Wednesday, 16 Sep, 7.58 pm ವಿಜಯವಾಣಿ

ಮುಖಪುಟ
ಸಿಸಿಬಿ ಅಧಿಕಾರಿಗಳ ಎದುರು ಎಲ್ಲವನ್ನೂ ಒಪ್ಪಿಕೊಂಡ ದಿಗಂತ್​-ಐಂದ್ರಿತಾ ರೈ

ಬೆಂಗಳೂರು: ಡ್ರಗ್ಸ್ ಲಿಂಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ನೋಟಿಸ್​ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಚಾಮರಾಜಪೇಟೆಯ ಸಿಸಿಬಿ ಕಚೇರಿಗೆ ಆಗಮಿಸಿದ್ದ ಸ್ಟಾರ್ ದಂಪತಿ ದಿಗಂತ್​ ಮತ್ತು ಐಂದ್ರಿತಾ ರೈ ಅಧಿಕಾರಿಗಳ ಎದುರು ತಾವು ಕ್ಯಾಸಿನೋ ಪಾರ್ಟಿಯಲ್ಲಿ ಭಾಗವಹಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ನಾವು ಗೆಳೆತನ, ಚಾಟಿಂಗ್​ ಮತ್ತು ಕ್ಯಾಸಿನೋ ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದು ನಿಜ. ಆದರೆ ಮಾದಕ ದ್ರವ್ಯ ಸೇವನೆ ಮತ್ತು ಡ್ರಗ್ಸ್ ಮಾರಾಟ ದಂಧೆಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಡ್ರಗ್ಸ್​ ದಂಧೆಯ ಆರೋಪಿಗಳಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ಮಾಜಿ ಸಚಿವ ದಿವಂಗತ ಜೀವರಾಜ್​ ಆಳ್ವಾ ಪುತ್ರ ಆದಿತ್ಯ ಆಳ್ವಾ, ಸಾರಿಗೆ ಇಲಾಖೆ ನೌಕರ ರವಿಶಂಕರ್​, ಪೇಜ್​-3 ಪಾರ್ಟಿ ಆಯೋಜಕ ವೀರೇನ್​ ಖನ್ನಾ, ರಾಹುಲ್ ತೋನ್ಸೆ ಮತ್ತು ಶ್ರೀಲಂಕಾದ ಕ್ಯಾಸಿನೋ ಪಾರ್ಟಿಗಳ ಆಯೋಜಕ ಶೇಖ್​ ಫಾಝೀಲ್​ ಸ್ನೇಹದ ಕುರಿತು ದಿಗಂತ್​ ಮತ್ತು ಐಂದ್ರಿತಾರನ್ನು ಸಿಸಿಬಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ದಂಪತಿ..ಇವರಲ್ಲಿ ಕೆಲವರೊಂದಿಗೆ ನಮ್ಮ ಸ್ನೇಹ ಇರುವುದು ನಿಜ. ಆಹ್ವಾನದ ಮೇರೆಗೆ ಕ್ಯಾಸಿನೋ ಪಾರ್ಟಿಗೆ ಹೋಗಿದ್ದೆವು. ಆದರೆ ಅಲ್ಲಿ ಡ್ರಗ್ಸ್​ ಸೇವನೆ ಮಾಡಿಲ್ಲ. ಮಾರಾಟವನ್ನೂ ಮಾಡಿಲ್ಲ ಎಂದು ಸಮರ್ಥನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಿಗಂತ್‌ನನ್ನು ಇನ್​ಸ್ಪೆಕ್ಟರ್​ ಪುನೀತ್​ ಹಾಗೂ ಐಂದ್ರಿತಾರನ್ನು ಇನ್​ಸ್ಪೆಕ್ಟರ್​ ಅಂಜುಮಾಲಾ ವಿಚಾರಣೆ ಮಾಡಿದ್ದಾರೆ. ಒಂದು ಬಾರಿ ಇಬ್ಬರನ್ನೂ ಪ್ರತ್ಯೇಕವಾಗಿ, ನಂತರ ಒಟ್ಟಿಗೇ ಕೂರಿಸಿ ವಿಚಾರಣೆ ನಡೆಸಿದ್ದಾರೆ.

ಜೈಲ್​​​ ಬಳಿ ಸಂಜನಾ ಗಲ್ರಾನಿ ಕಿರಿಕ್; 'ಚಿಕ್ಕದಾಯಿತು..ನಾನು ಹೋಗಲ್ಲ' ಎಂದು ಕೂಗಾಟ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top