ಈಗ ಸಾಮಾನ್ಯವಾಗಿರುವ ವಿಚಿತ್ರ ಕಾಯಿಲೆಗಳಿಂದ ದೂರವಾಗಿರಲು ನಿಯಮಿತ ಆಹಾರ ಸೇವನೆ, ವ್ಯಾಯಾಮ ಹಾಗೂ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದು ಸಹಕಾರಿಯಾಗುತ್ತದೆ ಎಂದರು.ಈಗಾಗಲೇ ನಾನು 11 ಬಾರಿ ರಕ್ತದಾನ ನೀಡಿದ್ದೇನೆ. ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡುತ್ತ ಬಂದಿದ್ದೇನೆ. ಮುಂದೆಯೂ ರಕ್ತದಾನ ಮಾಡುತ್ತೇನೆ. ಎಲ್ಲರೂ ರಕ್ತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಮನವಿ ಮಾಡಿದರು.ಅಪ್ಪು ಕಲಾಂ ಜೀ ಚಾರಿಟೆಬಲ್ ಟ್ರಸ್ಟ್ ಅಧ್ಯ ಮೊಹಮದ್ ಸಾದಿಕ್, ಕಸಾಪ ಮಾಜಿ ಅಧ್ಯ ಎಂ.ಆರ್.ರು, ಪತ್ರಕರ್ತ ಕೆ.ಎಸ್. ಹುಚ್ರಾಯಪ್ಪ, ಸಂಜೀವಿನಿ ರಕ್ತನಿಧಿ ಕೇಂದ್ರದ ಸಿಬ್ಬಂದಿ ಡಾ. ಮೊಹಿದ್ದೀನ್, ಪಿಆರ್ಒ ಲ$್ಮ, ಪೂಜಾ, ಆನಂದ್, ಸುರೇಶ್, ಅಪ್ಪು ಕಲಾಂ ಜೀ ಬಳಗದ ನವೀದ್, ರೋಷನ್, ತೌಸ್ೀ, ಹಸೀಬ್, ಅಬ್ದುಲ್ ಮುಂತಾದವರಿದ್ದರು.ನಾನು ಈಗಾಗಲೇ 120 ಬಾರಿ ರಕ್ತದಾನ ಮಾಡಿದ್ದೇನೆ. ಅತ್ಯಂತ ಆರೋಗ್ಯ ಹಾಗೂ ಲವಲವಿಕೆಯಿಂದ ಇದ್ದೇನೆ. ಇನ್ನೂ ಅನೇಕ ಬಾರಿ ದಾನ ಮಾಡುತ್ತೇನೆ. ರಕ್ತದಾನದಂತಹ ಪುಣ್ಯದ ಕಾರ್ಯದಲ್ಲಿ ಯುವಜನರು ಪಾಲ್ಗೊಳ್ಳಬೇಕು. ಇದೊಂದು ಸೇವೆ ಎಂದು ಪರಿಗಣಿಸಿದಾಗ ಮಾತ್ರ ರಕ್ತದಾನದ ಮಹತ್ವ ಹೆಚ್ಚುತ್ತದೆ. ಯುವಕರು ಹೆಚ್ಚು ಹೆಚ್ಚು ರಕ್ತದಾನ ಮಾಡುವ ಮೂಲಕ ಜೀವ ಉಳಿಸಲು ಸಹಕರಿಸಬೇಕು.> ಧರಣೇಂದ್ರ ದಿನಕರ್ಶಿವಮೊಗ್ಗದ ಸಂಜೀವಿನಿ ರಕ್ತ ನಿಧಿ ಕೇಂದ್ರದ ಮುಖ್ಯಸ್ಥ
ಇನ್ನಷ್ಟು ಓದಿ