Dailyhunt Logo
  • Light mode
    Follow system
    Dark mode
    • Play Story
    • App Story
ಪ್ಲಾಸ್ಟಿಕ್​ಮುಕ್ತ ಪರಿಸರಕ್ಕೆ ಕೈಜೋಡಿಸಿ

ಪ್ಲಾಸ್ಟಿಕ್​ಮುಕ್ತ ಪರಿಸರಕ್ಕೆ ಕೈಜೋಡಿಸಿ

ರಾದ್​: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಏಕಬಳಕೆ ಪ್ಲಾಸ್ಟಿಕ್​ ಬಳಕೆ ಸಂಪೂರ್ಣ ತ್ಯಜಿಸಬೇಕು. ಸ್ವಚ್ಛ ಮತ್ತು ಪ್ಲಾಸ್ಟಿಕ್​ಮುಕ್ತ ಗ್ರಾಮ ನಿಮಾರ್ಣಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ ಪಾಟೀಲ್​ ಹೇಳಿದರು.
ಹೊಕ್ರಾಣ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್​ಮುಕ್ತ ಗ್ರಾಮ ಅಭಿಯಾನ ಜಾಗೃತಿ ಜಾಥಾದಲ್ಲಿ ಮಾತನಾಡಿ, ಪ್ಲಾಸ್ಟಿಕ್​ ತ್ಯಾಜ್ಯದಿಂದ ಪರಿಸರ ಮತ್ತು ಜೀವಸಂಕುಲಕ್ಕೆ ಉಂಟಾಗುವ ದುಷ್ಪರಿಣಾಮ ಕುರಿತು ಅರಿತುಕೊಳ್ಳಬೇಕು. ಜನರು ಪರಿಸರಸ್ನೇಹಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂದರು. ಪಿಡಿಒಗಳಾದ ಕೃಷ್ಣಪ್ಪ, ರಮೇಶ್​, ತಾಪಂ ಐಇಸಿ ಸಂಯೋಜಕ ಅಂಬಾದಾಸ ಪಾಟೀಲ್​ ಇತರರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani