Dailyhunt Logo
  • Light mode
    Follow system
    Dark mode
    • Play Story
    • App Story
ಸ್ವಾತಂತ್ರ್ಯ ಸಂಭ್ರಮದಲ್ಲಿ ನಾವು ಕಲಿಯಬೇಕಾದ ಪಾಠಗಳು

ಸ್ವಾತಂತ್ರ್ಯ ಸಂಭ್ರಮದಲ್ಲಿ ನಾವು ಕಲಿಯಬೇಕಾದ ಪಾಠಗಳು

| (ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ಕೆಲವೇ ದಿನಗಳ ಹಿಂದೆಯಷ್ಟೇ 80ನೇ ಸ್ವಾತಂತ್ರ್ಯೋತ್ಸವ ಆಚರಿಸಿದ್ದೇವೆ. ಇಂದಿಗೂ ಆ.15 ಬಂತೆಂದರೆ ಏನೋ ಪುಳಕ! ಏನೋ ಉಲ್ಲಾಸ! ಮನಸ್ಸು ಮುದದಿಂದ ತುಂಬುತ್ತೆ. ಇನ್ನೂ ಎಷ್ಟು ಕೆಲಸ ಬಾಕಿ ಇದೆ; ಈ ವಯಸ್ಸು ನೋಡಿದರೆ ದಿನೇ ದಿನೇ ಜಾರಿ ಹೋಗುತ್ತಿದೆ ಎಂಬ ಭಾವವೂ ಒಮ್ಮೆ ಮನಸ್ಸಿನಲ್ಲಿ ಸುಳಿಯದೇ ಇರದು.

ಯಾರಿಗೂ, ಯಾವ ಕಾಲದಲ್ಲೂ ಕೇಡು ಬಯಸದ ದೇಶ ನಮ್ಮದು. ಅಷ್ಟೇ ಅಲ್ಲ. ಅಂದೂ ಇಂದೂ ತಾನು ಹೋದ ದೇಶ, ಪ್ರಾಂತ್ಯಗಳ ಒಳಿತಿಗೆ ಅತ್ಯಂತ ಪ್ರಾಮಾಣಿಕವಾಗಿ ಮಿಡಿದ, ದುಡಿದ ಜನ ಭಾರತೀಯರು. ದಿನ ಬೆಳಗಾದರೆ ಯುರೋಪಿಯನ್ ರಾಷ್ಟ್ರಗಳಲ್ಲಿ ಬೇರೆ ಏಷ್ಯನ್ನರು ಎಸಗುತ್ತಿರುವ ಹಿಂಸೆ, ಕಾದಾಟ, ಗಲಾಟೆಗಳನ್ನು ನೋಡುತ್ತಿದ್ದರೆ ಮತ್ತು ಭಾರತೀಯರ ಕಡೆಯಿಂದ ಇಂಥ ಅವಘಡಗಳು ನಡೆದ ಒಂದು ಸುದ್ದಿಯೂ ಕಣ್ಣಿಗೆ ಬೀಳದಿದ್ದಾಗ ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟ ಸಂಸ್ಕೃತಿ ಅದೆಷ್ಟು ಅಮೂಲ್ಯ ಎನ್ನಿಸದಿರದು. ಒಬ್ಬ ಹಿಂದೂ ಬದುಕಿದ ರೀತಿಯೇ ಹೀಗೆ. ಪಾಶ್ಚಾಯತ್ಯರು ಅವನನ್ನು ಕರೆದದ್ದು ಖಜಛಿ ಞಜ್ಝಿಛ ಏಜ್ಞಿಛ್ಠ ಎಂತಲೇ. ಅಷ್ಟೇ ಅಲ್ಲ. ದೇಶ ಹಾಗೂ ಧರ್ಮಗಳ ದೃಷ್ಟಿಯಿಂದ ನಮ್ಮವರಲ್ಲದ ಜನ ಈ ದೇಶಕ್ಕೆ ಓಡಿ ಬಂದು ಆಶ್ರಯಕ್ಕಾಗಿ ಬೇಡಿಕೊಂಡಾಗ ಯಾವ ಬಿಗುಮಾನವನ್ನೂ ತೋರಿಸದೆ ಅವರಿಗೆ ಆಶ್ರಯ ಕೊಟ್ಟು ತಮ್ಮ ದೇಶದಲ್ಲಿ ಎಷ್ಟು ಸ್ವತಂತ್ರವಾಗಿ ಬದುಕುತ್ತಿದ್ದರೋ ಅಷ್ಟೇ ಸ್ವತಂತ್ರರಾಗಿ ಇಲ್ಲಿಯೂ ಬದುಕುವುದಕ್ಕೆ ಎಲ್ಲ ಅನುಕೂಲಗಳನ್ನು ಕೊಟ್ಟ ರಾಷ್ಟ್ರ ನಮ್ಮದು.

