ವಾಷಿಂಗ್ಟನ್/ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವೆ 15 ದಿನಗಳ ಕದನ ವಿರಾಮ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ, ಇರಾನ್ 'ಹಾರ್ಮುಜ್ ಜಲಸಂಧಿ'ಯನ್ನು (Strait of Hormuz) ಮತ್ತೆ ಬಂದ್ ಮಾಡಿದೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಭೀಕರ ದಾಳಿಯೇ ಇರಾನ್‌ನ ಈ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರದಿಯಾಗಿದೆ.
24 ಗಂಟೆಯಲ್ಲೇ ಉಲ್ಟಾ ಹೊಡೆದ ಇರಾನ್!
ಬುಧವಾರವಷ್ಟೇ ಅಮೆರಿಕ ಮತ್ತು ಇರಾನ್ ನಡುವೆ ಎರಡು ವಾರಗಳ ಕದನ ವಿರಾಮ ಘೋಷಿಸಲಾಗಿತ್ತು. ಈ ಒಪ್ಪಂದದ ಭಾಗವಾಗಿ ಇರಾನ್ ತನ್ನ ನಿಯಂತ್ರಣದಲ್ಲಿದ್ದ ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಲು ಒಪ್ಪಿತ್ತು. ಇದರಿಂದ ಜಾಗತಿಕ ಇಂಧನ ಪೂರೈಕೆ ಸುಗಮವಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಇಸ್ರೇಲ್‌ನ ನಡೆ ಈಗ ಎಲ್ಲವನ್ನೂ ತಲೆಕೆಳಗಾಗಿಸಿದೆ.ಲೆಬನಾನ್ ಮೇಲೆ ಇಸ್ರೇಲ್ ಅಟ್ಯಾಕ್: 112 ಮಂದಿ ಸಾವು
ಇರಾನ್ ಜೊತೆಗಿನ ಅಮೆರಿಕದ ಒಪ್ಪಂದಕ್ಕೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬೆಂಬಲ ಸೂಚಿಸಿದ್ದರೂ, ಅದು ಲೆಬನಾನ್‌ಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. "ಇರಾನ್ ಮತ್ತು ಅಮೆರಿಕ ನಡುವಿನ ಒಪ್ಪಂದದಲ್ಲಿ ಲೆಬನಾನ್ ಸೇರಿಲ್ಲ" ಎಂದು ನೆತನ್ಯಾಹು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇತ್ತ ಲೆಬನಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 112 ಮಂದಿ ಸಾವನ್ನಪ್ಪಿದ್ದು, 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದು ಇರಾನ್ ಅನ್ನು ಕೆರಳುವಂತೆ ಮಾಡಿದೆ.ಟ್ರಂಪ್ ಹೇಳಿದ್ದೇನು? ಅದು ನಮ್ಮ ಡೀಲ್‌ನಲ್ಲಿ ಇಲ್ಲ!
ಲೆಬನಾನ್ ಮೇಲೆ ದಾಳಿ ನಡೆಯುತ್ತಿದ್ದರೂ ನೀವೇಕೆ ಮೌನವಾಗಿದ್ದೀರಿ ಎಂಬ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ವಿಚಿತ್ರ ಉತ್ತರ ನೀಡಿದ್ದಾರೆ. "ಹಿಜ್ಬುಲ್ಲಾ ಮತ್ತು ಲೆಬನಾನ್ ಈ ಕದನ ವಿರಾಮ ಒಪ್ಪಂದದ ಭಾಗವಾಗಿಲ್ಲ. ಅದು ಪ್ರತ್ಯೇಕವಾದ ಸಂಘರ್ಷ. ಅದರ ಬಗ್ಗೆ ಆಮೇಲೆ ನೋಡೋಣ" ಎಂದು ಟ್ರಂಪ್ ಹೇಳುವ ಮೂಲಕ ಇಸ್ರೇಲ್ ದಾಳಿಯನ್ನು ಪರೋಕ್ಷವಾಗಿ ಬೆಂಬಲಿಸಿದ್ದಾರೆ.ಜಾಗತಿಕ ಆರ್ಥಿಕತೆಗೆ ಮತ್ತೆ ಹೊಡೆತ?
ವಿಶ್ವದ ಪ್ರಮುಖ ತೈಲ ಸಾಗಾಣಿಕೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗುವ ಭೀತಿ ಎದುರಾಗಿದೆ. ಇಸ್ರೇಲ್ ತನ್ನ ದಾಳಿಯನ್ನು ನಿಲ್ಲಿಸದಿದ್ದರೆ ಶಾಂತಿ ಮಾತುಕತೆ ಅಸಾಧ್ಯ ಎಂದು ಇರಾನ್ ಎಚ್ಚರಿಕೆ ನೀಡಿದೆ,(ಏಜೆನ್ಸೀಸ್).ಇನ್ನಷ್ಟು ಓದಿ

