ಭಾರತ ಮತ್ತು ಫ್ರಾನ್ಸ್ ನಡುವಿನ ಸ್ನೇಹಸಂಬಂಧ ಹೊಸ ಎತ್ತರಕ್ಕೆ ತಲುಪಿದೆ. ಫ್ರಾನ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನೀಸ್ ನಗರದಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಉಭಯ ದೇಶಗಳ ನಡುವಿನ ರಕ್ಷಣೆ, ಕೃತಕ ಬುದ್ಧಿಮತ್ತೆ (ಎಐ), ತಂತ್ರಜ್ಞಾನ ಮತ್ತು ಹೂಡಿಕೆ ವಲಯದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ.
'ಉಭಯ ದೇಶಗಳು ಜೊತೆಯಾಗಿ ವಿಶ್ವದ ಹಲವು ಪ್ರಮುಖ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ' ಎಂದು ಪ್ರಧಾನಿ ಮೋದಿ ಹೇಳಿರುವುದು, ಭಾರತ-ಫ್ರಾನ್ಸ್ ನಡುವಿನ ಬಲಿಷ್ಠ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಾಕ್ಷಿ.
ಭಾರತಕ್ಕೆ ಐರೋಪ್ಯ ಒಕ್ಕೂಟದಲ್ಲಿ ಅತ್ಯಂತ ನಂಬಿಕಸ್ಥ ಮತ್ತು ಹಳೆಯ ಮಿತ್ರ ರಾಷ್ಟ್ರವೆಂದರೆ ಅದು ಫ್ರಾನ್ಸ್. ಭಾರತವು 1998ರಲ್ಲಿ ಪೋಖ್ರಾನ್ ಅಣು ಬಾಂಬ್ ಪರೀಕ್ಷೆ ನಡೆಸಿದಾಗ ಜಗತ್ತಿನ ಪ್ರಮುಖ ದೊಡ್ಡ ದೇಶಗಳು ಭಾರತದ ಮೇಲೆ ನಿರ್ಬಂಧ ಹೇರಿದ್ದವು. ಆದರೆ, ಫ್ರಾನ್ಸ್ ಭಾರತದ ನಿರ್ಧಾರವನ್ನು ಬೆಂಬಲಿಸಿ, ನಿರ್ಬಂಧ ಹೇರಲು ನಿರಾಕರಿಸಿತ್ತು. ಭಾರತೀಯ ವಾಯುಪಡೆಗೆ ಬಲ ತುಂಬಿರುವ ರಫೇಲ್ ಯುದ್ಧ ವಿಮಾನಗಳು ಮತ್ತು ನೌಕಾಪಡೆಗೆ ಸೇರಿದ ಕಲ್ವರಿ ದರ್ಜೆಯ ಜಲಾಂತರ್ಗಾಮಿಗಳು ಉಭಯ ದೇಶಗಳ ರಕ್ಷಣಾ ಸಹಭಾಗಿತ್ವಕ್ಕೆ ದೊಡ್ಡ ಉದಾಹರಣೆ. ಭಾರತ ಮತ್ತು ಫ್ರಾನ್ಸ್ ಎರಡು ದೇಶಗಳೂ ಯಾವುದೇ ಜಾಗತಿಕ ಬಣಗಳಿಗೆ ಸಂಪೂರ್ಣವಾಗಿ ವಾಲದೆ, ತಮ್ಮದೇ ಆದ ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿವೆ. ಇದು ಎರಡೂ ದೇಶಗಳ ನಡುವಿನ ಪರಸ್ಪರ ಗೌರವವನ್ನು ಹೆಚ್ಚಿಸಿದೆ.

ಇಂಡೋ-ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಾಬಲ್ಯವನ್ನು ತಡೆಯಲು ಭಾರತ ಮತ್ತು ಫ್ರಾನ್ಸ್ ನೌಕಾಪಡೆಗಳು ಜಂಟಿಯಾಗಿ ಕೆಲಸ ಮಾಡುತ್ತಿವೆ ಎಂಬುದು ಗಮನಾರ್ಹ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಮ್ಯಾಕ್ರಾನ್ ಅವರ ಮಾತುಕತೆಗಳು ಭವಿಷ್ಯದ ತಂತ್ರಜ್ಞಾನ ಮತ್ತು ಆರ್ಥಿಕ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆದಿವೆ. ಕೇವಲ ಆಯುಧಗಳನ್ನು ಖರೀದಿಸುವ ಬದಲು, ತಂತ್ರಜ್ಞಾನವನ್ನು ಭಾರತಕ್ಕೆ ವರ್ಗಾಯಿಸುವ ಮತ್ತು ಭಾರತದಲ್ಲೇ ಜಂಟಿಯಾಗಿ ರಕ್ಷಣಾ ಸಾಮಗ್ರಿಗಳನ್ನು ಉತ್ಪಾದಿಸುವ ನಿರ್ಧಾರಕ್ಕೆ ಬರಲಾಗಿದೆ. ಇದು ಭಾರತದ ರಕ್ಷಣಾ ಸ್ವಾವಲಂಬನೆಗೆ ದೊಡ್ಡ ಕೊಡುಗೆ ನೀಡಲಿದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ವಾಂಟಮ್ ತಂತ್ರಜ್ಞಾನದಲ್ಲಿ ಜಂಟಿ ಸಂಶೋಧನೆ ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿವೆ. ಇದರಿಂದ ಭಾರತದ ಐಟಿ ಕ್ಷೇತ್ರ ಮತ್ತು ನವೋದ್ಯಮಗಳಿಗೆ ಹೊಸ ಮಾರುಕಟ್ಟೆ ಸಿಗಲಿದೆ.
ಇನ್ನಷ್ಟು ಓದಿ