Dailyhunt Logo
  • Light mode
    Follow system
    Dark mode
    • Play Story
    • App Story
ತಂಬಾಕು ಬೆಳೆಯತ್ತ ರೈತರ ಚಿತ್ತ

ತಂಬಾಕು ಬೆಳೆಯತ್ತ ರೈತರ ಚಿತ್ತ

ತಂಬಾಕು ಬೆಳೆಯತ್ತ ರೈತರ ಚಿತ್ತ | ಆದಾಯ ಮೂಲವಾದ ಬೆಳೆ | ಗಡಿಭಾಗದಲ್ಲಿ ಚುರುಕುಗೊಂಡ ನಾಟಿ ಕಾರ್ಯ
ಆನಂದ ಭಮ್ಮನ್ನವರ ಚಿಕ್ಕೋಡಿ

ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಸೋಯಾಬಿನ್, ಹೆಸರು ಸೇರಿ ಬೆಳವಣಿಗೆಗಳ ಬೆಳವಣಿಗೆಗೆ ಹಿನ್ನಡೆಯಾಗಿದೆ. ಪರಿಣಾಮವಾಗಿ ಕಡಿಮೆ ಖರ್ಚಿನಲ್ಲಿ ಆದಾಯ ನೀಡುವ ವಾಣಿಜ್ಯ ಬೆಳೆಯಾದ ಸಾಕಷ್ಟು ಬೆಳೆಗಳು ಗಡಿಭಾಗದ ರೈತರು ಮುಖ ಮಾಡಿದ್ದು, ನಾಟಿ ಕಾರ್ಯ ಚುರುಕುಗೊಂಡಿದೆ.
ಕಳೆದ ಎರಡು ವರ್ಷಗಳಿಂದ ಬೆಲೆ ಕುಸಿತ, ಹವಾಮಾನ ವೈಪರೀತ್ಯ, ಮಾರುಕಟ್ಟೆಯ ಅಲಭ್ಯತೆಯಿಂದಾಗಿ ಸಾಕಷ್ಟು ಬೆಳೆಗಳಿಂದ ರೈತರು ವಿಮುಖರಾಗಿದ್ದಾರೆ. ಸದ್ಯ ಇತರ ಬೆಳೆಗೆ ಹೊಲಿಸಿದರೆ ಉತ್ಪಾದನಾ ವೆಚ್ಚ ಕಡಿಮೆ ಇರುವುದು ಹಾಗೂ ಅಲ್ಪ ಜಮೀನಿನಲ್ಲಿ ಹೆಚ್ಚಿನ ಲಾಭ ಸಿಗುತ್ತಿದೆ ತುಂಬಾ ಬೆಳೆಯತ್ತ ವಾಲುತ್ತಿದ್ದಾರೆ.
ಮಿಶ್ರ ಬೆಳೆಯಾಗಿ ನಾಟಿ
ಮುಂಗಾರಿನ ಆಗಸ್ಟ್ ತಿಂಗಳಿನಲ್ಲಿ ನಾಟಿ ಪ್ರಕ್ರಿಯೆ ಆರಂಭವಾಗುತ್ತದೆ. ಇದು 6 ತಿಂಗಳು ಬೆಳೆಯುತ್ತಿದ್ದರೆ, ಸೋಯಾಬಿನ್ ಜೊತೆಗೆ ಮಿಶ್ರ ಬೆಳೆಯಾಗಿ ಬೆಳೆದು ರೈತರು ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ. ಕಳೆದ ಬಾರಿ ಕೆಜಿಗೆ ೧೨೦-೨೦೦ ರೂ. ವರೆಗೆ ಮಾರಾಟವಾಗಿದೆ.
ಈ ಬಾರಿ ಕಬ್ಬಿನ ಇಳುವರಿ ಕಡಿಮೆಯಾಗುವ ಸಾಧ್ಯತೆ ಇದೆ. ಇದು ತುಂಬಾ ಬೆಳೆಯಲು ಮತ್ತೊಂದು ಕಾರಣ. ೨೦೨೪-೨೫ ಸಾಲಿನಲ್ಲಿ ೬,೬೪೨ ಹಾಗೂ ೨೦೨೫-೨೬ರ ಸಾಲಿನಲ್ಲಿ 4,853 ಹೆಕ್ಟೇರ್ ಪ್ರದೇಶದಲ್ಲಿ ತುಂಬಾಕು ನಾಟಿ ಮಾಡಲಾಗಿದೆ. ಈ ಬಾರಿ ಈ ನಾಟಿ ಕಾರ್ಯ ಪ್ರಗತಿಯಲ್ಲಿದ್ದು, ಅಂದಾಜು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಸಾಧ್ಯತೆಯಿದೆ.
