Dailyhunt
ವಾರಭವಿಷ್ಯ: ಈ ರಾಶಿಯವರು ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು

ವಾರಭವಿಷ್ಯ: ಈ ರಾಶಿಯವರು ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು

ಮೇಷ: 11ನೇ ತಾರೀಖು ಕುಜನು ಸ್ವಕ್ಷೇತ್ರಕ್ಕೆ ಬಂದು ಶನಿ-ಕುಜರು ಮೀನ ರಾಶಿಯಲ್ಲಿ ಒಟ್ಟಿಗೆ ಇರುವುದು ಮುಕ್ತಾಯವಾಗುತ್ತದೆ. ಸ್ವಲ್ಪ ಮಟ್ಟಿಗೆ ದೇಹವು ಸುಧಾರಿಸುತ್ತದೆ. ಜೂನ್2ರಿಂದ ದೇವತಾ ಕೃಪೆಯು ದೊರೆತು ಗುರು ಉಚ್ಚ ರಾಶಿಗೆ ಬಂದು ನಿಮಗೆ ಸಂತೋಷ ಉಂಟುಮಾಡುತ್ತಾನೆ.
ಸ್ವಕೇತ್ರದಲ್ಲಿ ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರು ನಿಮ್ಮ ನರನಾಡಿಯಲ್ಲಿರುವುದರಿಂದ ಅವನನ್ನು ಪೂಜಿಸುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ.ವೃಷಭ: ಶುಕ್ರನು ಸ್ವಕ್ಷೇತ್ರದಲ್ಲಿದ್ದು, ದ್ವಿತೀಯದಲ್ಲಿ ಗುರುವಿದ್ದಾನೆ. ಏಕಾದಶದಲ್ಲಿ ಶನಿಯಿದ್ದಾನೆ. ಇನ್ನೇನು ಬೇಕು?. ಮೂರು ಮೆಟ್ಟಿಲು ಹತ್ತಬಲ್ಲವನು ಮೂರು ಸಾವಿರ ಮೆಟ್ಟಿಲನ್ನೂ ಹತ್ತಬಲ್ಲನು. ನೀವು ನಗುಮುಖದಿಂದ, ವಿನಯದಿಂದ ವರ್ತಿಸಿ. ದೈವಕೃಪೆ ಇದೆ. ದುರ್ಗೆಯನ್ನು ಪೂಜಿಸಿ ಸ್ಥಾನ-ಮಾನ ಕೀರ್ತಿ ಲಾಭವನ್ನು ಸಂಪಾದಿಸಿ.ಮಿಥುನ: ಮಿಥುನ ರಾಶಿಯಲ್ಲೇ ಗುರುವಿದ್ದಾನೆ. ಲಗ್ನ ಗುರುವು ಬುಧನ ಮನೆಯಲ್ಲಿದ್ದು ಕೆಲಸವು ಕೆಲವು ಮಟ್ಟಿಗೆ ನಿಧಾನವಾಗಬಹುದು. ಆದರೆ ನಿಮಗೆ ನಕಾರಾತ್ಮಕ ಚಿಂತನೆ ಬರಕೂಡದು. 10ನೇ ಮನೆ ಶನಿಯು ಮೇ ನಂತರದಲ್ಲಿ ದೈವಬಲ ತುಂಬುತ್ತದೆ. ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ.ಕಟಕ: ಕಟಕ ರಾಶಿಗೆ ದ್ವಾದಶದಲ್ಲಿ ಗುರುವಿದ್ದಾನೆ. ಮಾತುಗಳು ತೀಕ್ಷ್ಣಆಗಿರಬಾರದು. ಮಧುರ ಸಂಭಾಷಣೆ ಆಗಿರಬೇಕು. ಅದರಲ್ಲೂ ಹೆಣ್ಣು ಮಕ್ಕಳು ಮಧುರ ಭಾಷಿಣಿ ಆಗಿದ್ದರೆ ಲೋಕ ಕಲ್ಯಾಣವಾಗುತ್ತದೆ. ಪುರುಷರಾದರೆ ಬಹ್ಮತೇಜಸ್ಸು, ಹೆಣ್ಣಾದರೆ ವಿಪರೀತ ಸೌಂದರ್ಯ ಹೊಂದಿರುತ್ತಾರೆ. ಆದರೆ ನಿಮ್ಮ ನಡೆ-ನುಡಿ ಜೇನಿನಂತಹ ಮಧುರ ಮಾತು ಸೇರಿದರೆ ಅದೃಷ್ಟವು ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತದೆ.ಸಿಂಹ: ಲಗ್ನದಲ್ಲಿ ಕೇತು 5.12.26ರಂದು ಸ್ಥಾನ ಬದಲಾಯಿಸುತ್ತಾನೆ. ಕೇತು ವಿಗೆ ಗಣನಾಯಕನನ್ನು ಪೂಜಿಸಿ ಪ್ರಾರ್ಥಿಸಿ ಕೈಯಲ್ಲಿ ಕಡುಬನ್ನು ಕೊಟ್ಟರೆ ಸುಮ್ಮನಿರುತ್ತಾನೆ. ಹುರಿಗಡಲೆ ಹಿಟ್ಟಿಗೆ ಬೆಲ್ಲ ಕೊಬ್ಬರಿ ಸೇರಿಸಿ ತಿನ್ನಲು ಕೊಡಿ. ನೀವು ಬಯಸಿದ್ದನ್ನು ಕೊಟ್ಟು ನಿಮಗೂ ಸಿಹಿಯನ್ನು ತಿನ್ನಿಸುತ್ತಾನೆ. ಏಕಾದಶ ಗುರುವು ನಿರಂತರವಾಗಿ ನಿಮ್ಮನ್ನು ಕಾಯುತ್ತಾನೆ.ಕನ್ಯಾ: ಕನ್ಯಾ ರಾಶಿಯವರು ಇನ್ನು ಕೇವಲ ಒಂದು ತಿಂಗಳು ಕಾದರೆ ಏಕಾದಶಕ್ಕೆ ಗುರು ಬರುತ್ತಾನೆ. ಲಗ್ನಾತ್, ಪಂಚಮಾತ್, ಸಪ್ತ ಮಾತ್ ಏಕಾದಶದಲ್ಲಿ ಗುರು ಲಾಭದಾಯಕನು. ದೈವಬಲ, ಗುರು ಬಲ, ಶಿವಾನುಗ್ರಹವಿದ್ದರೆ ನಿಮ್ಮನ್ನು ಪರಮಾತ್ಮನೇ ದಡವನ್ನು ಸೇರಿಸುತ್ತಾನೆ. ಶನಿ ಅಷ್ಟೋತ್ತರ ಪಠಿಸಿ, ಗುರುವಿನ ಪ್ರಾರ್ಥನೆ ಇರಲಿ.ತುಲಾ: ತುಲಾರಾಶಿಯವರಿಗೆ 9ರ ಗುರು ಷಷ್ಠದಲ್ಲಿ ಶನಿ ಹಾಗೂ ಕುಂಭದಲ್ಲಿ ರಾಹುವಿರುತ್ತಾನೆ. ವಿಶೇಷ ಫಲವನ್ನು ನೀಡುತ್ತದೆ. ಭಕ್ತಿಯನ್ನು ಪರೀಕ್ಷಿಸಿ ಮಾಡಿದ ಪುಣ್ಯದ ಪುಂಜದಲ್ಲಿ ಇರುವ ಪುಣ್ಯವೇ ನಿಮ್ಮನ್ನು ಅಭಿವೃದ್ಧಿ ಪಥದಲ್ಲಿ ಕರೆದೊಯ್ಯುತ್ತದೆ. ಚಂಡಿಕಾ ದುರ್ಗಾ ಪರಮೇಶ್ವರಿಯ ಆರಾಧನೆಯನ್ನು ತುಲಾ-ವೃಶ್ಚಿಕ ರಾಶಿಯವರು ಎಂದೂ ಬಿಡಬಾರದು.ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಪಂಚಮದಲ್ಲಿ ಕುಜ- ಶನಿ- ಆರರಲ್ಲಿ ರವಿ-ಬುಧರು ಇರುವುದರಿಂದ ವ್ಯಾಪಾರದಲ್ಲಿ ಶಕ್ತಿಮೀರಿ ಬೆಳೆಸಲು ಶ್ರಮದ ಅಗತ್ಯವಿದೆ. ಆದರೆ ಧನಬರುವ ಮಾರ್ಗವು ಇನ್ನೂ ಸಿಕ್ಕಿಲ್ಲ. ನೀವು ಕೊಲ್ಹಾಪುರದ ಮಹಾಲಕ್ಷ್ಮೀಯನ್ನು ದರ್ಶಿಸಿ-ವಂದಿಸಿ ಬನ್ನಿ. ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ಕಾಣಬಹುದು.ಧನಸ್ಸು: ಧನು ರಾಶಿಯಲ್ಲಿ ಯಾವ ಗ್ರಹಗಳಿಲ್ಲ. ಆದರೆ ಸಪ್ತಮದಲ್ಲಿ ಗುರು ಹಾಗೂ ಶನಿಯು ಚತುರ್ಥದಲ್ಲಿದ್ದಾರೆ. ಯಾವುದೇ ಉದ್ಯೋಗ, ವ್ಯಾಪಾರ ಮಾಡಬೇಕಾದರೆ ಚೈತನ್ಯ, ಸಾಮರ್ಥ್ಯ ಇರಬೇಕು. ವಿಚಾರ ಮಾಡಿ ಸರಿಯಾಗಿ ತಿಳಿದವರೊಂದಿಗೆ ರ್ಚಚಿಸಿ ಹಣ ಹೂಡಬೇಕು. ಚತುರ್ಥ ಶನಿಯಿಂದ ಮುಂದೆ ನಷ್ಟವೂ ಉಂಟಾಗುತ್ತದೆ. ಆದರೆ ಗುರುವಿನ ರಕ್ಷಣೆಯಿದೆ. ಮಿಕ್ಕಂತೆ ಎಲ್ಲವೂ ಶುಭವೇ ಆಗಿದೆ.ಮಕರ: ಮಕರ ರಾಶಿಗೆ ಶನಿಯು ತೃತೀಯದಲ್ಲಿದ್ದು, ನೀವು ಚಿಂತಿಸಿದ ಹಾಗೆ ಬಹುಪಾಲು ವಿಶೇಷ ಫಲ ಕೊಟ್ಟು ಸಂತೋಷಪಡಿಸುತ್ತಾನೆ. ಆದರೆ ಗುರುಬಲ ಇಲ್ಲದಿರುವಾಗ ಕೆಲಸಗಳು ನಿಧಾನಕ್ಕೆ ಸಾಗುತ್ತದೆ. ಧನಾತ್ಮಕವಾಗಿ ಚಿಂತಿಸಿ ಮುನ್ನಡೆದರೆ ಹಣವು ಹರಿದುಬರುತ್ತದೆ.ಕುಂಭ: ಕುಂಭದಲ್ಲಿ ರಾಹುವಿದ್ದಾನೆ. ಸಪ್ತಮದಲ್ಲಿ ಕೇತುವಿದ್ದು, ರಾಹು ಕೇತುಗಳ ನಡುವೆ ಎರಡು ಪಾಪಗ್ರಹಗಳು. ಎಷ್ಟು ಪ್ರಯತ್ನ ಮಾಡಿದರೂ ಸಾಲದಾಗಿದೆ. ದೇವರು ಮಾತ್ರವೇ ನಿಮ್ಮ ದಾರಿಯನ್ನು ತೋರಿಸಬಹುದು. ಕುಂಭ ರಾಶಿಯವರು ರಾಹು ಕೇತುಗೆ ನಾಗರಾಜ, ಗಣಪತಿಯನ್ನು ಪೂಜಿಸಿ. ಸಮಯವು ನಿಮಗೆ ಅನುಕೂಲ ಆಗುವಂತೆ ಮಾಡಿಕೊಡುತ್ತಾನೆ.ಮೀನ: ಮೀನ ರಾಶಿಯವರಿಗೆ 1ನೇ ಮನೆಯಲ್ಲಿ ರಾಹು, ಶನಿ-ಕುಜರು ಲಗ್ನದಲ್ಲಿ ಇರುತ್ತಾರೆ. ಭಯಪಡುವ ಅವಶ್ಯಕತೆಯಿಲ್ಲ. ಗುರುವು ಪಂಚಮಕ್ಕೆ ಬರಲಿದ್ದಾನೆ. ನಿಮ್ಮ ದೇಹವೂ ಸ್ವರ್ಣಮಯವಾಗುತ್ತದೆ. ಚಿನ್ನ, ಬೆಳ್ಳಿ, ಬಂಗಾರ ಎಲ್ಲವೂ ಬಂದು ಸೇರುತ್ತದೆ. ವಿದ್ಯೆಯಿದ್ದರೆ ಸಾಲದು. ಬುದ್ದಿಯನ್ನು ಉಪಯೋಗಿಸಿದರೆ ಒಳ್ಳೆಯ ಬಂಗಲೆಯನ್ನೇ ಕಟ್ಟಿ ಕೈತುಂಬ ಹಣವನ್ನು, ಸುಖವಾದ ಬದುಕನ್ನು ಪಡೆಯಬಹುದು.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani