ವಿಜಯವಾಣಿ
480k Followersಕೊಚ್ಚಿ: ಶಿಕ್ಷಕಿಯೊಬ್ಬಳ ಆತ್ಮಹತ್ಯೆ ಪ್ರಕರಣ ಸಂಬಂಧ ಅದೇ ಶಾಲೆಯ ಮತ್ತೊಬ್ಬ ಶಿಕ್ಷಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಡೆತ್ನೋಟ್ನಲ್ಲಿ ಶಿಕ್ಷಕನ ಹೆಸರು ಉಲ್ಲೇಖವಾಗಿದ್ದರಿಂದ ಆತನನ್ನು ಬಂಧಿಸಲಾಗಿದೆ.
ಬಂಧಿತನನ್ನು ರಾಮದಾಸ್ ಎಂದು ಗುರುತಿಸಲಾಗಿದೆ.
ಮೃತ ಟಿ ಬೈಜು ಅದೇ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಳು. ಸೆ. 17ರಂದು ಆಕೆಯ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬೈಜು ಮತ್ತು ರಾಮದಾಸ್ ವಿದ್ಯಾರ್ಥಿ ಪೊಲೀಸ್ ಕೆಡೆಟ್ನ ಉಸ್ತುವಾರಿಯಾಗಿದ್ದರು.
ಬೈಜು ಬರೆದಿದ್ದ ಡೆತ್ನೋಟ್ನಲ್ಲಿ ರಾಮದಾಸ್ ಹೆಸರನ್ನು ನಮೂದಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಸಾಕ್ಷಿಗಳ ಹೇಳಿಕೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳು ರಾಮದಾಸ್ ವಿರುದ್ಧ ಇವೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯವು ಪೊಲೀಸರಿಗೆ ಒಪ್ಪಿಸಿದೆ.
ಇನ್ನು ಬೈಜು ಮತ್ತು ರಾಮದಾಸ್ ನಡುವೆ ತುಂಬಾ ಕ್ಲೋಸ್ನೆಸ್ ಇತ್ತು. ಅದನ್ನೇ ದುರುಪಯೋಗ ಪಡಿಸಿಕೊಂಡ ಆತ, ಶಿಕ್ಷಕಿಯನ್ನು ಮಾನಸಿಕ ಹಿಂಸೆಗೆ ದೂಡಿದ್ದ ಎಂಬುದು ಡೆತ್ನೋಟ್ನಿಂದ ತಿಳಿದುಬಂದಿದೆ. ಲೈಂಗಿಕ ಕಿರುಕುಳಕ್ಕೆ ಬೇಸತ್ತು ಬೈಜು ಸೆ.17ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ನೋಟ್ ಪತ್ತೆಯಾದ ಹಿನ್ನೆಲೆಯಲ್ಲಿ ರಾಮದಾಸ್ನನ್ನು ಬಂಧಿಸಲಾಗಿದೆ. (ಏಜೆನ್ಸೀಸ್)
Disclaimer
This story is auto-aggregated by a computer program and has not been created or edited by Dailyhunt Publisher: Vijayvani