ಕಡಿಮೆ ಖರ್ಚು ಆದಾಯ ಹೆಚ್ಚು:
ನಾಟಿ ದಿನದಿಂದ ಮಾರಾಟವಾಗದವರೆಗೆ ಸಸಿ, ಗೊಬ್ಬರ, ಔಷದ, ಕೂಲಿ ಕಾರ್ಮಿಕರ ಖರ್ಚು ಸೇರಿ 15-20 ಸಾವಿರ ರೂ. ವೆಚ್ಚ ತಗುಲುತ್ತದೆ. ಪ್ರತಿ ಎಕರೆಗೆ 600 ಕೆಜಿ ಯಿಂದ 1,200 ಕೆಜಿ ಇಳುವರಿ ಬರುತ್ತದೆ. ತುಂಬಾಕಿನ ನಿಕೋಟಿನ್ ಪ್ರಮಾಣ, ಎಲೆಗಳ ಗಾತ್ರ, ಗಣಮಟ್ಟದ ಆಧಾರದ ಮೇಲೆ ಕೆಜಿಗೆ 120-2000 ವರೆಗೆ ಮಾರಾಟವಾಗುತ್ತದೆ. ಕಳೆದ ಎರಡು ವರ್ಷದಿಂದ ಹೆಚ್ಚಿನ ಬೆಲೆ ಸಿಗುತ್ತಿರುವುದು ರೈತರ ಆಕರ್ಷಣೆಗೆ ಕಾರಣವಾಗಿದೆ.
-------
ಭಾಕ್ಸ್
ಪ್ರಸಿದ್ಧಿ ಪಡೆದ ತುಂಬಾಕು:
ಗಡಿಭಾಗ ನಿಪ್ಪಾಣಿಯಲ್ಲಿ ಹೆಚ್ಚು ತುಂಬಾ ಬೆಳೆಯಲು ಆಯ್ಕೆ. ಇದರೊಂದಿಗೆ ಚಿಕ್ಕೋಡಿ, ಹುಕ್ಕೇರಿ, ಬೈಲಹೊಂಗಲ ತಾಲೂಕಿನ ರೈತರು ತುಂಬಾಕು ಬೆಳೆಯುತ್ತಿದ್ದಾರೆ. ನಿಪ್ಪಾಣಿ ೧೧೯,೨೨ ತಳಿಯ ತುಂಬಾಕಿಗೆ ಹೆಚ್ಚಿನ ಬೇಡಿಕೆಯಿದೆ. ಗುಜರಾತ, ಬಿಹಾರ, ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರದ ರಾಜ್ಯದ ಬಿಡಿ ತಯಾರಿಕೆಯ ಕಂಪನಿಗಳು ಸ್ಥಳೀಯ ತುಂಬಾಕು ಖರೀದಿಸುತ್ತಾರೆ. ಇತ್ತೀಚೆಗೆ ಸಿಗರೇಟ್ ಉದ್ಯಮದಲ್ಲಿ ಹಿಡಿತ ಸಾಲ್ಟಿಸಿ ಕಂಪನಿ ಕಳೆದ ನಾಲ್ಕು ವರ್ಷಗಳಿಂದ ಸ್ಥಳೀಯ ಐಟಿಸಿ ತಂಬಾಕು ಖರೀದಿಸಿದೆ ವಿದೇಶಗಳಿಗೆ ರಫ್ತು ಮಾಡುತ್ತಿದೆ.
-----
ಕೋಟ್
ರೈತರಿಗೆ ಆದಾಯ ತಂದು ಕೊಡುವ ಬೆಳೆಯಾಗಿದೆ. ನಾವು ಹಲವು ವರ್ಷದಿಂದ ಬೆಳೆಯುತ್ತಿದ್ದೇವೆ, ಅಧಿಕ ಲಾಭದ ಕೃಷಿಯಾಗಿದೆ. ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕಿದೆ. ಮಾರುಕಟ್ಟೆ ಅಲಭ್ಯತೆಯಿಂದ ದಲ್ಲಾಳಿಗಳು ಲಾಭ ಪಡೆಯುತ್ತಿದ್ದಾರೆ.
| ಮಹಾವೀರ ಖಾನಾಪುರಿ, ನಿಡಸೋಸಿ ರೈತ.
-------

Dailyhunt
Disclaimer: This content has not been generated, created or edited by Dailyhunt. Publisher: Vijayvani