ಲಾಹೋರ್: ಪಾಕಿಸ್ತಾನ್ ಸೂಪರ್ ಲೀಗ್ (PSL 2026)ರ ಕಣದಲ್ಲಿ ಈಗ ಕ್ರಿಕೆಟ್ ಅಬ್ಬರಕ್ಕಿಂತ ಹೆಚ್ಚಾಗಿ ಆಟಗಾರರ ಉಡುಪಿನದ್ದೇ ಚರ್ಚೆ ನಡೆಯುತ್ತಿದೆ. ಪೆಶಾವರ್ ಝಲ್ಮಿ (Peshawar Zalmi) ತಂಡದ ಆಟಗಾರರು ಧರಿಸಿದ್ದ ಹೊಸ ಮಾದರಿಯ ಸಮವಸ್ತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಗುರಿಯಾಗಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್‌ಗಳ ಮೂಲಕ ಕಾಲೆಳೆಯುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಟ್ರೋಲ್!
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಮಿಂಚಿನ ವೇಗದಲ್ಲಿ ಟ್ರೋಲ್ ಮಾಡಲು ಶುರು ಮಾಡಿದ್ದಾರೆ. "ಹೋಟೆಲ್‌ನಲ್ಲಿ ಊಟ ಸರ್ವ್ ಮಾಡಲು ಪೆಶಾವರ್ ವೇಯ್ಟರ್‌ಗಳು ರೆಡಿಯಾಗಿದ್ದಾರೆ" ಎಂದು ಒಬ್ಬರು ವ್ಯಂಗ್ಯವಾಡಿದ್ದರೆ,ಮತ್ತೊಬ್ಬರು "ಪೆಶಾವರ್ ಝಲ್ಮಿ ತಂಡಕ್ಕೆ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಇರಲು ಹಣವಿಲ್ಲವೇ? ಅದಕ್ಕೇ ಆಟಗಾರರೇ ವೇಯ್ಟರ್ ಕೆಲಸ ಮಾಡುತ್ತಿದ್ದಾರೆಯೇ?" ಎಂದು ಕಾಲೆಳೆದಿದ್ದಾರೆ. ಒಟ್ಟಾರೆಯಾಗಿ ತಂಡದ ಈ 'ನ್ಯೂ ಲುಕ್' ಫ್ಯಾಷನ್ ಪ್ರಯೋಗದ ಬದಲು ಹಾಸ್ಯದ ವಸ್ತುವಾಗಿ ಪರಿಣಮಿಸಿದೆ. ಮೈದಾನದಲ್ಲಿ ಪೆಶಾವರ್ ಝಲ್ಮಿ ಅಬ್ಬರ!ಟೀಕೆ ಮತ್ತು ಟ್ರೋಲ್‌ಗಳು ಒಂದು ಕಡೆಯಿದ್ದರೆ, ಮೈದಾನದಲ್ಲಿ ಮಾತ್ರ ಪೆಶಾವರ್ ಝಲ್ಮಿ ತಂಡ ಭರ್ಜರಿ ಪ್ರದರ್ಶನ ನೀಡುತ್ತಿದೆ. ಪಿಎಸ್‌ಎಲ್ ಸೀಸನ್ 11ರ ಆರಂಭಿಕ ಪಂದ್ಯದಲ್ಲೇ ರಾವಲ್ಪಿಂಡಿ ಪೀಂಡೀಸ್ ವಿರುದ್ಧ 215 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿ ದಾಖಲೆಯ ಜಯ ಸಾಧಿಸಿದೆ. ಇದು ಪಿಎಸ್‌ಎಲ್ ಇತಿಹಾಸದಲ್ಲೇ ಪೆಶಾವರ್ ತಂಡದ ಗರಿಷ್ಠ ರನ್ ಚೇಸಿಂಗ್ ಆಗಿದೆ. ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ತಂಡವು ಸದ್ಯ ಅಂಕಪಟ್ಟಿಯಲ್ಲಿ ಭದ್ರ ಸ್ಥಾನ ಹೊಂದಿದೆ. ಆದರೆ, ಮೈದಾನದ ಪ್ರದರ್ಶನಕ್ಕಿಂತ ಹೆಚ್ಚಾಗಿ ಈ 'ವೇಯ್ಟರ್ ಲುಕ್' ವಿಡಿಯೋ ಮಾತ್ರ ಅಂತರ್ಜಾಲದಲ್ಲಿ ಸಖತ್ ಸೌಂಡ್ ಮಾಡುತ್ತಿದೆ,(ಏಜೆನ್ಸೀಸ್).
ಇನ್ನಷ್ಟು ಓದಿ

