Dailyhunt Logo
  • Light mode
    Follow system
    Dark mode
    • Play Story
    • App Story
ರುಚಿಯಲ್ಲಿ ನಂ.1, ಆರೋಗ್ಯದಲ್ಲೂ ಸೈ: ಮನೆಯಲ್ಲೇ ಮಾಡಿ ಕುರುಕುರು ಪಾಲಕ್ ಪಕೋಡ...Palak Pakoda

ರುಚಿಯಲ್ಲಿ ನಂ.1, ಆರೋಗ್ಯದಲ್ಲೂ ಸೈ: ಮನೆಯಲ್ಲೇ ಮಾಡಿ ಕುರುಕುರು ಪಾಲಕ್ ಪಕೋಡ...Palak Pakoda

Palak Pakoda: ಮಳೆಯಿರಲಿ ಅಥವಾ ತಂಪಾದ ಸಂಜೆಯಿರಲಿ, ಬಿಸಿ ಚಹಾ ಅಥವಾ ಕಾಫಿಯೊಂದಿಗೆ ಗರಿಗರಿಯಾದ ಪಾಲಕ್ ಪಕೋಡ ಸವಿಯಲು ನಿಜಕ್ಕೂ ಅದ್ಭುತ. ಇದು ಕೇವಲ ರುಚಿಕರವಷ್ಟೇ ಅಲ್ಲ, ಪಾಲಕ್ ಸೊಪ್ಪಿನ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ ಇತರ ಎಣ್ಣೆ ಪದಾರ್ಥಗಳಿಗೆ ಹೋಲಿಸಿದರೆ ಉತ್ತಮ ಆಯ್ಕೆಯೂ ಹೌದು.
ಹಾಗಿದ್ದರೆ ಇನ್ಯಾಕೆ ತಡ ಈಗ್ಲೇ ಮಾಡಿ ಪಾಲಕ್​ ಪಕೋಡ..

ಬೇಕಾಗುವ ಪದಾರ್ಥಗಳು

* 2 ಕಪ್ ಪಾಲಕ್ ಸೊಪ್ಪು*1 ಕಪ್ ಕಡಲೆ ಹಿಟ್ಟು*2 ಚಮಚ ಅಕ್ಕಿ ಹಿಟ್ಟು*1 ಈರುಳ್ಳಿ*2-3 ಹಸಿಮೆಣಸಿನಕಾಯಿ*1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್*ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು*ಅರಿಶಿನ, ಅಚ್ಚ ಕೆಂಪು ಮೆಣಸಿನ ಪುಡಿ, ಜೀರಿಗೆ ಪುಡಿ ಮತ್ತು ಓಂಕಾಳು

ಮಾಡುವ ವಿಧಾನ

ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ನೀರಿಲ್ಲದಂತೆ ಒಣಗಿಸಿ ಸಣ್ಣದಾಗಿ ಹೆಚ್ಚಿಕೊಳ್ಳಿ. ನಂತರ ಒಂದು ಅಗಲವಾದ ಪಾತ್ರೆಯಲ್ಲಿ ಹೆಚ್ಚಿದ ಪಾಲಕ್, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಎಲ್ಲಾ ಮಸಾಲಾ ಪುಡಿಗಳನ್ನು ಹಾಕಿ ಚೆನ್ನಾಗಿ ಬೆರೆಸಿ.

ನಂತರ ಈ ಮಿಶ್ರಣಕ್ಕೆ ಕಡಲೆ ಹಿಟ್ಟು ಮತ್ತು ಅಕ್ಕಿ ಹಿಟ್ಟನ್ನು ಸೇರಿಸಿ. ಚೆನ್ನಾಗಿ ಕಲಿಸಿಕೊಳ್ಳಿ. ಬೇಕಿದ್ದರೆ ನೀರನ್ನು ಮಿಕ್ಸ್​ ಮಾಡಿಕೊಳ್ಳಿ. ಇದಾದ ಬಳಿಕ ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಎಣ್ಣೆ ಚೆನ್ನಾಗಿ ಕಾದ ನಂತರ, ಸಣ್ಣ ಉಂಡೆಗಳನ್ನಾಗಿ ಅಥವಾ ಪಕೋಡ ಆಕಾರದಲ್ಲಿ ಎಣ್ಣೆಗೆ ಬಿಡಿ. ಪಕೋಡಗಳು ಚಿನ್ನದ ಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಿ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು "ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani