ಮೇಷ: ಮಾಘಾದಿ ಪಂಚಮಾಸಗಳ ಸಮಯವು ಮುಗಿಯುತ್ತಾ ಬಂದಿದ್ದು, ಈ ವಾರದಿಂದ ಕೇವಲ 17ನೇ ತಾರೀಕಿನವರೆಗೆ ಉತ್ತರಾಯಣ ಇದೆ. ತದನಂತರ ದಕ್ಷಿಣಾಯನ. ಹಬ್ಬ-ಹರಿದಿನಗಳು ಶುರುವಾಗುವ ಸಮಯ. ಸೂರ್ಯನು ತನ್ನ ಪಥವನ್ನು ದಕ್ಷಿಣಾಯನಕ್ಕೆ ಕೊಂಡೊಯ್ಯುತ್ತಾನೆ. ಈ ಸಮಯವು ಮನುಷ್ಯನ ಜೀವನದಲ್ಲಿ ಹತ್ತಾರು ಬದಲಾವಣೆ ತರುತ್ತದೆ.
ಬರಬೇಕಾದ ದುಡ್ಡು ಬಂದು ಸೇರುತ್ತದೆ. ಕೈ-ಕಾಲಿಗೆ ಪೆಟ್ಟು ಬೀಳುವ ಸಂಭವವಿದೆ. ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ದೇವರೇ ನಿಮ್ಮನ್ನು ಕಾಪಾಡುತ್ತಾನೆ. ಭಯಪಡದಿರಿ. ಗುರುವು ಚತುರ್ಥದಲ್ಲಿ ಉಚ್ಚರಾಶಿಯಲ್ಲಿದ್ದು ಶುಭವನ್ನು ಹರಸುತ್ತಾನೆ. ಸುಬ್ರಹ್ಮಣ್ಯನ ಪೂಜೆ ನಡೆಯುತ್ತಿರಲಿ.
ವೃಷಭ: ಶುಕ್ರನ ಮನೆಯಲ್ಲಿ ಕುಜನಿದ್ದು, ತೃತೀಯದಲ್ಲಿ ಬುಧ, ಗುರುವು ಉಚ್ಚ ರಾಶಿಯಲ್ಲಿ ಇರುವುದು ನಿಮ್ಮ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಮಾತು ಅತಿಯಾಗಬಾರದು, ನುಡಿದಂತೆ ನಡೆಯಬೇಕು. ನಿಮ್ಮ ಸ್ಥಾನ- ಮಾನ ಭದ್ರಪಡಿಸಿಕೊಳ್ಳಲು ದುರ್ಗಾ ಉಪಾಸನೆ ಮಾಡಿದರೆ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇಷ್ಟಾರ್ಥ ಸಿದ್ಧಿಸಿಕೊಳ್ಳಬಹುದು. ಆರೋಗ್ಯದಲ್ಲಿ ಏರುಪೇರು ಕಾಣಬಹುದು. ವೈದ್ಯರ ಸಲಹೆ ಇರಲಿ.
ಮಿಥುನ: ಮಿಥುನ ರಾಶ್ಯಾಧಿಪತಿ ಬುಧನು ಗುರುವಿನೊಂದಿಗೆ ದ್ವಿತೀಯದಲ್ಲಿದ್ದು, ಎಲ್ಲವೂ ಶುಭಾಂಶದ ಮುನ್ಸೂಚನೆ. ಆದರೆ ಕೆಲವು ಬಾರಿ ಹಣದ ಕೊರತೆ ಉಂಟಾಗುವ ಸಾದ್ಯತೆ ಯಿದೆ. ಮಹಾಲಕ್ಮೀಯನ್ನು ಪ್ರಾರ್ಥಿಸಿ, ಸತ್ಯನಾರಾಯಣ ವ್ರತಕತೆಯನ್ನು ಓದಿರಿ.
ಕಟಕ: ರಾಶಿಯಲ್ಲಿ ಉಚ್ಚ ಗುರು, ಬುಧನ ಜತೆಯಲ್ಲಿದ್ದು, ರವಿಯೂ ರಾಶಿಯನ್ನು ಸೇರಿರುವುದರಿಂದ ದೈವ ಬಲವು ಹೆಚ್ಚಾಗಿ ಕೆಲಸ- ಕಾರ್ಯವನ್ನು ಸಮಾಧಾನದಿಂದ ಸರಿದೂಗಿಸಿಕೊಂಡು ಹೋಗುವ ಸಮಯ. ಉಮಾಮಹೇಶ್ವರನ ಧ್ಯಾನವಿರಲಿ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.
