ಬೆಂಗಳೂರು: 'ಕಳೆದ ಒಂದು ವರ್ಷದಿಂದ ನಟಿ ರಾಗಿಣಿ ದ್ವಿವೇದಿ ಮತ್ತು ಆವರ ಗೆಳೆಯ ರವಿಶಂಕರ್ಗೆ ಕೊಕೇನ್ ಪೂರೈಕೆ ಮಾಡಿದ್ದೀನಿ… ನಾನು ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಬೇರೆ ಬೇರೆ ಜಾಗಗಳಲ್ಲಿ ಅಡಗಿಸಿ ಇಟ್ಟಿದ್ದೀನಿ. ಅವುಗಳನ್ನು ತೋರಿಸ್ತೀನಿ…'
ಹೀಗೆಂದು ಇತ್ತೀಚೆಗೆ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಸಾಂಬಾ ಹೇಳಿದ್ದಾನೆ.
ಲೂಮ್ ಪೆಪ್ಪರ್ದಕ್ಷಿಣ ಆಫ್ರಿಕಾ ಮೂಲದ ಈತ, ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್. 2018ರಲ್ಲಿ ಸ್ಟಡಿ ವೀಸಾದಡಿ ಬೆಂಗಳೂರಿಗೆ ಬಂದಿದ್ದು, ವೀಸಾ ಅವಧಿಮುಗಿದರೂ ಇಲ್ಲೇ ಅಕ್ರಮವಾಗಿ ನೆಲೆಸಿದ್ದಲ್ಲೇ ಡ್ರಗ್ಸ್ ದಂಧೆ ನಡೆಸುತ್ತಿದ್ದ. ಬಂಧನಕ್ಕೊಳಪಟ್ಟ ಆರಂಭದಲ್ಲಿ 'ತನಗೆ ಆಫ್ರಿಕನ್ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ' ಎಂದು ವಿಚಾರಣೆ ವೇಳೆ ತಗಾದೆ ತೆಗೆದಿದ್ದ.
'2018ರಲ್ಲಿ ಸ್ಟಡಿ ವೀಸಾದಡಿ ಬೆಂಗಳೂರಿಗೆ ಬಂದೆ. ನನ್ನ ವೀಸಾ ಅವಧಿ ಮುಗಿದಿದೆ. ನಾನು ಯಾವುದೇ ಕೆಲಸ ಮಾಡುತ್ತಿಲ್ಲ ಮತ್ತು
ವ್ಯಾಸಂಗ ಮಾಡ್ತಿಲ್ಲ. ನನ್ನ ದೇಶದ ಹಲವಾರು ಮಂದಿ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದಾರೆ. ಅವರು ಯಾರು ಅನ್ನೋದು ನನಗೆ ಗೊತ್ತಿದೆ' ಎಂದು ವಿಚಾರಣೆಯಲ್ಲಿ ಲೂಮ್ ಪೆಪ್ಪರ್ ಹೇಳಿದ್ದಾನೆ.
'ನಾನು ಗಾಂಜಾ ಮತ್ತಿತರ ಮಾದಕ ವಸ್ತುಗಳನ್ನು ಬೇರೆ ಬೇರೆ ಜಾಗಗಳಲ್ಲಿ ಅಡಗಿಸಿಟ್ಟಿದ್ದು, ಅದನ್ನು ತೋರಿಸುವೆ. 1 ಗ್ರಾಂ ಕೊಕೇನ್ ಅನ್ನು 6,000 ರೂಪಾಯಿಗೆ ಮಾರಾಟ ಮಾಡುತ್ತಿದ್ದೆ. ರಾಗಿಣಿ ಮತ್ತು ಅವರ ಗೆಳೆಯ ರವಿಶಂಕರ್ ಕೂಡ ನನ್ನ ಬಳಿಯೇ ಡ್ರಗ್ಸ್ ಪಡೆಯುತ್ತಿದ್ದರು' ಎಂದು ಬಾಯ್ಬಿಟ್ಟಿದ್ದಾನೆ. (ದಿಗ್ವಿಜಯ ನ್ಯೂಸ್)
ಸಿನಿ ತಾರೆಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದವನು ಇವನೇ ನೋಡಿ
'ಪ್ರಶಾಂತ್ ಸಂಬರಗಿ ನನ್ನ ಜತೆಗೂ ಪಾರ್ಟಿಗಳಿಗೆ ಬಂದಿದ್ದ, ಜತೆಗೊಬ್ಬ ನಟಿಯನ್ನೂ ಕರೆತರುತ್ತಿದ್ದ'

