ಇದರಿಂದ ಬೆಳಗ್ಗೆ 9.15 ರಿಂದ ಸಾಯಂಕಾಲ 5 30 ರವರೆಗೆ ಕಾರವಾರ ಟೌನ್, ಹಬ್ಬುವಾಡ, ಕೆಎಚ್‌ಬಿ ಕಾಲನಿ ಸೇರಿ ಹಲವೆಡೆ ವಿದ್ಯುತ್ ಕಡಿತ ಮಾಡಲಾಗಿತ್ತು. ವಿದ್ಯುತ್ ತಂತಿಗಳನ್ನು ತುಂಡರಿಸಿ ಹಾಕಲಾಗಿತ್ತು. ಮಾತ್ರವಲ್ಲ ಇಂಟರ್‌ನೆಟ್ ಕೇಬಲ್‌ಗಳನ್ನು ಹರಿದು ಹಾಕಲಾಗಿತ್ತು. ಇದರಿಂದ ಬ್ಯಾಂಕ್, ಕಚೇರಿಗಳ ಹಲವೆಡೆ ಕರ್ತವ್ಯ ನಿರ್ವಹಣೆಗೆ ತೀವ್ರ ಸಮಸ್ಯೆ ಉಂಟಾಯಿತು. ಅಂಗಡಿ ಕಾರರಿಗೆ ನಷ್ಟ ಉಂಟಾಯಿತು. ಭಾರಿ ಸೆಕೆ ಇರುವುದರಿಂದ ಫ್ಯಾನ್ ಇಲ್ಲದೇ ಜನ ಆಡಳಿತ ವರ್ಗಕ್ಕೆ ಹಿಡಿ ಶಾಪ ಹಾಕಿದರು. ಇನ್ನು ಬೃಹತ್ ವಾಹನ ಅತಿ ನಿಧಾನವಾಗಿ ತೆರಳುತ್ತಿರುವುದರಿಂದ ಹಬ್ಬುವಾಡ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಮದುವೆಗೆ ತೆರಳುವ ದಿಬ್ಬಣದ ವಾಹನಕ್ಕೂ ತೆರಳಲು ಜಾಗ ಸಿಗದೇ ಸಮಸ್ಯೆಯಾಯಿತು. ನಿರಂತರ 8.30 ಗಂಟೆಗಳ ಪ್ರಯಾಣದ ಬಳಿಕ ವಾಹನ ನಗರದ ಅಂತ್ಯ ತಲುಪಿದೆ. ಶಿರವಾಡ, ಕಿನ್ನರ, ಭಾಗದಲ್ಲಿ ಇನ್ನೂ ಇಕ್ಕಟ್ಟಾದ, ತಿರುವು, ಮುರುವಿನ ರಸ್ತೆಯಲ್ಲಿ ವಾಹನ ಸಂಚರಿಸಬೇಕಾಗಿದ್ದು, ಆ ಭಾಗದ ಜನರಿಗೆ ಹಲವು ದಿನ ವಿದ್ಯುತ್ ಸಮಸ್ಯೆ, ಸಂಚಾರದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.
ಇನ್ನಷ್ಟು ಓದಿ