Dailyhunt
ಸಿಲಿಂಡರ್ ಬೆಲೆಯಲ್ಲಿ 993 ರೂ.ಗಳ 'ಬಿಗ್ ಶಾಕ್': ಮೇ ಆರಂಭದಲ್ಲೇ ಉದ್ಯಮಿಗಳಿಗೆ ಬೆಲೆ ಏರಿಕೆಯ ಬಿಸಿ! LPG Price Hike

ಸಿಲಿಂಡರ್ ಬೆಲೆಯಲ್ಲಿ 993 ರೂ.ಗಳ 'ಬಿಗ್ ಶಾಕ್': ಮೇ ಆರಂಭದಲ್ಲೇ ಉದ್ಯಮಿಗಳಿಗೆ ಬೆಲೆ ಏರಿಕೆಯ ಬಿಸಿ! LPG Price Hike

ವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಹೆಚ್ಚುತ್ತಿರುವ ಉದ್ವಿಗ್ನತೆಯಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗುತ್ತಿರುವ ಬೆನ್ನಲ್ಲೇ, ತೈಲ ಕಂಪನಿಗಳು ವಾಣಿಜ್ಯ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ಸಿಲಿಂಡರ್‌ಗಳ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಿವೆ.
ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು (LPG Price Hike) ಬರೋಬ್ಬರಿ 993 ರೂ. ಗಳಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಗೃಹಬಳಕೆಯ ಸಿಲಿಂಡರ್‌ಗಳ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಸುಮಾರು 993 ರೂ ಹೆಚ್ಚಿಸಲಾಗಿದೆ. ಪ್ರಸ್ತುತ ಬೆಲೆ 3071 ರೂ ಆಗಿದೆ. ಆದರೆ, ದೇಶೀಯ ಸಿಲಿಂಡರ್​ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಗಮನಾರ್ಹವಾಗಿ, ಫೆಬ್ರವರಿ 28 ರಂದು ಕೊಲ್ಲಿಯಲ್ಲಿ ಯುದ್ಧದ ಸ್ಥಿತಿಯ ನಂತರ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಕನಿಷ್ಠ ಮೂರು ಬಾರಿ ಹೆಚ್ಚಾಗಿವೆ. ದರಗಳನ್ನು ಮೊದಲು ಮಾರ್ಚ್‌ನಲ್ಲಿ 144 ರೂ. ಹೆಚ್ಚಿಸಲಾಯಿತು. ಏಪ್ರಿಲ್ 1 ರಂದು ಮತ್ತೆ ಬೆಲೆಗಳನ್ನು 195.50 ರೂಗೆ ಏರಿಕೆ ಮಾಡಲಾಗಿದೆ.
ಸರ್ಕಾರವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಜೊತೆಗೆ ಜಾಗತಿಕ ಮಾರುಕಟ್ಟೆಗಳಲ್ಲಿನ ಅಸ್ಥಿರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೇಶದ ಹಿತಾಸಕ್ತಿಯನ್ನು ಕಾಪಾಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದ್ದರೂ ಕೂಡಾ ನಿರಂತರ ಬೆಲೆ ಏರಿಕೆಯಿಂದ ರೆಸ್ಟೋರೆಂಟ್‌ಗಳು, ತಿನಿಸುಗಳು ಮತ್ತು ಇತರ ಸಂಬಂಧಿತ ವ್ಯವಹಾರಗಳ ಮೇಲೆ ಭಾರಿ ಪರಿಣಾಮ ಬೀರಿದೆ.

ಆದಾಗ್ಯೂ, ದೇಶಕ್ಕೆ ಸಮಾಧಾನಕರ ಸಂಗತಿಯೆಂದರೆ, ಭಾರತದಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಬದಲಾಗದೆ ಉಳಿದಿವೆ.
ದೇಶೀಯ ವಿಮಾನಗಳಿಗೆ ವಿಮಾನ ಟರ್ಬೈನ್ ಇಂಧನ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ಶುಕ್ರವಾರ ತನ್ನ ಹೇಳಿಕೆಯಲ್ಲಿ ದೃಢಪಡಿಸಿದೆ. ಆದಾಗ್ಯೂ, ಇನ್ಪುಟ್​ ವೆಚ್ಚದ ಪ್ರಕಾರ ಪ್ರತಿ ತಿಂಗಳ 1 ನೇ ತಾರೀಖಿನಂದು ಎಟಿಎಫ್​ ಬೆಲೆಗಳನ್ನು ಪರೀಷ್ಕರಿಸಲಾಗುತ್ತದೆ.
ಹೆಚ್ಚುವರಿಯಾಗಿ, ಸರ್ಕಾರವು ಡೀಸೆಲ್ ರಫ್ತಿನ ಮೇಲಿನ ಅಬಕಾರಿ ಸುಂಕವನ್ನು ಲೀಟರ್​ಗೆ 23 ರೂ. ಮತ್ತು ಎಟಿಎಫ್​ ಅನ್ನು ಪ್ರತಿ ಲೀಟರ್​ಗೆ 33 ರೂಗೆ ಇಳಿಸಿದ್ದು, ಇದು ದೇಶೀಯ ಬಳಕೆಗಾಗಿ ಪೆಟ್ರೋಲ್​ ಮತ್ತು ಡೀಸೆಲ್​ ಮೇಲಿನ ಅಸ್ತಿತ್ವದಲ್ಲಿರುವ ಅಬಕಾರಿ ಸುಂಕ ದರಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಕೇಂದ್ರ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಡೀಸೆಲ್ ರಫ್ತಿನ ಮೇಲಿನ ಸುಂಕದ ದರವು ಪ್ರತಿ ಲೀಟರ್‌ಗೆ 23 ರೂ. ಆಗಿರುತ್ತದೆ. ಇದಲ್ಲದೆ, ವಿಮಾನ ಇಂಧನ (ATF) ರಫ್ತಿನ ಮೇಲಿನ ಸುಂಕದ ದರವು ಪ್ರತಿ ಲೀಟರ್‌ಗೆ 33 ರೂ. ಆಗಿರುತ್ತದೆ. ಆದಾಗ್ಯೂ, ಪೆಟ್ರೋಲ್ ರಫ್ತಿನ ಮೇಲಿನ ಸುಂಕದ ದರವು ಶೂನ್ಯವಾಗಿಯೇ ಮುಂದುವರಿಯಲಿದೆ. ದೇಶೀಯ ಬಳಕೆಗಾಗಿ ಬಿಡುಗಡೆ ಮಾಡಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಸ್ತಿತ್ವದಲ್ಲಿರುವ ಅಬಕಾರಿ ಸುಂಕದ ದರಗಳಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ ಎಂದು ತಿಳಿಸಿದೆ (ಏಜೆನ್ಸೀಸ್​).

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani