Dailyhunt Logo
  • Light mode
    Follow system
    Dark mode
    • Play Story
    • App Story
ಪೆಟ್ರೋಲ್​-ಡೀಸೆಲ್​ ದರದಲ್ಲಿ ಅಲ್ಪ ವ್ಯತ್ಯಾಸ; ಯಾವ ರಾಜ್ಯದಲ್ಲಿ ದರ ಎಷ್ಟಿದೆ?

ಪೆಟ್ರೋಲ್​-ಡೀಸೆಲ್​ ದರದಲ್ಲಿ ಅಲ್ಪ ವ್ಯತ್ಯಾಸ; ಯಾವ ರಾಜ್ಯದಲ್ಲಿ ದರ ಎಷ್ಟಿದೆ?

ಬೆಂಗಳೂರು: ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ನಿರಂತರವಾಗಿ ಏರಿಕೆಯಾಗತೊಡಗಿದ್ದು ಶನಿವಾರ (ಮಾರ್ಚ್ 30) ಮತ್ತಷ್ಟು ಜಿಗಿತ ಕಂಡಿದೆ. ತೈಲ ಬೆಲೆ ಏರಿಕೆಯು ಪೆಟ್ರೋಲ್‌-ಡೀಸೆಲ್, ಎಲ್‌ಪಿಜಿ, ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ.

2017ರ ಜೂನ್​ನಲ್ಲಿ ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್‌ಗೆ ದೈನಂದಿನ ಬೆಲೆ ಪರಿಷ್ಕರಣೆ ಕಾರ್ಯವಿಧಾನವನ್ನು ಜಾರಿಗೆ ತಂದಿತು. ಅಂದಿನಿಂದ ತೈಲ ಮಾರುಕಟ್ಟೆ ಕಂಪನಿಗಳು ಪ್ರತಿದಿನ ಬೆಳಿಗ್ಗೆ ದರಗಳನ್ನು ಪರಿಷ್ಕರಿಸುತ್ತಿವೆ. ಸರ್ಕಾರಿ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಯನ್ನು ದೇಶದ ಎಲ್ಲಾ ನಗರಗಳಲ್ಲಿ 30 ಮಾರ್ಚ್ 2024 ರಂದು (ಶನಿವಾರ) ಬೆಳಿಗ್ಗೆ 6 ಗಂಟೆಗೆ ಬಿಡುಗಡೆ ಮಾಡಿವೆ. ಅಂತೆಯೇ ಶನಿವಾರ ಇಂಧನ ದರ ಬಿಡುಗಡೆಯಾಗಿದ್ದು, ಬೆಲೆ ಇಲ್ಲಿದೆ..

ಬೆಂಗಳೂರು ಜಲಕ್ಷಾಮ; ಕನ್ನಡದಲ್ಲಿಯೇ ಟ್ವೀಟ್​ ಮಾಡಿ ಪರಿಹಾರ ತಿಳಿಸಿದ ಮೆಗಾಸ್ಟಾರ್​

ಬೆಂಗಳೂರಿನಲ್ಲಿ ಪೆಟ್ರೋಲ್​ ಬೆಲೆಯಲ್ಲಿ ಯಾವುದೇ ಏರಿಳಿತ ಕಂಡು ಬಂದಿಲ್ಲ. ಶುಕ್ರವಾರ (ಮಾರ್ಚ್​ 29) ರಂದು ಇದ್ದ ಬೆಲಯೇ ಶನಿವಾರವೂ ಮುಂದುವರೆದಿದೆ. ಇಂದು (ಶನಿವಾರ ಮಾರ್ಚ್​​.30) ರಂದು ಬೆಂಗಳೂರಿನಲ್ಲಿ ಪೆಟ್ರೋಲ್​​ ಬೆಲೆ ಪ್ರತಿ ಲೀಟರ್‌ಗೆ 99.84 ರೂ. ಇದೆ. ಇನ್ನು ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಪೆಟ್ರೋಲ್ ಬೆಲೆ 0.05 ರಷ್ಟು ಮಾತ್ರ ಏರಿಳಿತ ಕಂಡಿದೆ. ಇನ್ನು ಡೀಸೆಲ್​ ದರ ಶುಕ್ರವಾರಕ್ಕಿಂತ ಕೊಂಚ ಏರಿಕೆ ಕಂಡಿದೆ. ಇಂದು 85.98 ರೂ. ಡೀಸೆಲ್​ ದರ ಇದೆ. ಶುಕ್ರವಾರಕ್ಕಿಂತ 0.05 ರೂ. ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 94.72 ರೂ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 87.62 ರೂ., ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 104.21 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.15 ರೂ., ಕಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 103.94 ರೂ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 90.76 ರೂ., ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.75 ರೂ. ಮತ್ತು ಡೀಸೆಲ್ ಬೆಲೆ ಲೀಟರ್‌ಗೆ 92.34 ರೂ. ಆಗಿದೆ.

ಸೋಲಿನ ನಡುವೆಯೂ ದಿಗ್ಗಜರ ದಾಖಲೆ ಮುರಿದ ವಿರಾಟ್​ ಕೊಹ್ಲಿ

ಸಹೋದರಿ ಮದುವೆಗೆ ಕೆಲವು ದಿನಗಳು ಬಾಕಿ ಇರುವಾಗ Zomato ಐಡಿ ಬ್ಲಾಕ್​; ಕಂಪನಿ ಕೊಟ್ಟ ಸ್ಪಷ್ಟನೆ ಹೀಗಿದೆ

ಸೋಲಿನ ನಡುವೆಯೂ ದಿಗ್ಗಜರ ದಾಖಲೆ ಮುರಿದ ವಿರಾಟ್​ ಕೊಹ್ಲಿ
Dailyhunt
Disclaimer: This content has not been generated, created or edited by Dailyhunt. Publisher: Vijayvani