ಸಿಂಹ: ರಾಶಿಯಲ್ಲಿ ಕೇತುವಿದ್ದು, ಗುರುವು ದ್ವಾದಶದಲ್ಲಿ ಉಚ್ಚ ರಾಶಿಯಲ್ಲಿರುವುದು ಸಮಾಧಾನದ ಅಂಶ. ಶನಿಯು ಅಷ್ಟಮದಲ್ಲಿದ್ದು ಅತ್ಯಂತ ಕಠಿಣ ಸಮಸ್ಯೆ ಬರುವ ಸೂಚನೆ ಇದೆ. ಯಾರೇ ಏನೆ ಮಾಡಲಿ ಉಚ್ಚ ರಾಶಿಯ ಗುರುವು ದೈವಬಲದಿಂದ ನಿಮ್ಮನ್ನು ರಕ್ಷಿಸುತ್ತಾನೆ. ನಿಮ್ಮ ಐಚ್ಛಿಕ ಕಾರ್ಯಗಳು ನಡೆಯುತ್ತವೆ. ಸೂರ್ಯಾಷ್ಟಕ ಓದುವುದು ಅತ್ಯಂತ ಶ್ರೇಯಸ್ಕರ. ಗಣಪತಿ ಅಥರ್ವಶೀರ್ಷ ಪಠಿಸಿ.
ಕನ್ಯಾ: ಕನ್ಯಾ ರಾಶಿಯವರಿಗೆ ಏಕಾದಶಕ್ಕೆ ಗುರುವಿದ್ದು, ಶನಿಯು ಸಪ್ತಮದಲ್ಲಿದ್ದಾನೆ. ಸಮಸ್ಯೆಗಳೇ ರಾಶಿಯಾದರೆ ಜೀವನದ ದಾರಿತೋರುವುದಿಲ್ಲ. ದೈವಬಲವಿಲ್ಲ ದಿದ್ದರೆ ಸಣ್ಣ ಸಮಸ್ಯೆಯೂ ಭಾರವಾಗಿ ತೋರುತ್ತದೆ. ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ.
ತುಲಾ: 10ನೇ ಮನೆಯ ಗುರು, 6ನೇ ಮನೆಯ ಶನಿಯು ಜೀವನ ಚಕ್ರದ ರಥವನ್ನು ಚಲಾಯಿಸುತ್ತಿದ್ದಾರೆ. ಸಮಸ್ಯೆಗಳು ಮೋಡದಂತೆ ಮರೆಯಾಗುತ್ತವೆ. ದೈನಂದಿನ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ದುಃಖವನ್ನು ದೂರ ಮಾಡಿ. ದುರ್ಗಾಸಹಸ್ರನಾಮ ಪಾರಾಯಣ ಮಾಡಿ. ಎಲ್ಲವೂ ಶುಭವಾಗುತ್ತದೆ.
ವೃಶ್ಚಿಕ: 7ನೇ ಮನೆಯ ಗುರು, ಶನಿಯು ಪಂಚಮದಲ್ಲಿದ್ದು, ದೈವಕೃಪೆಯಿಂದ ಎಂತಹ ಕಠಿಣವಾದ ಕೆಲಸವೂ ಬಹಳ ಸಲೀಸಾಗಿ ಸರಿಹೋಗಿ ನಿಮ್ಮ ಜೀವನ ಪಥವನ್ನು ಬದಲಾಯಿಸಿ ಗುರುಬಲ ಏನು ಎಂಬುದನ್ನು ದೈವವೇ ತಿಳಿಸುತ್ತದೆ. ಗುರುಸ್ವರೂಪ ಅರ್ಥಮಾಡಿಕೊಂಡು ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ. ನಾಗರಾಜನನ್ನು ಪೂಜಿಸಿದರೆ ಕೈಗೆ ಬಂದ ಕೆಲಸಗಳೆಲ್ಲವೂ ಯಶಸ್ವಿಯಾಗುತ್ತವೆ. ನಿಮ್ಮ ದುಡ್ಡಿನ ಖಾತೆ ಸರಿದೂಗುತ್ತದೆ.
