Monday, 14 Jun, 4.36 pm ವಿಜಯವಾಣಿ

ಮುಖಪುಟ
ಸಿಂಗಲ್‌ ಇದ್ದು ಎಲ್ಲರಿಗೂ ಲಭ್ಯಳಿದ್ದೇನೆ: ಮೂರನೇ ಮದುವೆ ಮುರಿದು ನಾಲ್ಕನೆಯದ್ದಕ್ಕೆ ಸಿದ್ಧಳಾದ ನಟಿ!

ಚೆನ್ನೈ: ಇಬ್ಬರು ಪತಿಯಂದಿರಿಗೆ ವಿಚ್ಛೇದನ ನೀಡಿ, ಮೂರನೆಯ ಮದುವೆಯನ್ನೂ ಮುರಿದು ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿ ಭಾರಿ ಪ್ರಚಾರದಲ್ಲಿದ್ದ ತಮಿಳು ನಟಿ, ಬಿಗ್‌ಬಾಸ್‌ ಸ್ಪರ್ಧಿ ವನಿತಾ ವಿಜಯಕುಮಾರ್‌ ತಮ್ಮ ನಾಲ್ಕನೆಯ ಮದುವೆಯ ಕುರಿತಾದ ಗಾಸಿಪ್‌ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.

ಮೂರು ಮಕ್ಕಳ ತಾಯಿಯಾಗಿರುವ ವನಿತಾ, ನಾಲ್ಕನೆಯ ಮದುವೆಯಾಗಿರುವ ಕಾರಣ, ಲಾಕ್‍ಡೌನ್ ವೇಳೆ ಕಳೆದ ವರ್ಷ ಮದುವೆಯಾಗಿದ್ದ ವಿಎಫ್‍ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜತೆ ಮದುವೆ ಮುರಿದುಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಮೂರನೆಯ ಮದುವೆ ಬ್ರೇಕ್‌ ಅಪ್‌ ಆಗಿರುವುದು ನಿಜ ಎಂದಿರುವ ನಟಿ, ನಾಲ್ಕನೆಯ ಮದುವೆಯಾಗಿಲ್ಲ, ಒಂಟಿಯಾಗಿದ್ದು ಎಲ್ಲರಿಗೂ ಲಭ್ಯ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪೀಟರ್‌ ಜತೆಗಿನ ಮದುವೆ ಮುರಿದ ಬಗ್ಗೆ ಕಣ್ಣೀರಿಟ್ಟಿದ್ದ ನಟಿ, ಸಮಾಜದಲ್ಲಿ ಮಕ್ಕಳ ಆರೈಕೆಗೆ ಒರ್ವ ಪುರುಷನ ಅವಶ್ಯಕತೆ ಹಿನ್ನೆಲೆ ಮೂರನೇ ಮದುವೆಯಾಗಿದ್ದೆ. ಅವರು ತುಂಬಾ ಒಳ್ಳೆಯವರು ಎಂದುಕೊಂಡಿದ್ದೆ. ಆದರೆ ಪೀಟರ್ ಕುಡಿತದ ದಾಸನಾಗಿದ್ದ ಎನ್ನುವುದು ನನಗೆ ಗೊತ್ತಿರಲಿಲ್ಲ. ಮದುವೆಯಾದರೂ ಮದ್ಯ ಸೇವನೆ ಬಿಡಲಿಲ್ಲ. ನಾನು ತಾಳ್ಮೆ ಕಳೆದುಕೊಳ್ಳದೇ ಸಂಸಾರ ಮಾಡುತ್ತಿದ್ದೆ. ನಿರಂತರ ಮದ್ಯ ಸೇವನೆಯಿಂದಾಗಿ ಪೀಟರ್​ಗೆ ಹೃದಯಾಘಾತವಾಗಿತ್ತು. ಒಳ್ಳೆಯ ಚಿಕಿತ್ಸೆ ಕೊಡಿಸಿದ್ದೆ. ಗುಣಮುಖನಾದರೂ ಸ್ಮೋಕಿಂಗ್ ಮತ್ತು ಡ್ರಿಂಕಿಂಗ್ ಚಟದಿಂದ ಹೊರ ಬರಲೇ ಇಲ್ಲ. ಇದರಿಂದ ನನಗೆ ಬೇಸರವಾಗಿ ಅವರಿಂದ ದೂರ ಹೋಗಿದ್ದೇನೆ ಎಂದಿದ್ದರು.

ಅಂದ ಹಾಗೆ ವನಿತಾ 2000ರಲ್ಲಿ ಕಿರುತೆರೆ ನಟ ಆಕಾಶ್ ಜತೆ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2007ರಲ್ಲಿ ವಿಚ್ಛೇದನ ಪಡೆದು ಅದೇ ವರ್ಷ ಉದ್ಯಮಿ ಆನಂದ್ ಜಯರಾಜನ್ ಜತೆ ವಿವಾಹವಾದರು. ಈ ದಂಪತಿಗೆ ಒಂದು ಮಗಳು ಜನಿಸಿದಳು. 2012ರಲ್ಲಿ ಅವರಿಂದಲೂ ದೂರವಾಗಿದ್ದ ವನಿತಾ, 2013-2017 ರವರೆಗೆ ನಿರ್ದೇಶಕ ರಾಬರ್ಟ್ ಜತೆಗೆ ವನಿತಾ ಲಿವ್‍ಇನ್ ರಿಲೇಷನ್‍ಶಿಪ್‍ನಲ್ಲಿದ್ದರು ಎಂಬ ಸುದ್ದಿ ಹರಡಿತ್ತು. ನಂತರ ಲಾಕ್​ಡೌನ್​ ಅವಧಿಯಲ್ಲಿ ಜೂನ್ 27ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಇಬ್ಬರು ವಿವಾಹವಾಗಿದ್ದರು.

ವನಿತಾ ಕಾಲಿವುಡ್‍ನ ಹಿರಿಯ ನಟ ವಿಜಯ್ ಕುಮಾರ್ ಅವರ ಮಗಳು. ತಮಿಳು ಮತ್ತು ಮಲೆಯಾಳಿ ಸಿನಿಮಾದಲ್ಲಿ ನಟಿಸಿದ್ದಾರೆ. `ಚಂದ್ರಲೇಖಾ' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದರೂ, ಹೆಚ್ಚಾಗಿ ಗುರುತಿಸಿಕೊಂಡಿದ್ದು ಧಾರಾವಾಹಿಗಳಲ್ಲಿ. ತಮಿಳಿನ ಬಿಗ್‍ಬಾಸ್ ರಿಯಾಲಿಟಿ ಶೋ ಸ್ಪರ್ಧೆಯೂ ಆಗಿದ್ದರು.

ಹಾಸಿಗೆಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಮೊದಲ ಪತ್ನಿಯ ಶಾಕಿಂಗ್‌ ನ್ಯೂಸ್‌ ಬಿಚ್ಚಿಟ್ಟ ರಾಜ್‌ ಕುಂದ್ರಾ

ನೀನು ಬೇಡ, ಮಗುವನ್ನು ಕರೆದುಕೊಂಡು ಹೋಗುತ್ತಿದ್ದೇನೆ ಎನ್ನುತ್ತಿದ್ದಾರೆ ಪತಿ- ನನ್ನ ಗತಿಯೇನು ಮೇಡಂ?

ಹಸಿವು ತಾಳದೇ ಕೂದಲನ್ನು ತಿನ್ನುತ್ತಿದ್ದ ಬಾಲಕಿ: ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರಿಗೆ ಕಾದಿತ್ತು ಅಚ್ಚರಿ!

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top