ಇದನ್ನು ಎಂದೆಂದಿಗೂ ಸ್ಮರಿಸಿಕೊಂಡು ಕೃತಜ್ಞತೆ ಸಲ್ಲಿಸುತ್ತಿರುವವರು ಇಸ್ರೇಲಿನ ಯಹೂದ್ಯರು ಮತ್ತು ಪರ್ಷಿಯಾದಿಂದ ಓಡಿ ಬಂದ ಪಾರ್ಸಿಗಳು. ಜಗತ್ತಿಗೇ ಇದೊಂದು ಪಾಠ. ಅದರಲ್ಲೂ ಅನಾಗರಿಕ, ಬರ್ಬರ ಸಂಸ್ಕೃತಿಹೀನ, ಜ್ಞಾನಹೀನ ಜನಾಂಗಗಳು ಇದನ್ನು ನೋಡಿ ಪಾಠ ಕಲಿಯಬೇಕು. ಈ ವೇಳೆಗೇ ಕಲಿತಿದ್ದಿದ್ದರೆ ಇಂದು ಯುರೋಪ್ 'ಈ ಜನರನ್ನು ಒಳಗೆ ಬಿಟ್ಟುಕೊಂಡು ತಪ್ಪು ಮಾಡಿದೆವು' ಎಂದು ಪಶ್ಚಾತ್ತಾಪಪಡುತ್ತಿರಲಿಲ್ಲ. ಯುರೋಪಿಯನ್ನರೇನೂ ಸಾಚಾ ಅಲ್ಲ. ಯಹೂದ್ಯರಂತೆಯೋ, ಪಾರ್ಸಿಗಳಂತೆಯೋ ಅಲ್ಲ. ಇಡೀ ದಕ್ಷಿಣ ಅಮೆರಿಕಾ ಖಂಡ, ಏಷ್ಯಾ ಖಂಡ, ಆಫ್ರಿಕಾಗಳು ಯೂರೋಪಿಯನ್ನರ ಧರ್ವಂಧತೆ, ಕ್ರೌರ್ಯ, ರಕ್ತಪಿಪಾಸುತನಗಳಿಂದ ನಲುಗಿವೆ. ಇಂದಿಗೂ ಅವರ ಶಕುನಿಯಾಟದ ಕಹಿಗಳನ್ನು ಅನುಭವಿಸುತ್ತಿವೆ. ಎಲ್ಲ ಸಂಸ್ಕೃತಿ, ಧರ್ಮ, ಭಾಷೆಗಳನ್ನೂ ಧ್ವಂಸ ಮಾಡಿ ವೈವಿಧ್ಯತೆಯಲ್ಲಿ ಏಕತೆ ಎಂಬ ಸೂತ್ರಕ್ಕೆ ಶ್ರಾದ್ಧ ಮಾಡಿ, ನಾರ್ವೆಯಿಂದ ಅಲಾಸ್ಕಾದವರೆಗೆ ಈಗ ಏನು ಸಾಧಿಸಿದ್ದಾರೋ ಅದನ್ನೇ ಪ್ರಪಂಚದಾದ್ಯಂತ ಮಾಡುವುದೇ ಅವರ ರಕ್ತಕ್ಕೆ ಇಳಿದು ಹೋದ ಆಸುರೀಗುಣ. ತಮ್ಮ ಧರ್ಮ, ಭಾಷೆ, ರೀತಿಗಳೇ ಶ್ರೇಷ್ಠ. ಅವು ಮಾತ್ರ ಅಸ್ತಿತ್ವದಲ್ಲಿರಬೇಕು.

