Dailyhunt Logo
  • Light mode
    Follow system
    Dark mode
    • Play Story
    • App Story
ಸೋನಿಯಾ ಸಾರಥ್ಯ, ಪಕ್ಷಕ್ಕೆ ಪುನರ್ಜೀವ

ಸೋನಿಯಾ ಸಾರಥ್ಯ, ಪಕ್ಷಕ್ಕೆ ಪುನರ್ಜೀವ

ಬೆಂಗಳೂರು: ಕಾಂಗ್ರೆಸ್ ರಾಜಕೀಯ ಸಂಕಷ್ಟದಲ್ಲಿದ್ದ ಕಾಲಘಟ್ಟದಲ್ಲಿ ನಾಯಕತ್ವ ವಹಿಸಿಕೊಳ್ಳುವ ಮೂಲಕ ಪಕ್ಷವನ್ನು ಅಪಾಯದಿಂದ ಪಾರು ಮಾಡಿದ ದಿಟ್ಟ ನಾಯಕಿ ಸೋನಿಯಾ ಗಾಂಧಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಬಣ್ಣಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ ಅವರ ಆತ್ಮಕಥನ ಬಿಡುಗಡೆ ಮಾಡಿ ಮಾತನಾಡಿದರು.

1996 1998, 1999ರ ಲೋಕಸಭೆ ಚುನಾವಣೆಗಳ ಕಾಲದಲ್ಲಿ ಪಕ್ಷ ಕ್ಲಿಷ್ಟಕರ ಸ್ಥಿತಿಯಲ್ಲಿತ್ತು. ಹಿರಿಯನಾಯಕರ ಒತ್ತಾಯಕ್ಕೆ ಮಣಿದು ಸೋನಿಯಾ ಗಾಂಧಿ ಕಾಂಗ್ರೆಸ್ ಸಾರಥ್ಯ ವಹಿಸಿಕೊಂಡು ಹೊಸ ರಾಜಕೀಯ ಅಧ್ಯಾಯ ಬರೆದರು ಎಂದರು.

ಎರಡು ದಶಕಗಳ ಕಾಲ ಅಧ್ಯಕ್ಷರಾಗಿ ಪಕ್ಷ ಮುನ್ನಡೆಸಿದ ಅವರು, ಅನೇಕ ರಾಜಕೀಯ ಸವಾಲುಗಳು, ಸೋಲುಗಳು, ಟೀಕೆಗಳು, ವೈಯಕ್ತಿಕ ದಾಳಿಗಳನ್ನು ಎದುರಿಸಿದರೂ ಪಕ್ಷದ ಸಿದ್ಧಾಂತ, ಜಾತ್ಯತೀತ ಮೌಲ್ಯಗಳ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ ಎಂದು ಸ್ಮರಿಸಿದರು.

ದುಡಿವ ಕೈಗಳಿಗೆ ಕೆಲಸ ನೀಡುವ ಗ್ರಾಮೀಣ ಉದ್ಯೋಗ ಖಾತ್ರಿ, ಮಾಹಿತಿ ಹಕ್ಕು ಕಾಯ್ದೆ ಜಾರಿ ವೇಳೆ ಸ್ವಪಕ್ಷೀಯರ ವಿರೋಧಗಳನ್ನು ಕೂಡ ಅವರು ಲೆಕ್ಕಿಸದೆ ದುರ್ಬಲ ವರ್ಗಗಳ ಪರವಾಗಿ ನಿಂತರು ಎಂದು ನೆನಪಿಸಿಕೊಂಡರು.

ಅತ್ತೆ ಇಂದಿರಾ ಗಾಂಧಿ ಹತ್ಯೆ, ಪತಿ ರಾಜೀವ್ ಗಾಂಧಿ ಹತ್ಯೆ ಹೀಗೆ ಒಂದರ ಮೇಲೊಂದು ದುರಂತ ಎದುರಿಸಿದರೂ ಅವರು ದೇಶ ತೊರೆದು ಹೋಗದೆ ಕಾಂಗ್ರೆಸ್ ಉಳಿಸುವ ಜವಾಬ್ದಾರಿ ಹೊತ್ತರು. ವೈಯಕ್ತಿಕ ನೋವು ಮರೆತು ದೇಶದ ಹಿತಕ್ಕೆ ಶ್ರಮಿಸಿದರು.

ಇಂದಿರಾ ಗಾಂಧಿ ಅವರಿಗೆ ರಾಜಕೀಯ ಪರಂಪರೆಯ ಹಿನ್ನೆಲೆ ಇತ್ತು. ಆದರೆ ಇಟಲಿಯಲ್ಲಿ ಜನಿಸಿ, ರಾಜೀವ್ ಗಾಂಧಿ ಅವರನ್ನು ಪ್ರೀತಿಸಿ ವಿವಾಹವಾಗಿ ಭಾರತಕ್ಕೆ ಬಂದ ಸೋನಿಯಾ ಗಾಂಧಿ ಅವರಿಗೆ ಆ ರಾಜಕೀಯದ ಹಿನ್ನೆಲೆ ಇರಲಿಲ್ಲ.

ಆದರೂ, ಭಾರತದ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಜನಜೀವನ ಅರ್ಥ ಮಾಡಿಕೊಂಡು, ಈ ದೇಶದ ಜನರ ಜತೆ ಬೆರೆತು, ಅತ್ಯಂತ ಪ್ರಭಾವಶಾಲಿ ರಾಜಕೀಯ ನಾಯಕಿಯಾಗಿ ಬೆಳೆದರು. ಇದೊಂದು ಅಸಾಧಾರಣ ಬೆಳವಣಿಗೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸೋನಿಯಾ ಗಾಂಧಿ ಅವರ ಆತ್ಮಕಥನದ್ 1000 ಪುಸ್ತಕಗಳನ್ನು ಖರೀದಿಸಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪುಸ್ತಕಗಳನ್ನು ವಿತರಿಸಲಾಗುವುದು ಎಂದರು.

ಮಾಜಿ ಮುಖ್ಯಮಂತ್ರಿ ವಿರಪ್ಪ ಮೊಯ್ಲಿ, ಎಐಸಿಸಿ ರಾಜ್ಯ ಉಸ್ತುವಾರಿ ಪಳನಿಯಪ್ಪನ್, ಸಚಿವರಾದ ರಾಮಲಿಂಗಾ ರೆಡ್ಡಿ, ಬಾಲಕೃಷ್ಣ, ರಘುಮೂರ್ತಿ,ಹಾಗೂ ಶಾಸಕರು ,ಮಾಜಿ ಸಂಸದರು ಕೆಪಿಸಿಸಿ ಪಧಾದಿಕಾರಿಗಳು ಇದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vijayvani