Eating Late Night: ಬದಲಾಗಿರುವ ಜೀವನ ಶೈಲಿಯಿಂದಾಗಿ ರಾತ್ರಿ ತಡವಾಗಿ ಊಟ ಮಾಡುವುದು ಇತ್ತೀಚಿನ ಕಾಲಘಟ್ಟದವರಿಗೆ ಅಭ್ಯಾಸವಾಗಿಬಿಟ್ಟಿದೆ. ಹಿರಿಯರು ತಮ್ಮದೇ ಕೆಲಸದಲ್ಲಿ ತಲ್ಲೀನರಾದ್ರೆ, ಮಕ್ಕಳು ಟಿವಿ ನೋಡುವುದರಲ್ಲಿ ಬ್ಯುಸಿ. ಊಟದ ಸೂಕ್ತ ಸಮಯವನ್ನೇ ಬದಿಗಿಟ್ಟು ಹಲವರು ತಡರಾತ್ರಿ 10 ಗಂಟೆಯ ಬಳಿಕ ಊಟ ತಿನ್ನುತ್ತಾರೆ.
ಅಸಲಿಗೆ, ಇದು ಸರಿಯಾದ ಆಹಾರ ಕ್ರಮವಲ್ಲ ಎನ್ನುತ್ತಾರೆ ವೈದ್ಯರು.
ಈ ಹಿಂದೆ ನಮ್ಮ ಹಿರಿಯರು ಕೆಲಸ, ನಿದ್ದೆ, ಆಹಾರದ ವಿಚಾರದಲ್ಲಿ ಶಿಸ್ತುಬದ್ಧ ಪಾಲನೆ ಮಾಡುತ್ತಿದ್ದರು. ಅದನ್ನೇ ನಾವೂ ಕೂಡ ಅನುಸರಿಸಬೇಕಿತ್ತು. ಆದರೆ, ಡಿಜಿಟಲ್ ಯುಗದಲ್ಲಿ ಬಹಳ ವೇಗವಾಗಿ ಓಡುತ್ತಿರುವ ಮಂದಿ, ಅದನ್ನೆಲ್ಲ ಮರೆತು ಹೋಗಿದ್ದಾರೆ. ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ, ರಾತ್ರಿ ಮಲಗುವ ಮೂರು ಗಂಟೆಗಳ ಮುನ್ನ ಆಹಾರ ಸೇವಿಸುವುದು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ ಮತ್ತು ಸಕ್ಕರೆ ಕಾಯಿಲೆಗಳಂತಹ ಸಮಸ್ಯೆಯಿಂದ ದೂರವಿಡುತ್ತದೆ ಎನ್ನಲಾಗಿದೆ.
ಈ ಹಿಂದೆ ನಮ್ಮ ಹಿರಿಯರು ಕೆಲಸ, ನಿದ್ದೆ, ಆಹಾರದ ವಿಚಾರದಲ್ಲಿ ಶಿಸ್ತುಬದ್ಧ ಪಾಲನೆ ಮಾಡುತ್ತಿದ್ದರು. ಅದನ್ನೇ ನಾವೂ ಕೂಡ ಅನುಸರಿಸಬೇಕಿತ್ತು. ಆದರೆ, ಡಿಜಿಟಲ್ ಯುಗದಲ್ಲಿ ಬಹಳ ವೇಗವಾಗಿ ಓಡುತ್ತಿರುವ ಮಂದಿ, ಅದನ್ನೆಲ್ಲ ಮರೆತು ಹೋಗಿದ್ದಾರೆ. ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ಸಂಶೋಧನೆ ಪ್ರಕಾರ, ರಾತ್ರಿ ಮಲಗುವ ಮೂರು ಗಂಟೆಗಳ ಮುನ್ನ ಆಹಾರ ಸೇವಿಸುವುದು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿ ಮತ್ತು ಸಕ್ಕರೆ ಕಾಯಿಲೆಗಳಂತಹ ಸಮಸ್ಯೆಯಿಂದ ದೂರವಿಡುತ್ತದೆ ಎನ್ನಲಾಗಿದೆ.
ರಾತ್ರಿ 10 ಗಂಟೆಯೊಳಗೆ ತಿನ್ನಬೇಕು ಏಕೆ?
ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಸಿರ್ಕಾಡಿಯನ್ ಎಂಬ ಅಂಶವೂ ಇರುತ್ತದೆ. ಇದು ದೇಹದಲ್ಲಿರುವ ಗಡಿಯಾರದಂತೆ ಕೆಲಸ ಮಾಡುತ್ತದೆ. ಇದು ದೇಹದ ವಿಶ್ರಾಂತಿ, ನಿದ್ದೆಯನ್ನು ನಿಯಂತ್ರಿಸುವ ಕೆಲಸ ಮಾಡುತ್ತದೆ. ರಾತ್ರಿ ದೇಹ ನಿದ್ರೆಗೆ ಜಾರುವಾಗ ಇನ್ನು ಊಟ ಮಾಡಿಲ್ಲ ಎಂದರೆ, ಅದು ದೇಹವನ್ನು ಎಚ್ಚರವಾಗಿರಿಸುವ ಕೆಲಸವನ್ನು ಮಾಡುತ್ತದೆ ಎಂಬುದು ಅಚ್ಚರಿಯ ಸಂಗತಿ. ತಡವಾಗಿ ಊಟ ಮಾಡುವುದರಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.ಸರಿಯಾದ ಸಮಯಕ್ಕೆ ತಿಂದರೆ ಏನೆಲ್ಲ ಪ್ರಯೋಜನ?
ಆಹಾರ ಸೇವಿಸಿದ ನಂತರ ಮೂರು ಗಂಟೆಯಾದರೂ ಜೀರ್ಣಕ್ರಿಯೆಗೆ ಸಮಯದ ಅಗತ್ಯವಿದೆ. ಈ ಸಂದರ್ಭದಲ್ಲಿ, ದೇಹಕ್ಕೆ ವಿಶ್ರಾಂತಿ ಮುಖ್ಯವಾಗಿರುವ ಹಿನ್ನೆಲೆ, ಸಂಜೆ 7 ಅಥವಾ ರಾತ್ರಿ 8 ಗಂಟೆಯ ಆಸುಪಾಸಿನಲ್ಲಿ ಆಹಾರ ಸೇವಿಸುವುದು ಉತ್ತಮ ಎಂದು ತಿಳಿದುಬಂದಿದೆ.ಮಧುಮೇಹ ನಿಯಂತ್ರಣಕ್ಕೆ ಸಹಕಾರಿ
ಸಮಯಕ್ಕೆ ಸರಿಯಾಗಿ ಊಟ ಸೇವಿಸದೆ ಹೋದರೆ, ರಕ್ತದಲ್ಲಿನ ಸಕ್ಕರೆ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಎಲ್ಲ ಸಾಧ್ಯತೆಯೂ ಇರಲಿದೆ. ಹೀಗಾಗಿ, ಡಯಬಿಟಿಕ್ ರೋಗಿಗಳು ಸರಿಯಾದ ಸಮಯಕ್ಕೆ ಆಹಾರ ಸೇವಿಸುವುದು ಬಹಳ ಮುಖ್ಯ.ಹಾರ್ಮೋನ್ ಏರುಪೇರು ನಿಯಂತ್ರಣ
ತಡವಾಗಿ ಊಟ ಮಾಡುವುದರಿಂದ ಮುಂಜಾನೆ ನಿತ್ರಾಣಗೊಂಡಂತಾಗುವುದು. ಯಾವುದೋ ವಿಚಾರಕ್ಕೆ ಕಿರಿಕಿರಿ, ತಲೆನೋವು ಸಮಸ್ಯೆಗಳು ಕಾಡಬಹುದು. ಹೀಗಾಗಿ, ಸರಿಯಾದ ಸಮಯಕ್ಕೆ ಆಹಾರ ಸೇವನೆ ಅಭ್ಯಾಸವೂ ಹಾರ್ಮೋನ್ ಏರುಪೇರಾಗುವುದನ್ನು ಹತೋಟಿಗೆ ತರುತ್ತದೆ. ಇದು ಹೃದಯದ ಆರೋಗ್ಯಕ್ಕೂ ಉತ್ತಮ ಎನ್ನಲಾಗಿದೆ.ಏನು ಬೇಡ, ಬೇಕು?
ತಡರಾತ್ರಿ ಕುರುಕಲು ತಿಂಡಿಗಳನ್ನು ಸೇವಿಸುವುದನ್ನು ಇಂದೇ ನಿಲ್ಲಿಸಿ. ನೀವು ರಾತ್ರಿ ಹತ್ತಕ್ಕೆ ನಿದ್ರೆಗೆ ಜಾರುತ್ತೀರಿ ಎಂದರೆ ಸಂಜೆ ಏಳು ಗಂಟೆಗೆ ಊಟ ಮಾಡಿಬಿಡಿ. ದಾಲ್, ಚಿಕನ್, ಪನೀರ್ನಂತಹ ಆಹಾರ ಸೇವಿಸುವುದು ಉತ್ತಮ. ಅಕಸ್ಮಾತ್ ತಡರಾತ್ರಿ ಹಸಿವಾದರೆ, ತುಳಸಿ ಟೀಯನ್ನು ಸೇವಿಸಬಹುದು. ಬೆಚ್ಚಗಿನ ನೀರು ಕುಡಿಯಬಹುದು,(ಏಜೆನ್ಸೀಸ್).ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಇನ್ನಷ್ಟು ಓದಿ