ಬೇರೆ ಯಾವುದೂ ಅಸ್ತಿತ್ವದಲ್ಲಿರಲು ಯೋಗ್ಯವಲ್ಲ. ಅವರು ಉಸಿರಾಡುವುದು ಇದೇ ತತ್ವವನ್ನೇ. ಇಡೀ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸಲು 9 ಪದಗಳ ಈ ಒಂದು ವಾಕ್ಯ ಸಾಕು. ಅದೇ ಐಠ ಠಿಜಜಿಠ ಢಟ್ಠ್ಟ? ಜಿಠಿ ಜಿಠ ಞಜ್ಞಿಛಿ ್ಞಡಿ, ಜಟ ಚಡಿಚಢ! ಈ ಜಾಗ ನಿಮ್ಮದೇ? ಇನ್ನು ಮೇಲೆ ನಮ್ಮದು. ನೀವು ಬೇರೆಲ್ಲಾದರೂ ಹೋಗಿ. ಇದು ರಾಕ್ಷಸ ಸಂಸ್ಕೃತಿ. ಅವರೆಲ್ಲಾ ವಿರೋಚನನ ವಂಶದವರೆಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ವಿರೋಚನ ಪ್ರಹ್ಲಾದನ ಮಗ ಮತ್ತು ಬಲಿಯ ತಂದೆ ಎಂದು ಪ್ರತೀತಿ. ಇಂಥ ಧರ್ಮಪೀಡಕ, ರಾಷ್ಟ್ರಪೀಡಕರನ್ನು ಭಾರತೀಯ ಮಣ್ಣು ಎಂದೂ ಸಹಿಸಲ್ಲ. ಆದ್ದರಿಂದಲೇ ವಿರೋಚನನ ಮಗ ಬಲಿ ಭಾರತವನ್ನು ಬಿಟ್ಟು ದಕ್ಷಿಣ ಅಮೆರಿಕಕ್ಕೆ ಹೋಗಬೇಕಾಯ್ತು. 'ವಸುಧೈವ ಕುಟುಂಬಕಂ' ತತ್ವಕ್ಕೆ ಭಾರತ ಬದ್ಧ, ರಾಜಕೀಯವಾಗಿ. 'ಸತ್ಯ ಒಂದು, ಜ್ಞಾನಿಗಳು ಅದನ್ನು ಬೇರೆ ಬೇರೆ ರೀತಿಯಲ್ಲಿ ವರ್ಣಿ ಸುತ್ತಾರೆ. 'ಏಕಂ ಸತ್ ವಿಪ್ರಾ ಬಹುಧಾ ವದಂತಿ'. ಇದು ನಮ್ಮ ಬದ್ಧತೆ, ಧಾರ್ವಿುಕವಾಗಿ.

