ಮುಖಪುಟ
ಶವಸಂಸ್ಕಾರ ಮಾಡಿ ಬಂದ 10ನೇ ದಿನ ಮನೆಯ ಖುರ್ಚಿ ಮೇಲೆ ಪ್ರತ್ಯಕ್ಷಳಾದಳು!

ಮ್ಯಾಡ್ರಿಡ್ (ಸ್ಪೇನ್): ಮೃತಪಟ್ಟ ಕುಟುಂಬದವರ ಶವಸಂಸ್ಕಾರ ಮಾಡಿ ಬಂದು ದುಃಖದಲ್ಲಿದ್ದಾಗ ದಿಢೀರನೆ ಅವರು ಕಾಣಿಸಿಕೊಂಡರೆ ಹೇಗಿರುತ್ತೆ?
ಮೃತಪಟ್ಟಿದ್ದಾರೆ ಎಂದುಕೊಂಡವರು ಬದುಕಿದ್ದಾರೆಂದು ಖುಷಿಯಾಗುತ್ತೋ ಅಥವಾ ಸತ್ತ ವ್ಯಕ್ತಿ ಬದುಕಿ ಬಂದದ್ದು ನೋಡಿ ತಲೆಸುತ್ತಿ ಬೀಳುತ್ತೀರೋ?
ಅಂಥದ್ದೇ ಒಂದು ವಿಚಿತ್ರ ಘಟನೆ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ನಡೆದಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ರೊಗೇಲಿಯಾ ಬ್ಲಾಂಕೋ ಎಂಬ 85 ವರ್ಷದ ವೃದ್ಧೆ ಕರೊನಾ ಸೋಂಕಿಗೆ ಗುರಿಯಾಗಿದ್ದರು. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಕುಟುಂಬಸ್ಥರಿಗೆ ತಿಳಿಸಿದರು.
ಅಲ್ಲಿಯ ನಿಯಮದ ಪ್ರಕಾರ, ಕರೊನಾದಿಂದ ಮೃತಪಟ್ಟವರ ದೇಹವನ್ನು ಕುಟುಂಬಸ್ಥರಿಗೆ ನೀಡುವುದಿಲ್ಲ. ಬದಲಿಗೆ ಅವರೇ ಶವಸಂಸ್ಕಾರ ಮಾಡುತ್ತಾರೆ. ಅದರಂತೆಯೇ ಈ ಅಜ್ಜಿಯ ಮೃತದೇಹವನ್ನೂ ಸಂಸ್ಕಾರ ಮಾಡಿ ಈ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದರು.
ಅಜ್ಜಿಯನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬದವರು ಇದ್ದರು. ಅದೊಂದು ದಿನ ಅಂದರೆ ಅಂತ್ಯಸಂಸ್ಕಾರ ನಡೆದ 10ನೇ ದಿನಕ್ಕೆ ಮನೆಯಲ್ಲಿನ ಬಾಗಿಲು ತೆರೆದಿತ್ತು. ಮನೆಯವರೆಲ್ಲರೂ ಒಳಗಡೆ ಇದ್ದರು. ಏನೋ ಶಬ್ದವಾಗಿ ಬಂದು ನೋಡಿದರೆ ಅಜ್ಜಿ ಖುರ್ಚಿಯ ಮೇಲೆ ಕುಳಿತಿದ್ದಳು. ತೀರಾ ಬಳಲಿದ್ದಳು. ಅಜ್ಜಿಯನ್ನು ನೋಡಿ ಕುಟುಂಬಸ್ಥರು ಹೌಹಾರಿ ಹೋದರು.
