ಬೆಳಗಾವಿ: ಪ್ರಸಿದ್ಧ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೋಕುಳಿ ಹರಿದಿದೆ. ಹೌದು, ಮನೆ ಮುಂದೆ ನೃತ್ಯ ಮಾಡಿದ ಎನ್ನುವ ಸಿಟ್ಟಿಗೆ ವ್ಯಕ್ತಿಯೊಬ್ಬನನ್ನು ದಾರುಣವಾಗಿ ಹತ್ಯೆ ಮಾಡಿದ ಘಟನೆ, ಬೈಲಹೊಂಗಲ ತಾಲೂಕಿನ ಹುಣ್ಣಿಕೇರಿಯಲ್ಲಿ ನಡೆದಿದೆ.
ಬಂಧಿತರು ಯಾರು?
ಕೊಲೆಯಾದ ವ್ಯಕ್ತಿಯನ್ನು ಸಂಗನಗೌಡ(50) ಎಂದು ಗರುತಿಸಲಾಗಿದೆ.ಮನೆ ಮುಂದೆ ಕುಣಿದಿದ್ದಕ್ಕೆ ಕೊಲೆ?
ಮೃತ ಸಂಗನಗೌಡ ಹಾಗೂ ಆರೋಪಿ ಕುಟುಂಬದ ಮಧ್ಯೆ ಹಳೆಯ ವೈಷಮ್ಯ ಇತ್ತು ಎನ್ನಲಾಗಿದೆ. ಸಿದ್ದೇಶ್ವರ ಜಾತ್ರೆಯಲ್ಲಿ ತನ್ನ ವಿರೋಧಿಗಳ ಮನೆ ಮುಂದೆ ಸಂಗನಗೌಡ ಪಾಟೀಲ್ ಕುಣಿದಾಡಿದ್ದಾರೆ. ಮನೆ ಮುಂದೆ ಕುಣಿಬೇಡ ಆಕಡೆ ಹೋಗು ಎಂದು ಆರೋಪಿಗಳು ಹೇಳಿದ್ದಾರೆ. ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು, ಮಾರಾಮಾರಿ ನಡೆದಿದೆ. ಕೊಡಲಿ, ಕಬ್ಬಿಣದ ರಾಡ್, ಕುಡುಗೋಲು ಹಿಡಿದು ಬಂದ ಆರೋಪಿಗಳು ಅವರನ್ನು ಕೊಂದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ಹಂಚಿಕೊಂಡಿದ್ದಾರೆ.ಇದನ್ನು ಓದಿ: ಆನ್ಲೈನ್ ಖರೀದಿ ಆಯಪ್‌ಗಳು ಹೆಲ್ತ್, ವೆಲ್ತ್ಗೆ ಮಾರಕ; ಹೇಗೆ ಗೊತ್ತಾ?..Quit Quick Commerce App
ರಕ್ತದ ಮಡುವಲ್ಲಿ ಬಿದ್ದ ಸಂಗನಗೌಡರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ಹೇಳಲಾಗಿದೆ.
ಕಲಬುರಗಿಯಲ್ಲಿ ಶಿಕ್ಷಕಿ ಕೊಲೆ
ಕಲಬುರಗಿ ತಾಲೂಕಿ ಕಲಮೂಡ ಬಳಿ ಸುಟ್ಟ ಸ್ಥಿತಿಯಲ್ಲಿ ಜ್ಯೋತಿ ಕಪಾಳ ಎಂಬುವವರ ಶವ ಶನಿವಾರ ಪತ್ತೆಯಾಗಿತ್ತು. ಈ ಕೇಸ್ಗೆ ಟ್ವಿಸ್ಟ್ವೊಂದು ಸಿಕ್ಕಿದೆ. ಅಮರ್ ಕುಡ್ದಳ್ಳಿ ಬಂದಿತ ಆರೋಪಿ ಈತನಿಗೆ ಟೀಚರ್ ಕಷ್ಟ ಕಾಲದಲ್ಲಿ ಹಣ ಕೊಟ್ಟಿದ್ದರು. ಮೊದಲು ಸ್ನೇಹಿತರಾಗಿದ್ದ ಕಾರಣ ಅವರಿಂದ 14 ಲಕ್ಷ ಹಣ ಪಡೆದು ನಂದಿನಿ ಪಾರ್ಲರ್ ತೆರೆದಿದ್ದ. ಕೆಲ ದಿನದ ಹಿಂದೆ ಅದನ್ನು ವಾಪಸ್ ಕೇಳಿದ್ದರು. ಹೀಗಾಗಿ ಹಣ ಕೊಡುತ್ತೇನೆ ಎಂದು ಅವರನ್ನು ಕರೆಸಿಕೊಂಡು ಕಾರಿನಲ್ಲಿ ಸುತ್ತಾಡಿಸಿ, ಚಾಕುವಿನಿಂದ ಹತ್ಯೆ ಮಾಡಿದ್ದಾನೆ. ನಂತರ, ಸಾಕ್ಷಿ ನಾಶ ಪಡಿಸುವ ಸಲುವಾಗಿ, ಪೆಟ್ರೋಲ್ ಸುರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ, (ಏಜೆನ್ಸೀಸ್).ಇನ್ನಷ್ಟು ಓದಿ