ಇಷ್ಟು ವಿಶಾಲ ದೃಷ್ಟಿಯುಳ್ಳ ಭಾರತ ಸಾವಿರ ವರ್ಷದ ಗುಲಾಮಗಿರಿಗೆ ಏಕೆ ಒಳಗಾಯ್ತು? ಕೇವಲ ವಿಶಾಲ ದೃಷ್ಟಿಯಷ್ಟೇ ಅಲ್ಲ. ಮನುಷ್ಯನ ಭವ್ಯತೆಯ ಪ್ರತಿಯೊಂದೂ ಮಜಲಿನ ಶಿಖರವನ್ನೇ ಮುಟ್ಟಿದ್ದ ಭಾರತ ಏಕೆ ಇಡೀ ಎರಡನೇ ಸಹಸ್ರಮಾನದುದ್ದಕ್ಕೂ ದಾಸ್ಯಕ್ಕೊಳಗಾಯಿತು? ನಮ್ಮ ಮಕ್ಕಳಿಗೆ ಇಟ್ಟಿರುವ ಇತಿಹಾಸ ಪುಸ್ತಕವಾಗಲಿ, ಇತಿಹಾಸದ ಶಿಕ್ಷಕ, ಪೊ›ಫೆಸರ್ ಆಗಲಿ ಇದೊಂದು ಗಮನಿಸಲೇಬೇಕಾದ ವಿಷಯ ಎಂದು ಭಾವಿಸಿಯೇ ಇಲ್ಲ. ಅವಶ್ಯಕ, ಅಮೂಲ್ಯ ವಿಷಯಗಳಿಗೆ ಪಠ್ಯದಲ್ಲಿ ಜಾಗ ಇಲ್ಲದಂತೆ ನೋಡಿಕೊಂಡಿದ್ದಾರೆ ನಮ್ಮ ಪಠ್ಯ ಸಮಿತಿಯವರು. ಈಗಿರುವ ಇತಿಹಾಸ ಚಂದಮಾಮ ಪುಸ್ತಕಕ್ಕೆ ಲಾಯಕ್ಕು! ಆದರೆ ಜರ್ಮನಿಯ ಮಹಾನ್ ಚಿಂತಕ ಫ್ರೆಡ್ರಿಕ್ ಹೆಗಲ್ ಬಹಳ ನೋವಿನಿಂದ ಈ ಪ್ರಶ್ನೆ ಕೇಳುತ್ತಾರೆ. ವಿಲ್ ಡ್ಯೂರೆಂಟ್ ಈ ಪ್ರಶ್ನೆಗೆ ಉತ್ತರವನ್ನೇ ಕಂಡು ಹಿಡಿದಿದ್ದಾರೆ. ಅದೇ- ಭಾರತೀಯರು ಎಚ್ಚರ ತಪ್ಪಿದ್ದು! ಮೈಮರೆತಿದ್ದು! ಇದೇ ಅವರು ಕೊಡುವ ಉತ್ತರ. ನಿರಂತರ ಎಚ್ಚರಿಕೆಯೇ ನಾವು ಎಂದೆಂದಿಗೂ ಸ್ವಾತಂತ್ರ್ಯಕ್ಕಾಗಿ ತೆರಬೇಕಾದ ಬೆಲೆ.

ಚಂದಮಾಮ ಕಥೆಗಳನ್ನು ಹೇಳಿದ ಯುರೋಪಿಯನ್ ಚರಿತ್ರಕಾರರ ಕಿವಿ ಹಿಂಡಿದಂತಿವೆ ಅವರ ಉಲ್ಲೇಖಗಳು. ಬ್ರಿಟಿಷರ ಮುಖಕ್ಕೆ ಮಂಗಳಾರತಿಯನ್ನೇ ಎತ್ತಿದ್ದಾರೆ ಅವರು. ಸ್ವಾತಂತ್ರ್ಯ ಕೊಡಲೇಬೇಕೆಂದು ಸ್ಪಷ್ಟ ಭಾಷೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಧ್ವನಿ ಎತ್ತಿದವರು ವಿಲ್ ಡ್ಯುರೆಂಟ್ ಮತ್ತು ಲಿಯೋ ಟಾಲ್ಸ್ಟಾಯ್. ಇದರ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದು ಸ್ವಾಮಿ ವಿವೇಕಾನಂದರ ಮಹಾನ್ ಶಿಷ್ಯೆ, ನ್ಯೂರ್ಯಾನ ಜೋಸೆಫಿನ್ ಮ್ಯಾಕ್ಲಾಡ್ ಮತ್ತು ನೊಬೆಲ್ ವಿಜೇತ ರೋಮೈ ರೋಲಾ. ಟಾಲ್ಸ್ಟಾಯ್ ಮತ್ತು ರೋಮೈ ರೋಲಾ ಆತ್ಮೀಯ ಸ್ನೇಹಿತರು. ನನ್ನ ಆತ್ಮೀಯರಾಗಿದ್ದ ದಿ. ಪಾಟೀಲ ಪುಟ್ಟಪ್ಪ ಒಮ್ಮೆ ಅಮೆರಿಕದಲ್ಲಿ ವಿಲ್ ಡ್ಯೂರೆಂಟರನ್ನು ಭೇಟಿಯಾಗಿದ್ದಾಗ ತರುಣ ಪುಟ್ಟಪ್ಪನವರನ್ನು ಕುರಿತು ಅವರು ಹೇಳಿದ್ದರಂತೆ, 'ಯುವಕನೇ, ನಿನ್ನ ದೇಶ ಮಹಾನ್, ನೀನು ಅದನ್ನು ಮತ್ತಷ್ಟು ಮಹತ್ತದ್ದನ್ನಾಗಿ ಮಾಡಬೇಕು' ಎಂದು. ಹಾಗಾದರೆ ನಾವು ಎಚ್ಚರ ತಪ್ಪಿದ್ದೆಲ್ಲಿ ? ದೀರ್ಘ ಗುಲಾಮಗಿರಿಗೆ ಕಾರಣವೇನು?