ತಮ್ಮದೇ ಅಜ್ಜಿಯಂತೂ ವಾಪಸ್ ಬರಲು ಸಾಧ್ಯವಿಲ್ಲ. ಒಂದೇ ಅಜ್ಜಿಯ ಆತ್ಮ ಇಲ್ಲವೇ ಅಜ್ಜಿಯನ್ನು ಹೋಲುವ ಯಾರೋ ಬಂದಿರಬಹುದು ಎಂದುಕೊಂಡು ಎಲ್ಲರೂ ಗರಬಡಿದಂತೆ ನಿಂತರು. ಅವರನ್ನೆಲ್ಲಾ ನೋಡಿದ ಅಜ್ಜಿ ಏನಾಯಿತೆಂದು ಕೇಳಿದರೂ ಇವರೆಲ್ಲರೂ ಪ್ರತಿಕ್ರಿಯೆ ನೀಡುವ ಸ್ಥಿತಿಯಲ್ಲಿ ಇರಲಿಲ್ಲ.
ಕೊನೆಗೆ ದಾರಿಕಾಣದ ಅವರು ನೇರವಾಗಿ ಆಸ್ಪತ್ರೆಗೆ ಕರೆ ಮಾಡಿ ಕೇಳಿದರು. ಆಗ ಆಸ್ಪತ್ರೆಯವರು ಕ್ಷಮೆ ಕೋರಿದರು. ಕರೊನಾ ಆರಂಭದ ದಿನದಿಂದಲೂ ಹೆಸರು ಬದಲಾವಣೆಯಾಗುವುದು, ಶವ ಅದಲು ಬದಲಾಗುವುದು, ಇನ್ನಾರದ್ದೋ ಶವ ಇನ್ನಾರಿಗೋ ನೀಡುವುದು ನಡೆದೇ ಇದೆಯಲ್ಲವೆ? ಅದೇ ರೀತಿ ಇಲ್ಲಿಯೂ ಆಗಿತ್ತು.
ಒಂದೇ ಹೆಸರಿನ ಇಬ್ಬರು ಇದ್ದದ್ದೇ ಈ ಗೊಂದಲಕ್ಕೆ ಕಾರಣ, ಇದೇ ಹೆಸರಿನ ವೃದ್ಧೆಯೊಬ್ಬರ ಅಂತ್ಯಸಂಸ್ಕಾರ ಮಾಡಿದ್ದ ಸಿಬ್ಬಂದಿ, ವಿಳಾಸ ತಪ್ಪಾಗಿ ಗುರುತಿಸಿ ಈ ಅಜ್ಜಿಯ ಕುಟುಂಬದವರಿಗೆ ಕರೆ ಮಾಡಿ ಅಂತ್ಯಸಂಸ್ಕಾರದ ವಿಷಯ ತಿಳಿಸಿದ್ದರು.
ವಿಷಯ ತಿಳಿದ ಎಲ್ಲರೂ ಇಲ್ಲಿಗೆ ಬಂದಿರುವ ಅಜ್ಜಿ ತಮ್ಮದೇ ಅಜ್ಜಿ ಎಂದು ತಿಳಿದು ಖುಷಿಪಟ್ಟರು.
ಶವ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತ: ಚಾಲಕ, ಕುಟುಂಬಸ್ಥರು ಸೇರಿ ಐವರ ಸಾವು
ಸಚಿವ ಅಶೋಕ್ ಪಿ.ಎ ಲಂಚ ಕೇಳಿದ್ರು, ನನ್ ಬಳಿ ಆಡಿಯೋ ಇದೆ ಎಂದ ಸಬ್ ರಿಜಿಸ್ಟ್ರಾರ್ ಹೀಗೂ ಹೇಳಿದ್ರು…
ಆರನೇ ಪತ್ನಿ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಏಳನೇ ವಧುವಿಗಾಗಿ ಹುಡುಕಾಡುತ್ತಿದ್ದಾನೆ ಈ ವೃದ್ಧ!
ರಾಹುಲ್‌ಗಾಂಧಿ ಬಾಯಲ್ಲಿ 'ನಿಕ್ಕರ್‌ವಾಲಾ'… ಟ್ರಾನ್ಸ್‌ಲೇಟರ್ ಬಾಯಲ್ಲಿ 'ಲಿಕ್ಕರ್‌ವಾಲಾ' ಆದಾಗ…