿಗಳನ್ನು ಸಂತೋಷಪಡಿಸಿದ್ದಲ್ಲದೆ, ತಂಡದ ಮಾಲೀಕ ಮತ್ತು ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರ ಹೃದಯವನ್ನೂ ಗೆದ್ದಿತು.
ಕಲ್ಕತ್ತಾ ನೈಟ್ರೈಡರ್ಸ್ ಸಹ ಮಾಲೀಕರಾದ ನಟ ಶಾರುಖ್ ಖಾನ್ ಮೊದಲ ಪಂದ್ಯದಲ್ಲಿ ತಂಡವನ್ನು ಬೆಂಬಲಿಸಲು ಮೈದಾನದಲ್ಲಿ ಹಾಜರಿದ್ದರು. ಶಾರುಖ್ ಅವರನ್ನು ನೋಡಿ ಅಭಿಮಾನಿಗಳು ಘೋಷಣೆಗಳನ್ನು ಕೂಗಲು ಆರಂಭಿಸಿದರೆ, ಶಾರುಖ್ ಕೂಡ ಫ್ಯಾನ್ಸ್ ಮೇಲೆ ಪ್ರೀತಿಯ ಸುರಿಮಳೆಗೈದು ಕೈಕುಲುಕುತ್ತಲೇ ಫ್ಲೈಯಿಂಗ್ ಕಿಸ್ ನೀಡಿದರು. ಆದರೆ ಈ ಮಧ್ಯೆ ಅವರು ಸಿಗರೇಟ್ ಸೇದುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನಿಂಗ್ಸ್ ಸಮಯದಲ್ಲಿ, ಶಾರುಖ್ ಕ್ರೀಡಾಂಗಣದ ಕಾರ್ಪೊರೇಟ್ ಬಾಕ್ಸ್‌ನಲ್ಲಿ ಕುಳಿತು ಪಂದ್ಯವನ್ನು ಆನಂದಿಸುತ್ತಿದ್ದರು. ಈ ಸಮಯದಲ್ಲಿ ಅವರು ಧೂಮಪಾನ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಧೂಮಪಾನ ಚಟದಿಂದ ಸದಾ ಸುದ್ದಿಯಲ್ಲಿರುವ ಶಾರುಖ್ ಖಾನ್ ಕ್ರಿಕೆಟ್ ಪಂದ್ಯದ ಮಧ್ಯೆ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲೂ ಹೀಗೆ ಮಾಡಿರುವುದು ನೆಟ್ಟಿಗರನ್ನು ಕೆರಳಿಸಿದೆ.
ಇದೇ ಮೊದಲಲ್ಲ
ಶಾರುಖ್ ಐಪಿಎಲ್ ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. ಈ ಹಿಂದೆ 2012ರ ಸೀಸನ್‌ನಲ್ಲಿಯೂ ಅವರು ಸ್ಟೇಡಿಯಂನಲ್ಲಿ ಸಿಗರೇಟ್ ಸೇದುತ್ತಿದ್ದ ದೃಶ್ಯ ಕಂಡು ಬಂದಿತ್ತು. ಆಗ ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಶಾರುಖ್ ಸಿಗರೇಟ್ ಸೇದಿದ್ದರು. ಈ ಸಂಬಂಧ ಜೈಪುರದ ಸ್ಥಳೀಯ ನ್ಯಾಯಾಲಯದಲ್ಲಿ ಅವರ ವಿರುದ್ಧ ಪ್ರಕರಣವೂ ದಾಖಲಾಗಿತ್ತು. ಇದಲ್ಲದೇ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮೈದಾನದ ಸಿಬ್ಬಂದಿಯ ಜತೆಗಿನ ಗಲಾಟೆಯಿಂದ ಹಲವು ವರ್ಷಗಳ ಕಾಲ ಕ್ರೀಡಾಂಗಣಕ್ಕೆ ಬರದಂತೆ ನಿರ್ಬಂಧ ಹೇರಲಾಗಿತ್ತು.
ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಆರು ಮಂದಿ ಸಾವು, ಓರ್ವ ಚಿಂತಾಜನಕ
ರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಮೂನ್ಸೂಚನೆ
ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಆರು ಮಂದಿ ಸಾವು, ಓರ್ವ ಚಿಂತಾಜನಕರಾಜ್ಯದ 7ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಮೂನ್ಸೂಚನೆ
