Dailyhunt
ಸ್ತ್ರೀ ವಿರೋಧಿ ಕಾಂಗ್ರೆಸ್​ ವಿರುದ್ಧ ನಿರಂತರ ಹೋರಾಟ

ಸ್ತ್ರೀ ವಿರೋಧಿ ಕಾಂಗ್ರೆಸ್​ ವಿರುದ್ಧ ನಿರಂತರ ಹೋರಾಟ

ಸೇಡಂ: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರಿಗೆ ರಾಜಕೀಯವಾಗಿ ಸಮಾನ ಹಕ್ಕು ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಲು ಹೊರಟಿದ್ದ ಶೇ.33 ಮಹಿಳಾ ಮೀಸಲಾತಿ ಮಸೂದೆಗೆ ಕಾಂಗ್ರೆಸ್​ ಮತ್ತು ಅದರ ಬೆಂಬಲಿತ ಪಾರ್ಟಿಗಳ ಕುತಂತ್ರದಿಂದ ಸೋಲಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯೆ ಸಂತೋಷಿರಾಣಿ ಪಾಟೀಲ್​ ತೆಲ್ಕೂರ ದೂರಿದರು.ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಿಂದ ರೈಲ್ವೆ ನಿಲ್ದಾಣದವರೆಗೆ ನಾರಿಶಕ್ತಿ ವಂದನಾ ಅಧಿನಿಯಮ ಜಾರಿಯಾಗದಂತೆ ತಡೆದ ಕಾಂಗ್ರೆಸ್​ ಪಕ್ಷದ ಕುತಂತ್ರ ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾದಿಂದ ಗುರುವಾರ ಹಮ್ಮಿಕೊಂಡಿದ್ದ ಬೃಹತ್​ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿ, ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರಿದ್ದಾರೆ.
ನಮಗೂ ರಾಜಕೀಯ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಮೋದಿ ಸರ್ಕಾರ ಮೀಸಲಾತಿ ಕರಡನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಹಿಂದಿನಿಂದಲೂ ಮಹಿಳಾ ವಿರೋಧಿಯಾಗಿರುವ ಕಾಂಗ್ರೆಸ್​ ಪಕ್ಷ ತನ್ನ ಮಿತ್ರ ಪಕ್ಷಗಳೊಂದಿಗೆ ಸೇರಿಕೊಂಡು ಕುತಂತ್ರ ನಡೆಸುವ ಮೂಲಕ ಮಹಿಳಾ ಪರವಾದ ಬಿಲ್​ ಅನ್ನು ಸೋಲಿಸಿದೆ. ಇಂತಹ ಪಕ್ಷವನ್ನು ದೇಶದಲ್ಲಿ ಬೇರಿನಿಂದ ಕಿತ್ತೊಗೆಯುವ ಅವಶ್ಯವಿದೆ. ಅಲ್ಲಿವರೆಗೂ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದರು. ಮಹಿಳಾ ಮೋರ್ಚಾ ಜಿಲ್ಲಾಧ್ಯೆ ಗೌರಿ ಚಿಚಕೋಟೆ ಮಾತನಾಡಿ, ಮಹಿಳೆಯರಿಗೆ ಮೀಸಲಾತಿ ನೀಡಿದರೆ ನಮಗೆ ಉಳಿಗಾಲವಿಲ್ಲ ಎಂದು ಅರಿತ ಕಾಂಗ್ರೆಸ್​ ವಿರೋಧಿಸುವ ಕೆಲಸ ಮಾಡಿದೆ. ಮಹಿಳಾ ಪರವಾದ ಬಿಲ್​ ಒಂದು ಬಾರಿ ಸೋಲು ಕಂಡಿರಬಹುದು. ಆದರೆ ಮುಂಬರುವ ದಿನಗಳಲ್ಲಿ ಬಿಜೆಪಿ ಮಹಿಳೆಯರಿಗೆ ಸಮಾನತೆ ಕಲ್ಪಿಸುವ ಕೆಲಸ ಮಾಡಲಿದೆ ಎಂದು ತಿಳಿಸಿದರು. ಮಹಿಳಾ ಪ್ರಮುಖರಾದ ಮಹಾನಂದ ಸಾಹು, ಭಾಗ್ಯಲ್ಮ ನಾಯಿಕೋಡಿ ಮಾತನಾಡಿದರು. ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಕಾರ್ಯದರ್ಶಿ ಓಂಪ್ರಕಾಶ ಪಾಟೀಲ್​, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಿವಕುಮಾರ ತೊಟ್ನಳ್ಳಿ, ತಾಲೂಕು ಅಧ್ಯಕ್ಷ ಶರಣು ಮೆಡಿಕಲ್​, ಪುರಸಭೆ ಮಾಜಿ ಅಧ್ಯಕ್ಷರಾದ ಚನ್ನಮ್ಮ ಪಾಟೀಲ್​, ಶೋಭಾ ಹೂಗಾರ, ಮಹಿಳಾ ಮೋರ್ಚಾ ತಾಲೂಕು ಅಧ್ಯೆ ಶೈಲಜಾ ಹಿತ್ತಲ್​, ಪ್ರಮುಖರಾದ ರಾಮು ಕಣೇಕಲ್​, ನಾಗರಾಜ ತೊಟ್ನಳ್ಳಿ, ನಾಗಪ್ಪ ಕೊಳ್ಳಿ, ತಿರುಪತಿ ಶಹಾಬಾದಕರ್​, ರಾವೇಂದ್ರ ಮೆಕಾನಿಕ್​, ಶಿವಾನಂದಸ್ವಾಮಿ, ವೀರೇಶ ಹೂಗಾರ, ವಿನೋದ ಸಾಹುಕಾರ ದುಗನೂರ, ವಿಜಯಲ್ಮ ವಿಶ್ವಕರ್ಮ, ಸಂಗಪ್ಪ ಕುಂಬಾರ, ಸಾಗರ ಕಲಕಂಭ, ರಾಜು ಕಟ್ಟಿ, ಸಿದ್ದಲಿಂಗ ಗೌತಂ, ಸಿದ್ದು ಊಡಗಿ, ಮಹಾವೀರ ಅಳ್ಳೊಳ್ಳಿ, ದಿನೇಶ ನಾಯ್ಕೋಡಿ, ಶ್ರೀಮಂತ ಅವಂಟಿ, ದೇವಿಂದ್ರಪ್ಪ ಕೊಟ್ರಕಿ, ಶಿವಕುಮಾರ ಪಾಗಾ, ಮಹಾಂತೇಶ ಊಡಗಿ, ಬಾಲರಾಜ್​ ಕೊಡಸಾ, ಶಿಲ್ಪಾ ಪಾಟೀಲ್​, ಸರಿತಾ ಕುಲಕರ್ಣಿ, ಜಯಶ್ರೀ ಬೋಳದ, ಜೈಪ್ರಕಾಶ ರಾಠೋಡ್​ ಇತರರಿದ್ದರು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani