Sunday, 22 Nov, 2.50 pm ವಿಜಯವಾಣಿ

ಸಮಸ್ತ-ಕರ್ನಾಟಕ
VIDEO| ಬಾವಿಯಲ್ಲಿ ಬಿದ್ದ ಬೆಕ್ಕಿನ ಜೀವ ಉಳಿಸಿದ ರೈತ! ಸಾಹಸಕ್ಕೆ ಮೆಚ್ಚುಗೆಯ ಮಹಾಪೂರ

ಗದಗ: ಕಳೆದ ಮೂರು ದಿನಗಳಿಂದ ಬಾವಿಯಲ್ಲೇ ಸಿಲುಕಿದ್ದ ಬೆಕ್ಕಿನ ಪ್ರಾಣವನ್ನು ಉಳಿಸಿದ ರೈತ ಮಹಾಂತೇಶ ಅವರ ಸಾಹಸದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಾವಿಯಲ್ಲಿ ಬೆಕ್ಕಿನ ಚೀರಾಟ ಕೇಳಿಸುತ್ತಲೇ ಇತ್ತು. ಬಾವಿ ಬಳಿ ಹೋಗಿ ನೋಡಿದಾಗ ಗೊತ್ತಾಯ್ತು ಸಾಕುಪ್ರಾಣಿ ಬೆಕ್ಕು ಆಕಸ್ಮಿಕವಾಗಿ ನೀರಿರುವ ಬಾವಿಯೊಳಕ್ಕೆ ಬಿದ್ದಿರುವುದು. ಬಾವಿ ನೀರಿಗೆ ಬಿದ್ದ ಬೆಕ್ಕು‌ ಸ್ವಲ್ಪ ಮೇಲೆ ಬಂದು ಅಲ್ಲೇ ಕಲ್ಲಿನ ಸಂದಿ ನಿಂತುಕೊಂಡು ಪ್ರಾಣ ಉಳಿಸಿಕೊಂಡಿತ್ತು. ಮೇಲಕ್ಕೆ ಬರಲು ದಿಕ್ಕುದೋಚದೆ ರಕ್ಷಣೆಗಾಗಿ ಗೋಳಾಡುತ್ತಿತ್ತು.

ಮೇಲೆ ಬರಲಾರದೆ ಬಾವಿಯ ಪೊದೆಯಲ್ಲಿ ನರಳಾಡುತ್ತಿದ್ದ ಬೆಕ್ಕಿನ ರಕ್ಷಣೆಗೆ ಮುಂದಾದ ರೈತ ಮಹಾಂತೇಶ ಅವರು ತನ್ನ ಪ್ರಾಣದ ಹಂಗುತೊರೆದು ಹಗ್ಗ ಕಟ್ಟಿಕೊಂಡು ಮಂಕರಿ ಜತೆಗೆ ಬಾವಿಗೆ ಇಳಿದರು. ಬೆಕ್ಕನ್ನು ಮಂಕರಿಗೆ ಹಾಕಿಕೊಂಡು ಮೇಲಕ್ಕೆ ಬಂದರು.

ಜೀವದ ಹಂಗು ತೊರೆದು ಬೆಕ್ಕಿನ ಪ್ರಾಣ ಉಳಿಸಿದ ರೈತನಿಗೆ ಗ್ರಾಮಸ್ಥರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಬೆಕ್ಕಿನ ರಕ್ಷಣಾ ಕಾರ್ಯದ ದೃಶ್ಯ ಸ್ಥಳೀಯ ಯುವಕರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.

VIDEO| ನೀರು ಕುಡಿದ ಕಾಡಾನೆಗಳು ರಾತ್ರಿಯೀಡಿ ಚೀರಾಡುತ್ತಲೇ ಇದ್ದವು! ಸ್ಥಳಕ್ಕೆ ಹೋದ ಸಿಬ್ಬಂದಿಗೆ ಶಾಕ್​

ವಿಷವಿಕ್ಕಿ ಹುಲಿ ಕೊಂದ ದುರುಳರು? ಹೆತ್ತಮ್ಮನನ್ನು ಕಳೆದುಕೊಂಡ ಮರಿಗಳ ರೋದನ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top