ಶಿವಮೊಗ್ಗ: ಅವಕಾಶ (opportunity) ಸಮರ್ಪಕವಾಗಿ ಬಳಸಿಕೊಂಡು ಜೀವನೋತ್ಸಾಹದಿಂದ ಪ್ರಯತ್ನ (trying) ಪಟ್ಟವರು ಸಾಧಕ (achiver) ರಾಗಲು ಸಾಧ್ಯ ಎಂದು ಮಾಜಿ ಉಪಮೇಯರ್ ಸುರೇಖಾ ಮುರಳೀಧರ್ ಹೇಳಿದರು.
ಸಕ್ಷಮ ಶಿವಮೊಗ್ಗ ವತಿಯಿಂದ ಬೆಂಗಳೂರಿನ ಚೆಶೈರ್ ಡಿಸೆಬಿಲಿಟಿ ಟ್ರಸ್ಟ್ ಸಹಯೋಗದಲ್ಲಿ ಅಂಗವಿಕಲ ಮಹಿಳೆಯರಿಗೆ ಏರ್ಪಡಿಸಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪದಲ್ಲಿ ಬುಧವಾರ ಫಲಾನುಭವಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿ, ಹೊಲಿಗೆಯಂತ್ರ ತರಬೇತಿಯನ್ನು ಸದ್ಬಳಕೆ ಮಾಡಿಕೊಂಡು ಬೇರೆಯವರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಎಲ್ಲವೂ ಸಾಧ್ಯ. ಮಾನಸಿಕವಾಗಿ ಮಹಿಳೆಯರು ಸದೃಢವಾಗಿರಬೇಕು. ಕೀಳರಿಮೆ ಬಿಡಬೇಕು. ಸಂಸಾರದಲ್ಲಿ ಗಂಡಸರು ಬೇಗ ಕುಸಿಯುತ್ತಾರೆ. ಆಗ ಮಹಿಳೆಯರು ಧೈರ್ಯ ತುಂಬಬೇಕು. ನಮ್ಮಲ್ಲಿರುವ ಶಕ್ತಿಯನ್ನು ಅರ್ಥಮಾಡಿಕೊಂಡು ನಾವೇ ಸಾಧನೆ ಮಾಡಿ ಸಮಾಜಕ್ಕೆ ಮಾದರಿಯಾಗಬೇಕು ಎಂದರು.
ಸಿಡಿಟಿ ಪ್ರಾಜೆಕ್ಟ್ ಕೋಆರ್ಡಿನೇಟರ್ ನಟರಾಜ್ ಮಾತನಾಡಿ, ಸಕ್ಷಮ ದೇಶಾದ್ಯಂತ 18 ಕೇಂದ್ರಗಳನ್ನು ಹೊಂದಿದೆ. ಏಳು ಸಾವಿರಕ್ಕೂ ಹೆಚ್ಚು ಅಂಗವಿಕಲ ಮಹಿಳೆಯರಿಗೆ ಸ್ವಯಂ ಉದ್ಯೋಗ ತರಬೇತಿ ನೀಡಿ ಉದ್ಯೋಗ ಒದಗಿಸಿದೆ ಎಂದು ತಿಳಿಸಿದರು.
ಈವರೆಗೆ ಶಿವಮೊಗ್ಗ ಸಕ್ಷಮದಿಂದ ಆರು ಬ್ಯಾಚ್‌ಗಳಲ್ಲಿ ತರಬೇತಿ ನೀಡಿ 106 ಜನರಿಗೆ ಹೊಲಿಗೆ ಯಂತ್ರ ವಿತರಿಸಲಾಗಿದೆ. ಬುಧವಾರ 24 ಅಂಗವಿಕಲರಿಗೆ ತರಬೇತಿ ಪ್ರಮಾಣಪತ್ರ ಮತ್ತು ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಲಾಯಿತು.ಸಕ್ಷಮ ಶಿವಮೊಗ್ಗದ ಅಧ್ಯಕ್ಷ ಭಾಸ್ಕರ್ ಕಾಮತ್, ಪ್ರಮುಖರಾದ ಅಚ್ಚುತರಾವ್, ಕುಮಾರ ಶಾಸ್ತ್ರಿ, ಶೈಲಜಾ, ಎಡಿಡಿ ಸಂಚಾಲಕಿ ಸುನೀತಾ ಇದ್ದರು.
ಇನ್ನಷ್ಟು ಓದಿ