ವಿಜಯವಾಣಿ
491k Followersಕೇರಳ: ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದ ಯುವತಿಯೊಬ್ಬಳನ್ನು ಜೇನ್ನೊಣಗಳು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ. ಇಲ್ಲಿಯ ಆಲಪ್ಪುಳ ಕರಾವಳಿಯ ಕಾಯಂಕುಲಂನಲ್ಲಿ ಇಂಥದ್ದೊಂದು ಅಚ್ಚರಿಯ ಘಟನೆ ಜರುಗಿದೆ.
ಮಗುವನ್ನು ಕರೆದುಕೊಂಡು ಹೋಗಿದ್ದ ಪತಿ, ಮಗುವನ್ನು ನೋಡಲು ಬಿಡುತ್ತಿಲ್ಲ ಎನ್ನುವ ಕಾರಣಕ್ಕೆ, ಪತಿಯ ಮೇಲಿನ ಸಿಟ್ಟಿನಿಂದ ಯುವತಿ ಬಿಎಸ್‌ಎನ್‌ಎಲ್ ಮೊಬೈಲ್ ಟವರ್ ಏರಿದ್ದಳು.
ಏನು ಮಾಡುವುದು ಎಂದು ತೋಚದ ಪೊಲೀಸರು ಆಕೆಯನ್ನು ಬಚಾವ್ ಮಾಡಲು ಯೋಜನೆ ರೂಪಿಸುತ್ತಿದ್ದರು. ಒಂದು ವೇಳೆ ಆಕೆ ಮೇಲಿನಿಂದ ಬಿದ್ದರೆ ಏನೂ ಆಗದಂತೆ ನೋಡಿಕೊಳ್ಳುವ ಸಲುವಾಗಿ ಕೆಳಗಿನಿಂದ ದೊಡ್ಡ ಬಲೆಯನ್ನೂ ಹಿಡಿದುಕೊಳ್ಳಲಾಗಿತ್ತು. ಆದರೂ ಯಾವ ಕ್ಷಣ ಏನು ಬೇಕಾದರೂ ಆಗುವ ಸಾಧ್ಯತೆ ಇತ್ತು.
ಈ ನಡುವೆ ಆಕೆಯ ಮನವನ್ನು ಒಲಿಸಲು ಪೊಲೀಸರು, ಸ್ಥಳೀಯರು ಸಾಕಷ್ಟು ಪ್ರಯತ್ನಿಸುತ್ತಲೇ ಇದ್ದರು. ಯುವತಿ ಮಾತ್ರ ಜಪ್ಪಯ್ಯ ಎಂದರೂ ಕೆಳಕ್ಕೆ ಬರಲು ಒಪ್ಪಿರಲಿಲ್ಲ. ಆದರೆ ಇದೇ ವೇಳೆ ಯುವತಿಯ ರಕ್ಷಣೆಗೆ ಬಂದದ್ದು ಜೇನ್ನೊಣಗಳು!
ಆಗಿದ್ದೇನೆಂದರೆ, ಟವರ್ ಮೇಲುಗಡೆ ಜೇನುಗೂಡು ಕಟ್ಟಿತ್ತು. ಯುವತಿ ಟವರ್ ಏರಿದಾಗ ಆಕೆಯ ಕೈ ತಗುಲಿ ಜೇನುನೊಣಗಳು ಒಂದೇ ಸಮನೆ ಹೊರಕ್ಕೆ ಹಾರಿ ಆಕೆಯನ್ನು ಕಚ್ಚಲು ಶುರು ಮಾಡಿವೆ. ಜೇನುನೊಣಗಳ ಕಡಿತ ತಾಳದೇ ಹೆದರಿದ ಯುವತಿ ಟವರ್‌ನಿಂದ ಇಳಿಯಲು ಆರಂಭಿಸಿದ್ದಾಳೆ. ಮೇಲಿನಿಂದ ಜಿಗಿಯುವ ಯೋಚನೆ ಬಿಟ್ಟು ಸರಸರನೆ ಟವರ್ ಇಳಿದಿದ್ದಾಳೆ. ಕೆಳಕ್ಕೆ ಸಮೀಪಿಸುತ್ತಿದ್ದಂತೆಯೇ ಕೆಳಗೆ ಜಿಗಿದು, ಅಲ್ಲಿ ಇದ್ದ ನೆಟ್ ಮೇಲೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಜನರು, ಪೊಲೀಸರು ಹಿಡಿದುಕೊಂಡಿದ್ದರಿಂದ ಪ್ರಾಣ ಉಳಿದಿದೆ.
ಈ ಮಹಿಳೆ ತಮಿಳುನಾಡಿನವರು ಎನ್ನಲಾಗಿದೆ. ಸದ್ಯ ಪತಿಗೂ ವಿಷಯ ಮುಟ್ಟಿಸಲಾಗಿದ್ದು, ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಹಿಳೆ ಆರೋಗ್ಯದಿಂದ ಇದ್ದು, ಪೊಲೀಸರು ಆಕೆಯ ಪತಿ ಮತ್ತು ಕುಟುಂಬದವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇಲ್ಲಿದೆ ನೋಡಿ ವಿಡಿಯೋ: (ಕೃಪೆ: ಸಿ.ಡಿ.ನೆಟ್ ನ್ಯೂಸ್)
ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದ ಯುವತಿಯೊಬ್ಬಳನ್ನು ಜೇನ್ನೊಣಗಳು ರಕ್ಷಿಸಿರುವ ಘಟನೆ ಕೇರಳದಲ್ಲಿ ನಡೆದಿದೆ (ವಿಡಿಯೋ ಕೃಪೆ: ಸಿಡಿ.ನೆಟ್ ನ್ಯೂಸ್) pic.twitter.com/lZknUxVdTK
— Vijayavani (@VVani4U) May 15, 2022
ಮದುವೆ ಖುಷಿಯಲ್ಲಿದ್ದ ತುಮಕೂರು ಪ್ರೇಮಿಗಳ ಬಾಳಲ್ಲಿ ಜವರಾಯನ ಅಟ್ಟಹಾಸ: ಅಲ್ಲಿ ಅಪಘಾತ, ಇಲ್ಲಿ ಆತ್ಮಹತ್ಯೆ!
ಮದುವೆ ಎಂಬುದೇ ಈಕೆಯ ಬಾಳಿಗೆ ಬೆಂಕಿ ಇಟ್ಟಿತಾ? ಹಸೆಮಣೆ ಏರಬೇಕಿದ್ದ ತುಮಕೂರು ವಿದ್ಯಾರ್ಥಿನಿ ಆತ್ಮಹತ್ಯೆ
ಕಾಮುಕ ಪ್ರಿಯಕರನಿಗಾಗಿ ಅಪ್ರಾಪ್ತ ಮಗಳನ್ನೇ ಮಂಚಕ್ಕೆ ಕಳಿಸಿದ ಪಾಪಿ ತಾಯಿ: ಮಗುವನ್ನು ಹೆತ್ತ ಬಾಲಕಿ!
ಇಲ್ಲಿದೆ ನೋಡಿ ವಿಡಿಯೋ: (ಕೃಪೆ: ಸಿ.ಡಿ.ನೆಟ್ ನ್ಯೂಸ್)
Disclaimer
This story is auto-aggregated by a computer program and has not been created or edited by Dailyhunt Publisher: Vijayvani