ಅಲೆಗ್ಸಾಂಡರ್ ಬರುವ ಕಾಲಕ್ಕೆ ಯಾವ ಕ್ಷಾತ್ರತೇಜಸ್ಸಿನಿಂದ ಭಾರತೀಯ ರಾಜರು ಮೆರೆಯುತ್ತಿದ್ದರೋ (ಪ್ಲುಟಾರ್ಕ್ನ ಗ್ರೀಕ್ ಚರಿತ್ರೆಯನ್ನು ಓದಿ) ಅದು, ಕೆಲವು ಧರ್ಮಗಳು ಅಹಿಂಸೆಗೆ ನೀಡಿದ ವೈಪರೀತ್ಯದಿಂದಾಗಿ ಕುಸಿದು ಹೋಯಿತು. ದಲಾಯಿ ಲಾಮಾರನ್ನು ಟಿಬೆಟ್ಟಿನಿಂದ ಓಡಿಸಿದಾಗ ಅವರು ಹೇಳಿದ ಮಾತುಗಳನ್ನು ಗಮನಿಸಿ! ಭಾರತೀಯ ರಾಜ ಸಾಮಾನ್ಯಧರ್ಮ ಮತ್ತು ಆಪದ್ಧರ್ಮಗಳ ನಡುವಿನ ವ್ಯತ್ಯಾಸವನ್ನು ಮರೆತು ಶತ್ರು ಶೇಷವನ್ನೇ ಉಳಿಸಬಾರದೆಂಬ ಚಾಣಕ್ಯ ನೀತಿಗೆ ತಿಲಾಂಜಲಿಯನ್ನಿತ್ತು ಸೋತ ಶತ್ರುವನ್ನು ಕ್ಷಮಿಸಿ ಕೊನೆಗೆ ಬರ್ಬರ ಸಂಸ್ಕೃತಿಯ ಆ ಕೃತಘ್ನನ ದ್ರೋಹಕ್ಕೆ ಬಲಿಯಾದದ್ದು ಮುಂದಿನ ದುರಂತಗಳಿಗೆ ನಾಂದಿಹಾಡಿತು. ಇಷ್ಟೇ ಗಂಭೀರವಾದ್ದು ಪ್ರಾದೇಶಿಕ ಹಿತವನ್ನು ರಾಷ್ಟ್ರಹಿತಕ್ಕಿಂತ ಮುಖ್ಯವಾಗಿಸಿದ್ದು. ಕಠೋರ ಜಾತಿ ನೀತಿಗಳಿಂದಾಗಿ ಜನಸಾಮಾನ್ಯರು ಮತ್ತು ಆಳುವ ವರ್ಗಗಳ ನಡುವೆ ಬಲಿಷ್ಠ ಸಂಬಂಧಗಳು ನಿರ್ವಣವಾಗದಿದ್ದುದು.

