Dailyhunt Logo
  • Light mode
    Follow system
    Dark mode
    • Play Story
    • App Story
ಶಿರಾ ನಗರಸಭೆ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಶಿರಾ ನಗರಸಭೆ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಶಿರಾ ನಗರಸಭೆ ಅಧ್ಯಕ್ಷನ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲುವಿಜಯವಾಣಿ ಸುದ್ದಿಜಾಲ ಶಿರಾಶಿರಾ ನಗರಸಭೆ ಅಧ್ಯಕ್ಷ ಜಿಷನ್​ ಅಹಮ್ಮದ್​ ಅವರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ರ್ನಿಣಯವು ಅಗತ್ಯ ಸಂಖ್ಯಾಬಲದ ಕೊರತೆಯಿಂದ ಗುರುವಾರ ಬಿದ್ದುಹೋಗಿದೆ.ಸಭೆಯಲ್ಲಿ ಒಟ್ಟು 30 ಸದಸ್ಯರು ಹಾಜರಿದ್ದರು.
ಅಧ್ಯಕ್ಷರ ಪರ 13 ಸದಸ್ಯರು ಹಾಗೂ ವಿರುದ್ಧ 14 ಸದಸ್ಯರು ಮತ ಚಲಾಯಿಸಿದರು. ಮೂವರು ಸದಸ್ಯರು ತಟಸ್ಥ ನಿಲುವು ತೋರಿದರು. ಅವಿಶ್ವಾಸ ರ್ನಿಣಯ ಅಂಗೀಕಾರವಾಗಲು ಹಾಜರಿದ್ದ ಸದಸ್ಯರ ಎರಡನೇ ಮೂರರಷ್ಟು ಬಹುಮತ, ಅಂದರೆ 20 ಮತಗಳ ಅಗತ್ಯವಿದ್ದರೂ 14 ಮತಗಳು ಮಾತ್ರ ದೊರೆತ ಕಾರಣ ರ್ನಿಣಯ ಅಂಗೀಕಾರವಾಗಲಿಲ್ಲ. ಆದರೆ ಮೂರೂ ಪ್ರಮುಖ ಪಕ್ಷಗಳ ಸದಸ್ಯರ ಅಡ್ಡಮತದಾನ, ಮೂವರು ಸದಸ್ಯರ ತಟಸ್ಥ ನಿಲುವು ಹಾಗೂ ಪಕ್ಷಗಳೊಳಗಿನ ಭಿನ್ನಾಭಿಪ್ರಾಯಗಳು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.ಮತದಾನದ ವೇಳೆ ಅಧ್ಯಕ್ಷರ ಪರ ಕಾಂಗ್ರೆಸ್​ನ 6, ಜೆಡಿಎಸ್​ನ 2, ಬಿಜೆಪಿಯ 1 ಹಾಗೂ 4 ಪಕ್ಷೇತರ ಸದಸ್ಯರು ಮತ ಚಲಾಯಿಸಿದರು. ಅಧ್ಯಕ್ಷರ ವಿರುದ್ಧ ಕಾಂಗ್ರೆಸ್​ನ 8, ಬಿಜೆಪಿಯ 3, ಜೆಡಿಎಸ್​ನ 1 ಹಾಗೂ 2 ಪಕ್ಷೇತರ ಸದಸ್ಯರು ಮತ ನೀಡಿದರು. ಕಾಂಗ್ರೆಸ್​ನವರೇ ಆದ ಅಧ್ಯಕ್ಷ ಜಿಷನ್​ ಅಹಮ್ಮದ್​ ವಿರುದ್ಧ ಕಾಂಗ್ರೆಸ್​ನ 8 ಸದಸ್ಯರು ಮತ ಚಲಾಯಿಸಿದ್ದು, ಪಕ್ಷದೊಳಗಿನ ಭಿನ್ನಾಭಿಪ್ರಾಯ ಬಹಿರಂಗಪಡಿಸಿತು. ಬಿಜೆಪಿ ಹಾಗೂ ಜೆಡಿಎಸ್​ ಸದಸ್ಯರ ಮತಗಳೂ ವಿಭಜನೆಯಾಗಿರುವುದು ಸ್ಥಳಿಯ ರಾಜಕೀಯ ಸಮೀಕರಣಗಳಿಗೆ ಸಾಕ್ಷಿಯಾಯಿತು.ಅವಿಶ್ವಾಸ ರ್ನಿಣಯ ವಿಫಲಗೊಂಡ ಬಳಿಕ ಪ್ರತಿಕ್ರಿಯಿಸಿದ ಅಧ್ಯಕ್ಷ ಜಿಷನ್​ ಅಹಮ್ಮದ್​, ಕಳೆದ 20 ತಿಂಗಳ ಆಡಳಿತಕ್ಕೆ ಸದಸ್ಯರು ಪಕ್ಷಾತಿತವಾಗಿ ಬೆಂಬಲ ನೀಡಿದ್ದಾರೆ. ಇದು ನನ್ನ ವೈಯಕ್ತಿಕ ಗೆಲುವಲ್ಲ, ಸತ್ಯ ಮತ್ತು ಅಭಿವೃದ್ಧಿಗೆ ಸಂದ ಜಯ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುತ್ತೇನೆ. ವಿಶೇಷವಾಗಿ ಬಡವರಿಗೆ ನಿವೇಶನ ಹಂಚುವ ಕಾರ್ಯವನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ ಎಂದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೃಷ್ಣಪ್ಪ ಮಾತನಾಡಿ, ಅಧ್ಯಕ್ಷರ ವಿರುದ್ಧದ ಅವಿಶ್ವಾಸ ರ್ನಿಣಯವು ವೈಯಕ್ತಿಕ ಕಾರಣಗಳಿಂದಲ್ಲ, ನಗರಸಭೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ನಿಯಮ ಉಲ್ಲಂಘನೆಗಳ ವಿರುದ್ಧ ಎಂದರು.ಜೆಡಿಎಸ್​ ಮುಖಂಡ ಅಂಜಿನಪ್ಪ ಮಾತನಾಡಿ, ಪಕ್ಷದ ಸೂಚನೆ ಇದ್ದರೂ ಜೆಡಿಎಸ್​ನ ಮೂವರು ಸದಸ್ಯರು ತಟಸ್ಥರಾಗಿರುವುದೇ ಅವಿಶ್ವಾಸ ರ್ನಿಣಯ ವಿಫಲವಾಗಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
10 ಶಿರಾ 01

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani