Thursday, 21 Jan, 11.51 pm ವಿಜಯವಾಣಿ

ಮುಖಪುಟ
ರಾಬಿನ್ ಉತ್ತಪ್ಪ ಮುಂದಿನ ಐಪಿಎಲ್‌ನಲ್ಲಿ ಆಡುತ್ತಿರುವ ತಂಡ ಯಾವುದು ಗೊತ್ತೇ..?

ನವದೆಹಲಿ: ಅನುಭವಿ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಮುಂಬರುವ 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. 35 ವರ್ಷದ ಕರ್ನಾಟಕದ ರಾಬಿನ್ ಉತ್ತಪ್ಪ ರಾಜಸ್ಥಾನ ರಾಯಲ್ಸ್ ತಂಡದಿಂದ ಸಿಎಸ್‌ಕೆ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ. ಕಳೆದ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಉತ್ತಪ್ಪ ಈ ಬಾರಿ ಸಿಎಸ್‌ಕೆ ಪರ ಆಡಲಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ರಾಜಸ್ಥಾನ ಪ್ರಕಟಣೆಯಲ್ಲಿ ತಿಳಿಸಿದೆ. ಯುಎಇಯಲ್ಲಿ ನಡೆದ 13ನೇ ಐಪಿಎಲ್‌ನಲ್ಲಿ ಉತ್ತಪ್ಪ ರಾಯಲ್ಸ್ ಪರ ಆಡಿದ 12 ಪಂದ್ಯಗಳಿಂದ ಕೇವಲ 196 ರನ್ ಗಳಿಸಿದ್ದರು.

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ, ಎಂಟರಘಟ್ಟಕ್ಕೇರಿದ ಪಿವಿ ಸಿಂಧು, ಸಮೀರ್ ವರ್ಮ,

'ರಾಯಲ್ಸ್ ಪರ ಉತ್ತಮ ದಿನಗಳನ್ನು ಕಳೆದಿದ್ದೇನೆ, ಮುಂದಿನ ಬಾರಿ ಸಿಎಸ್‌ಕೆ ಪರ ಆಡಲು ಉತ್ಸುಕನಾಗಿದ್ದೇನೆ' ಎಂದು ಉತ್ತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಿಎಸ್‌ಕೆ ತಂಡ ಉತ್ತಪ್ಪ ಪಾಲಿಗೆ 6ನೇ ಐಪಿಎಲ್ ಫ್ರಾಂಚೈಸಿಯಾಗಿದೆ. 2008ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಉತ್ತಪ್ಪ ಬಳಿಕ 2009 ಹಾಗೂ 2010ರಲ್ಲಿ ಆರ್‌ಸಿಬಿ ಪ್ರತಿನಿಧಿಸಿದ್ದರು. ಬಳಿಕ 2011, 2012, 2013ರಲ್ಲಿ ಪುಣೆ ವಾರಿಯರ್ಸ್‌, ಬಳಿಕ 2014 ರಿಂದ 2019ರವರೆಗೆ ಕೋಲ್ಕತ ನೈಟ್ ರೈಡರ್ಸ್‌ ಪರ ಆಡಿದ್ದರು. ಐಪಿಎಲ್‌ನಲ್ಲಿ 189 ಪಂದ್ಯಗಳಿಂದ 4607 ರನ್ ಬಾರಿಸಿದ್ದಾರೆ.

VIDEO: ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿ ತವರಿಗೆ ಮರಳಿದ ಅಜಿಂಕ್ಯ ರಹಾನೆಗೆ ಅದ್ದೂರಿ ಸ್ವಾಗತ..,

ರಾಜಸ್ಥಾನ ರಾಯಲ್ಸ್ ತಂಡ ಭಾರಿ ಬದಲಾವಣೆಯೊಂದಿಗೆ 14ನೇ ಐಪಿಎಲ್‌ಗೆ ಸಿದ್ಧಗೊಳ್ಳುತ್ತಿದೆ. ಬುಧವಾರವಷ್ಟೇ ನಾಯಕ ಸ್ಟೀವನ್ ಸ್ಮಿತ್ ಅವರನ್ನೇ ತಂಡದಿಂದ ಬಿಡುಗಡೆ ಮಾಡಿತ್ತು. ಜತೆಗೆ ಕೇರಳ ಸಂಜು ಸ್ಯಾಮ್ಸನ್ ಅವರನ್ನು ನೂತನ ನಾಯಕನಾಗಿ ನೇಮಿಸಿ, ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ ಅವರನ್ನು ತಂಡದ ನಿರ್ದೇಶಕರಾಗಿ ನೇಮಿಸಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top