ಇದರಲ್ಲಿ ಎಲ್ಲಕ್ಕಿಂತ ಮುಖ್ಯವಾದದ್ದು ರಾಜರು ತಮ್ಮ ರಾಜ್ಯದ ಹಿತವನ್ನು ದೇಶದ ಹಿತಕ್ಕಿಂತ ಮಿಗಿಲು ಎಂದು ಭಾವಿಸಿದ್ದು. 'ಮ್ಲೇಚ್ಛ' ಎಂಬ ಪದವನ್ನು ಕಂಡು ಹಿಡಿದು ಹೊರರಾಷ್ಟ್ರಗಳೊಡನೆ ಯಾವುದೇ ರೀತಿಯ ಸಂಪರ್ಕವೂ ಕಡಿದು ಹೋಗಿ ಇಡೀ ರಾಷ್ಟ್ರವೇ 'ಕೂಪಮಂಡೂಕ ನ್ಯಾಯ'ದ ದುರಂತಕ್ಕೆ ತಳ್ಳಲ್ಪಟ್ಟಿದ್ದು. ಮೇಲಿನ ಬಹಳಷ್ಟು ಸಮಸ್ಯೆಗಳು ಅಥವಾ ಕೊರತೆಗಳು ಇಂದು ನೀಗಿವೆ. ರಾಷ್ಟ್ರಪ್ರೇಮವು ಇವೆಲ್ಲದರ ಮೂಲ ಬೇರು. ಆ ಮೌಲ್ಯ ಇನ್ನೂ ಗಗನಕುಸುಮವೇ ಆಗಿದೆ. ಜಾತಿ ಪ್ರೇಮ, ಸ್ವಜನ ಪ್ರೇಮ, ಪ್ರಾದೇಶಿಕ ನಿಷ್ಠೆ, ಪಕ್ಷ ನಿಷ್ಠೆ, ಭಾಷಾ ಪ್ರೇಮ, ರಾಷ್ಟ್ರೀಯ ಹಿತವನ್ನೇ ಕಡೆಗಣಿಸಿ ತಮ್ಮ ವಿಕೃತ, ಕುರೂಪ ಪ್ರದರ್ಶನಗಳನ್ನು ಆಗಾಗ್ಗೆ ಮಾಡುತ್ತಿರುತ್ತವೆ. ಇದಕ್ಕೆಲ್ಲ ನೀರೆರೆಯುವಂತೆ ಆತ್ಮಗೌರವ, ದೇಶಾಭಿಮಾನ, ರಾಷ್ಟ್ರೀಯ ಅಸ್ಮಿತೆಗಳನ್ನು ಮೂಲೋತ್ಪಾಟನೆ ಮಾಡಲು ಪಣ ತೊಟ್ಟಂತಿದೆ ನಮ್ಮ ಇತಿಹಾಸದ ಪಠ್ಯಗಳು. ಇಡೀ ಪ್ರಪಂಚದಲ್ಲಿ ಆಕ್ರಮಣಕಾರರನ್ನು ವೈಭವೀಕರಿಸಿ, ಅವರ ಹೆಸರುಗಳನ್ನು ರಾಷ್ಟ್ರ ರಾಜಧಾನಿಯ ಬೀದಿಗಳಿಗೆ, ಬೃಹತ್ ಪಟ್ಟಣಗಳಿಗಿಟ್ಟು ಅವರು ದೇಶೀಯ ರಾಜರನ್ನು ಎಷ್ಟು ಹೀನಾಯವಾಗಿ ಸೋಲಿಸಿದರು ಎಂಬುದನ್ನು ವರ್ಣರಂಜಿತವಾಗಿ ಉಲ್ಲೇಖಿಸಿ, ಬೆಳೆಯುವ ಮಕ್ಕಳ ಮನಸ್ಸಿನಲ್ಲಿ ದೇಶದ ಬಗ್ಗೆ ದ್ವೇಷ ಇಲ್ಲವೇ ಅಸಡ್ಡೆ ನಿರ್ವಿುಸುವಲ್ಲಿ ಯಶಸ್ಸನ್ನು ಕಂಡಿದೆ ಭಾರತೀಯ ಪಠ್ಯ ರಚನಾ ಸಮಿತಿ.