ಧನಸ್ಸು: ಜನ್ಮತಃ ದೈವಬಲದ ರಾಶಿಯಾದ್ದರಿಂದ ಯಾವ ಗ್ರಹಗಳು ಎಲ್ಲೇ ಇರಲಿ ಆತ್ಮದಲ್ಲಿ ಸ್ಥೈರ್ಯ ಇದ್ದರೆ, ಸತ್ಯದ ಪ್ರಕಾಶಮಾನನಾದ ಶಿವನನ್ನು ಆರಾಧಿಸುವವರಿಗೆ ಕೆಲಸಗಳು ಸರಾಗವಾಗಿ ನಡೆಯುತ್ತವೆ. ಸತ್ಯಕ್ಕೆ ಬೆಲೆ ಕೊಟ್ಟು ಸತ್ಯಂ ಶಿವಂ ಸುಂದರಂ ಎಂಬಂತೆ ಎಲ್ಲವೂ ಶಿವನನ್ನು ಪೂಜಿಸುವುದರಿಂದ ನಡೆದು, ಇಷ್ಟಾರ್ಥ ಸಿದ್ಧಿಯಾಗುವ ಸಮಯ.
ಮಕರ: ಮಕರ ರಾಶಿಯವರಿಗೆ ಸಪ್ತಮದಲ್ಲಿ ಗುರುವು, 16ನೇ ತಾರೀಕು ಜುಲೈನಿಂದ ಸೂರ್ಯನು ಕಟಕ ರಾಶಿಗೆ ಬರುವುದರಿಂದ ಗುರುಬಲ, ರವಿಬಲ ಎರಡೂ ಸೇರಿ ಭಾಗ್ಯೋದಯವಾಗಿ ನಿಮ್ಮ ಆಲೋಚನೆಗೆ, ಕೆಲಸ ಕಾರ್ಯಕ್ಕೆ ವೇಗವು ಸಿಕ್ಕಿ ಹರ್ಷ ತರುತ್ತದೆ. ಮೂರರ ಶನಿ ಕೊಡುವುದನ್ನು ಕೊಟ್ಟು ಧರ್ಮಮಾರ್ಗದಲ್ಲಿ ನಿಮ್ಮನ್ನು ರಕ್ಷಿಸುತ್ತಾನೆ. ಆದ್ದರಿಂದ ನಿತ್ಯ ನಿರಂತರವಾಗಿ ಮಕರ, ಕುಂಭ ರಾಶಿಯವರು ಇಷ್ಟದೇವರನ್ನು ಪೂಜಿಸಿ.
ಕುಂಭ: ಕುಂಭ ರಾಶಿಯವರಿಗೆ ಲಗ್ನದಲ್ಲಿ ರಾಹುವಿದ್ದಾನೆ. ಷಷ್ಠದಲ್ಲಿ ಗುರುವಿದ್ದಾನೆ. ಯಾವುದೋ ಆಲೋಚನೆಗೆ ಸಿಕ್ಕಿಕೊಂಡು ಮನಸ್ಸು ಭಾರವಾಗುತ್ತದೆ. ಒಂದೆಡೆ ಕೆಲಸವೂ ಅರ್ಧಕ್ಕೆ ನಿಂತು, ಶನಿಯು ಮೀನರಾಶಿಯಲ್ಲಿದ್ದು ಏಕಾಏಕಿ ಸಮಸ್ಯೆಗಳು ದಡವನ್ನು ಮುಟ್ಟುವುದಿಲ್ಲ. ಗುರುವಿನ ಪ್ರಾರ್ಥನೆ ಸದಾ ಇರಲಿ.
ಮೀನ: ಶನಿಗೆ ಪಂಚಮದಲ್ಲಿ ಗುರುವಿದ್ದಾನೆ. ಗುರುಬಲ ಅತ್ಯುತ್ತಮ ವಾಗಿದೆ. ಆದರೆ, ಶನಿಯು ಮೀನ ರಾಶಿಯಲ್ಲೇ ಇರುವುದರಿಂದ ಇನ್ನೂ ಕೆಲಸದ ವೇಗಕ್ಕೆ ಕಾಯಬೇಕಾಗುತ್ತದೆ. ಜನ್ಮಕೊಟ್ಟ ಪರಮಾತ್ಮನು ಯಾವ ಸಮಯದಲ್ಲಿ ಏನನ್ನು ಕೊಡಬೇಕೋ ಕೊಡುವನು. ಸುಖ-ದುಃಖವನ್ನು ಎದುರಿಸಲು ಭಗವಂತನೇ ಶಕ್ತಿಕೊಡಲೆಂದು ಪ್ರಾರ್ಥಿಸಿ. ಅದೇ ಶುಭವಾಗಿ ತಿರುಗುತ್ತದೆ.
ಇನ್ನಷ್ಟು ಓದಿ

