ಕಲಬುರಗಿ: ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಾಂತ ಜನತಾ ಕರ್ಫ್ಯೂ ಜಾರಿಯಾಗಿದ್ದು, ಇಡೀ ರಾಜ್ಯ ಸ್ತಬ್ಧಗೊಂಡಂತೆ ಭಾಸವಾಗುತ್ತಿದೆ. ಸಾರಿಗೆ ಸಂಚಾರ ಬಂದ್ ಆಗಿದ್ದು, ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಆದರೂ ಕರೊನಾದಿಂದಾಗುತ್ತಿರುವ ಸಾವು-ನೋವಿನ ಪ್ರಮಾಣವೇನೂ ಕಡಿಮೆ ಆಗಿಲ್ಲ. ದಿನದದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಕರೊನಾ ಸೋಂಕಿನ ಚೈನ್ ಲಿಂಕ್ ಕತ್ತರಿಸಲು ಕಂಪ್ಲೀಟ್ ಲಾಕ್ಡೌನ್ ಒಂದೇ ಕೊನೆಯ ಅಸ್ತ್ರ ಎಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಮೂಲಗಳುಇ ತಿಳಿಸಿವೆ.
ಹಾಗಾಗಿ ಮೇ ಮೊದಲ ವಾರದಿಂದಲೇ ಕರ್ನಾಟಕದಲ್ಲಿ ಪೂರ್ಣ ಪ್ರಮಾಣದ ಲಾಕ್ಡೌನ್ ಜಾರಿ ಮಾಡಲಾಗುತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತು ಕಲಬುರಗಿಯಲ್ಲಿ ಶನಿವಾರ ಬೆಳಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಜನತಾ ಕರ್ಫ್ಯೂ ವಿಸ್ತರಣೆಯ ಸುಳಿವು ನೀಡಿದ್ದಾರೆ.
ಜನತಾ ಕರ್ಫ್ಯೂ ನಂತರವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಮಾಡುವ ಪ್ರಸ್ತಾವನೆ ಇಲ್ಲ. ಮಹಾರಾಷ್ಟ್ರದಲ್ಲಿ 44 ದಿನಗಳಿಂದ ಲಾಕ್ಡೌನ್ ಜಾರಿಯಲ್ಲಿದೆ. ಈಗ ನಿಧಾನವಾಗಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದರು. ಜನತಾ ಕರ್ಫ್ಯೂನ 14 ದಿನಗಳ ಕಾಲಾವಧಿ ಮುಗಿದ ಬಳಿಕ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದರು.
ತಡರಾತ್ರಿ ಹೊತ್ತಿ ಉರಿದ ಕೋವಿಡ್ ಆಸ್ಪತ್ರೆ, 16 ಮಂದಿ ಸಜೀವ ದಹನ
ಲಾಕ್ಡೌನ್ ಹಿನ್ನೆಲೆ ರಾತ್ರೋರಾತ್ರಿ ಸ್ವಗ್ರಾಮಕ್ಕೆ ಹೊರಟಿದ್ದವರ ಬಾಳಲ್ಲಿ ದುರಂತ! ಮಾರ್ಗಮಧ್ಯೆ ನಾಲ್ವರು ದುರ್ಮರಣ