ಇಂದು ಆಗಬೇಕಾದ ಅತ್ಯಂತ ಮಹತ್ವಪೂರ್ಣ ಕೆಲಸಗಳಲ್ಲಿ ಮುಖ್ಯವಾದದ್ದು ಭಾರತದ ಚರಿತ್ರೆಯ ಪುನರ್ನಿರ್ವಣ. ರಾಜಕೀಯ ಪಕ್ಷಗಳು ತಮ್ಮ ಕಾಮಾಲೆ ರೋಗದಿಂದ ಹೊರಬಂದು ರಾಷ್ಟ್ರಹಿತವನ್ನೇ ಮುಖ್ಯವಾಗಿಸಿಕೊಳ್ಳಬೇಕು. ಒಂದು ರಾಷ್ಟ್ರದ ಬಹುಮುಖ ಅಭಿವೃದ್ಧಿಯಲ್ಲಿ ರಾಜಕೀಯ ಔನ್ನತ್ಯ ಒಂದು ಮುಖ ಮಾತ್ರ. ಯುರೋಪಿಯನ್ ಇತಿಹಾಸಕಾರರಿಗೆ ಅದೇ ಸರ್ವಮಾನ್ಯ. ಭಾರತೀಯರ ದೃಷ್ಟಿಯಲ್ಲಿ ಜನಾಂಗದ ಪ್ರೌಢಿಮೆ ಇರುವುದು ಆಧ್ಯಾತ್ಮಿಕ ಔನ್ನತ್ಯದಲ್ಲಿ ಯುರೋಪಿನ ಪಾದ್ರಿಯೊಬ್ಬ ತನ್ನ ಕುಲದ ಮೂಲ ಪುರುಷನನ್ನು ದರೋಡೆಕೋರನಲ್ಲಿ ಕಾಣಲು ಹೆಮ್ಮೆಪಟ್ಟರೆ ಭಾರತದ ರಾಜ ಕಾಡಿನಲ್ಲಿ ಭಿಕ್ಷುಕನಂತೆ ವಾಸಿಸುತ್ತಿದ್ದ ತಪಸ್ವಿಯಲ್ಲಿ ಕಾಣಲು ಹೆಮ್ಮೆ ಪಡುತ್ತಾನೆ ಎಂಬ ಸ್ವಾಮಿ ವಿವೇಕಾನಂದರ ಮಾತು ಭಾರತೀಯ ಚರಿತ್ರೆಯನ್ನು ಬರೆಯುವಲ್ಲಿ ಯುರೋಪಿಯನ್ ಚಿಂತಕನ ಅಸಮರ್ಥತೆಯನ್ನು ಎತ್ತಿ ತೋರಿಸುತ್ತದೆ. ಇಂಥ ಚರಿತ್ರೆಯನ್ನು ಓದಿದ ಭಾರತೀಯ ಯುವಕನಿಂದ ತಾಯ್ನಾಡಿಗೆ ಯಾವ ಸೇವೆ, ಯಾವ ತ್ಯಾಗವನ್ನು ನೀವು ನಿರೀಕ್ಷಿಸುತ್ತೀರಿ. ರಾಷ್ಟ್ರದ ಔನ್ನತ್ಯವನ್ನು ಸಾಧಿಸುವಲ್ಲಿ ಬಲಿಷ್ಠ, ಸಮರ್ಥ, ಸಶಕ್ತ ಮನಸ್ಸುಗಳ ನಿರ್ವಣಕ್ಕೆ ಪ್ರಥಮ ಆದ್ಯತೆ ಇರಬೇಕು. ಅದು ಪ್ರಾರಂಭವಾಗಬೇಕಾದ್ದು ವಿದ್ಯಾರ್ಥಿ ದೆಸೆಯಿಂದಲೇ. ಅದರ ಬುನಾದಿಯೇ ಆತ್ಮಗೌರವ ಮತ್ತು ಅಸ್ಮಿತೆ. ಅದು ಮಾತ್ರ ವಿಸ್ಮೃತಿಯಿಂದ ನಮ್ಮನ್ನು ಪಾರು ಮಾಡಬಲ್ಲದು.



Dailyhunt
Disclaimer: This content has not been generated, created or edited by Dailyhunt. Publisher: Vijayvani