ಬೆಂಗಳೂರು: ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಹೆಚ್ಚುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊಸ ತಂತ್ರ ಹೂಡಿದ್ದಾರೆ. ರಾಜ್ಯದ ವಿವಿಧ ನಿಗಮಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಮೂಲಕ ತಮ್ಮ ಮೇಲಿದ್ದ ಹೊರೆಯನ್ನು ಕೊಂಚ ಮಟ್ಟಿಗೆ ಇಳಿಸಿಕೊಂಡಿದ್ದಾರೆ.
ವಿವಿಧ ನಿಗಮಗಳು ಮತ್ತು ಮಂಡಳಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿರುವವರ ಪಟ್ಟಿ ಇಂತಿದೆ
ಬಿ.ಎಸ್. ಪರಮಶಿವಯ್ಯ - ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
ಎಸ್.ಆರ್.ವಿಶ್ವನಾಥ - ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಚಂದು ಪಾಟೀಲ್ - ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಮಂಡಳಿ
ಬಿ.ಸಿ.ನಾಗೇಶ್ - ಕಾರ್ಮಿಕ ಕಲ್ಯಾಣ ಮಂಡಳಿ
ಬಿ.ಕೆ. ಮಂಜುನಾಥ್ - ನಾರು ಅಭಿವೃದ್ಧಿ ಮಂಡಳಿ
ಸವಿತಾ ವಿಶ್ವನಾಥ್ ಅಮರ್ ಶೆಟ್ಟಿ - ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
ಕಿರಣ್ ಕುಮಾರ್ - ಜೈವಿಕ ಇಂಧನ ಅಭಿವೃದ್ಧಿ ಮಂಡಳಿ
ತಾರಾ ಅನುರಾಧ - ಅರಣ್ಯ ಅಭಿವೃದ್ಧಿ ನಿಗಮ
ಎಸ್.ಆರ್.ಗೌಡ - ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ
ಕೆ.ವಿ. ನಾಗರಾಜ್ - ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ
ತಿಪ್ಪೇಸ್ವಾಮಿ - ಕಾಡಾ ನಿಗಮ
ರಘು ಆರ್ - ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
ಬಾಬು ಪತ್ತಾರ್ - ಕರ್ನಾಟಕ ರಾಜ್ಯ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ
ಜೆ.ಕೆ ಗಿರೀಶ್ ಉಪ್ಪಾರ್ - ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ
ಎಸ್ ನರೇಶ್ ಕುಮಾರ್ - ಸವಿತಾ ಸಮುದಾಯ ಅಭಿವೃದ್ಧಿ ನಿಗಮ
ತಮ್ಮೇಶ ಗೌಡ ಎಚ್.ಸಿ - ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
ದುರ್ಯೋಧನ ಮಹಲಿಂಗಪ್ಪ - ಡಾ.ಬಿ.ಆರ್.ಅಬೇಂಡ್ಕರ್ ನಿಗಮ ನಿಯಮಿತ
ಎಚ್.
ಎಂ ರಾಮಚಂದ್ರ - ಕೇಂದ್ರ ಪರಿಹಾರ ಸಮಿತಿ
ಸಿ. ಮುನಿಕೃಷ್ಣ - ಕರ್ನಾಟಕ ಆದಿ ಜಾಂಭವ ಅಭಿವೃದ್ಧಿ ನಿಗಮ
ಸಿದ್ದನಗೌಡ ಈರ್ಶವರಗೌಡ ಚಿಕ್ಕನಗೌಡ್ರು - ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ
ಲಿಂಗರೆಡ್ಡಿ ಬಿ.ಎನ್. ಗುರುಂಡಗೌಡ ಬಾಸರೆಟ್ಟಿ - ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ
ವಿಜುಗೌಡ ಎಸ್ ಪಾಟೀಲ್ - ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ
ಬಿಡಿಎ ಅಧ್ಯಕ್ಷರಾಗಿ ಶಾಸಕ ಎಸ್.ಆರ್. ವಿಶ್ವನಾಥ್ ನೇಮಕ
ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಬಿ.ಎಸ್. ಪರಮಶಿವಯ್ಯ ನೇಮಕ

