Dailyhunt Logo
  • Light mode
    Follow system
    Dark mode
    • Play Story
    • App Story
ತಿಂಗಳಾದರೂ ದುರಸ್ತಿ ಕಾಣದ ಆರ್​ಒ ಘಟಕ

ತಿಂಗಳಾದರೂ ದುರಸ್ತಿ ಕಾಣದ ಆರ್​ಒ ಘಟಕ

ಗುರುಮಠಕಲ್​: ತಾಲೂಕಿನ ಪುಟಪಾಕ ಗ್ರಾಮದಲ್ಲಿ ತಿಂಗಳಾದರೂ ದುರಾಸ್ತಿ ಕಾಣದ ಶುದ್ದ ನೀರಿನ ಟಕದಿಂದ ಜನರು ಶುದ್ಧ ನೀರು ಕುಡಿಯಲು ಪರಿತಪಿಸುವಂತಾಗಿದ್ದು, ಅಧಿಕಾರಿಗಳ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪುಟಪಾಕ ಗ್ರಾಮದಲ್ಲಿ ಜನರಿಗೆ ಶುದ್ಧ ನೀರಿಗಾಗಿ ಟಕವನ್ನು ಸ್ಥಾಪಿಸಲಾಗಿತ್ತು.
ಈ ಟಕ ದುರಸ್ತಿ ಮಾಡಿಕೊಡುವಂತೆ ತಿಂಗಳಿಂದ ಮನವಿ ಮಾಡಿದರೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಪಿಡಿಒ ಅವರು ಜನರಿಗೆ ನೀರಿನ ವ್ಯವಸ್ಥೆ ಮಾಡುವ ಬದಲು ಸಾಬೂಬು ಹೇಳುತ್ತಿರುತ್ತಾರೆ. ಇದರಿಂದ ಜನರಿಗೆ ನೀರು ಕುಡಿಯಲು ತೊಂದರೆಯಾಗುತ್ತಿದೆ ಎಂದು ಜನರು ಅಳಲು ತೊಡಿಕೊಳ್ಳುತ್ತಿದ್ದಾರೆ.ಶುದ್ಧ ನೀರಿನ ಟಕಕ್ಕೆ ವಿದ್ಯುತ್​ ಸಂಪರ್ಕವನ್ನು ಕೆಇಬಿ ಇಲಾಖೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ನೀರು ಜನರಿಗೆ ತಲುಪುತ್ತಿಲ್ಲ ಎಂದು ಪಿಡಿಒ ಹೇಳಿದರೆ, ಬೇಸಿಗೆ ಕಾಲದಲ್ಲಿ ನೀರಿನ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ವಿದ್ಯುತ್​ ಸಂಪರ್ಕ ಕಡಿತ ಮಾಡಿ ಜನರಿಗೆ ತೊಂದರೆ ಮಾಡುವುದಿಲ್ಲ ಎಂದು ಕೆಇಬಿ ಇಲಾಖೆಯವರು ಸ್ವಷ್ಟಪಡಿಸಿದ್ದಾರೆ. ಜನರಿಗೆ ತಾಲೂಕು ಪಂಚಾಯಿತಿ ಇಲಾಖೆಯ ಬೇಜವಬ್ದಾರಿದಿಂದ ಜನರಿಗೆ ಶುದ್ಧ ನೀರು ದೊರೆಯುತ್ತಿಲ್ಲ ಎಂದು ಜನರು ಅಸಮಾಧನ ವ್ಯಕ್ತಪಡಿಸಿದ್ದಾರೆ.ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಪುಟಪಾಕ ಗ್ರಾಮದಲ್ಲಿ ಜಾಸ್ತಿ ಇದೆ. ಕುಡಿಯಲು ನೀರಿನ ಅಭಾವದಿಂದ ಬೆಂದಿದ್ದಾರೆ. ಶುದ್ಧ ನೀರಿನ ಟಕ ದುರಸ್ತಿಗೊಳಿಸಿ ಶ್ರೀ ನೀರಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani