ಮಳಖೇಡ: ನಾಟಕ ಅಥವಾ ಕಾದಂಬರಿ ಆಧಾರಿತ ಕಥೆಗಳಿದ್ದರೆ ಚಲನಚಿತ್ರಗಳು ಯಶಸ್ವಿಯಾಗಬಲ್ಲವು ಎಂದು ಮಲಕೂಡ ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ನುಡಿದರು.ಮಲಕೂಡ ಗ್ರಾಮದ ಶ್ರೀ ಸೋಮೇಶ್ವರ ದೇವಾಲಯದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸತ ಸಿದ್ಧಲಿಂಗಯ್ಯ ಸ್ವಾಮಿ ಮಲಕೂಡ ರಚಿಸಿದ ಶೀಲ ಸುಟ್ಟರೂ ನೀತಿ ಬಿಟ್ಟಿಲ್ಲ ಚಲನಚಿತ್ರದ ಕ್ಯಾಮರಾ ಪೂಜೆ ನೆರವೇರಿಸಿ ಮಾತನಾಡಿದ ಅವರು,ಉತ್ತರ ಕರ್ನಾಟಕ ಭಾಗದ ನಾಟಕಕಾರರು, ಕಥೆಗಾರರ ಕಥೆಗಳನ್ನು ಗುರುತಿಸಿ ಚಲನಚಿತ್ರ ಮಾಡುತ್ತಿರುವುದು ನಿಜಕ್ಕೂ ಸಂತಸದ ವಿಷಯ.ಇದರಿಂದ ಈ ಭಾಗದ ಕವಿ, ಕಲಾವಿದರಿಗೆ ಉತ್ತೇಜನ ನೀಡಿದಂತಾಗಲಿದೆ.
ಇನ್ನಷ್ಟು ಓದಿ

