Dailyhunt
ವೇದಿಕೆಯಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತ ಪಾಯಲ್ ರಜಪೂತ್​: ಅಷ್ಟಕ್ಕೂ ಕಾರಣವೇನು?

ವೇದಿಕೆಯಲ್ಲಿಯೇ ಬಿಕ್ಕಿ ಬಿಕ್ಕಿ ಅತ್ತ ಪಾಯಲ್ ರಜಪೂತ್​: ಅಷ್ಟಕ್ಕೂ ಕಾರಣವೇನು?

ನ್ನಡದ 'ಹೆಡ್‌ಬುಷ್' ಸೇರಿ ತೆಲುಗಿನಲ್ಲಿ 'ಆರ್‌ಎಕ್ಸ್ 100', 'ವೆಂಕಿ ಮಾಮಾ', 'ಮಂಗಳವಾರಂ' ಸೇರಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಪಾಯಲ್ ರಜಪೂತ್ ಇದೀಗ 'ಫಸ್ಟ್ ಟೈಮ್ 01.01.01' ಮೂಲಕ ಟಾಲಿವುಡ್‌ಗೆ ಮರಳಿದ್ದಾರೆ.
ರಿಲೀಸ್‌ಗೆ ಸಿದ್ಧವಾಗಿರುವ ಈ ಚಿತ್ರದ ಪ್ರಚಾರದ ವೇಳೆ ಪಾಯಲ್, ವೇದಿಕೆಯಲ್ಲಿಯೇ ಗಳಗಳನೆ ಅತ್ತ ಘಟನೆ ನಡೆದಿದೆ. ಅಷ್ಟಕ್ಕೂ ನಟಿ ಅಳಲು ಕಾರಣವೇನು? ಯಾರಾದರೂ ನೋಯಿಸಿದರೆ? ಇವ್ಯಾವುದೂ ಅಲ್ಲ, ಎಂಟು ತಿಂಗಳ ಹಿಂದೆ ತಾವು ವೈಯಕ್ತಿಕ ಜೀವನದಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ವಿವರಣೆ ನೀಡುವ ಸಮಯದಲ್ಲಿ ಭಾವುಕರಾಗಿ, 'ಅಪ್ಪ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ವಿಷಯ ತಿಳಿದು ಅಮ್ಮ, ನಾನು ಆತಂಕಕ್ಕೊಳಗಾಗಿದ್ದೆವು. ಆಗ ನನ್ನ ವೃತ್ತಿ ಜೀವನದ ಬಗ್ಗೆಯೂ ನಾನು ಯೋಚಿಸಲಿಲ್ಲ. ಆ ಸಮಯದಲ್ಲಿ ಸಂಪೂರ್ಣವಾಗಿ ಸೋತು ಹೋಗಿದ್ದೆ. ತಾಯಿಗೆ ಸಮಾಧಾನ ಹೇಳುವುದಿರಲಿ, ನನಗೆ ನಾನೇ ಸಮಾಧಾನಪಡಿಸಿಕೊಳ್ಳಲು ಆಗುತ್ತಿರಲಿಲ್ಲ. ಅಪ್ಪ, ನನ್ನ ಜೀವನದ ಹೀರೋ ಆಗಿದ್ದರು. ನನ್ನ ಸಿನಿಮಾಗಳ ಮೊದಲ ವಿಮರ್ಶಕರಾಗಿದ್ದರು. ಇಂದು ಅವರು ನಮ್ಮ ಜತೆಗಿಲ್ಲ. ಅವರ ಕೊರತೆಯನ್ನು ಮರೆಯಲು ಏಳೆಂಟು ತಿಂಗಳ ಹಿಂದೆ ಜೈಪುರದಲ್ಲಿ ವಿಪಸ್ಸನಾ ಕೋರ್ಸ್‌ಗೆ ಜಾಯಿನ್ ಆಗಿದ್ದೆ' ಎಂದು ಅಳುತ್ತಲೇ ವೇದಿಕೆಯಿಂದ ಹೊರನಡೆದಿದ್ದಾರೆ. 'ವಿಪಸ್ಸನಾ' ಪ್ರಾಚೀನ ಯೋಗ ಕ್ರಮವಾಗಿದ್ದು, ಖಿನ್ನತೆ, ಒತ್ತಡಗಳಿಂದ ಹೊರಬರಲು ಈ ಯೋಗ ಪದ್ಧತಿ ಸಹಾಯವಾಗುತ್ತದೆ. ಬಾಲಿವುಡ್ ನಟ ಆಮಿರ್ ಖಾನ್, ಕನ್ನಡದ ನಟಿ ರಮ್ಯಾ, ದೇವ್ ಪಟೇಲ್, ರೋಹಿತ್ ರಾಯ್, ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹಲವರು ವಿಪಸ್ಸನಾ ಕೋರ್ಸ್ ಮಾಡಿದ್ದಾರೆ. -ಏಜೆನ್ಸೀಸ್

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani