ಕಾಬುಲ್: ಜಾಗತಿಕ ಮನ್ನಣೆ ಗಳಿಸಲು ತಮ್ಮ ವಿಚಾರಗಳು ಪ್ರಗತಿಪರವಾಗಿವೆ ಎಂದು ಬಿಂಬಿಸುವ ಪ್ರಯತ್ನವನ್ನು ತಾಲಿಬಾನ್ ನಾಯಕರು ಮಾಡುತ್ತಿದ್ದಾರೆ. ಆದರೆ, ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾಗಿರುವ ತಾಲಿಬಾನ್ ಸರ್ಕಾರದ ಶಿಕ್ಷಣ ಸಚಿವರು ಮುಂದೆ ಯಾವ ರೀತಿಯ ಪರಿಸ್ಥಿತಿಯನ್ನು ಅಪೇಕ್ಷಿಸಬಹುದೆಂಬುದಕ್ಕೆ ಕೈಗನ್ನಡಿ ಹಿಡಿದಿದ್ದಾರೆ.
ನೂತನ ಶಿಕ್ಷಣ ಸಚಿವನಾಗಿರುವ ಶೇಖ್ ಮೌಲ್ವಿ ನೂರುಲ್ಲಾಹ್ ಮುನೀರ್ ಆಡಿರುವ ಮಾತುಗಳ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಮುನೀರ್, ಜಗತ್ತಿನ ಯಾವುದೇ ಉನ್ನತ ಶಿಕ್ಷಣ ಪಡೆದವರಿಗಿಂತ ಅಫ್ಘಾನಿಸ್ತಾನದ ಆಳ್ವಿಕೆ ನಡೆಸುತ್ತಿರುವ ಮುಲ್ಲಾಗಳ ಮತ್ತು ತಾಲಿಬಾನಿಗಳ ಸ್ಥಾನ ಉನ್ನತವಾಗಿದೆ ಎಂದಿದ್ದಾರೆ.
ಮೈಸೂರು ದಸರಾಗೆ ಇಂದಿನಿಂದಲೇ ಸಿದ್ಧತೆ ಆರಂಭ: ಯಾವಾಗ ಏನೇನು? ಇಲ್ಲಿದೆ ಡಿಟೇಲ್ಸ್
'ಇಂದು ಯಾವುದೇ ಪಿಎಚ್ಡಿ, ಮಾಸ್ಟರ್ಸ್ ಡಿಗ್ರಿ ಮೌಲ್ಯ ಹೊಂದಿಲ್ಲ. ನೀವು ನೋಡುತ್ತಿದ್ದೀರಾ, ಅಧಿಕಾರದಲ್ಲಿರುವ ಮುಲ್ಲಾಗಳು ಮತ್ತು ತಾಲಿಬಾನಿಗಳು ಯಾವುದೇ ಪಿಎಚ್ಡಿ, ಎಂಎ ಅಥವಾ ಹೈಸ್ಕೂಲ್ ಡಿಗ್ರಿಯನ್ನೂ ಹೊಂದಿಲ್ಲ. ಆದರೆ ಅವರು ಎಲ್ಲರಿಗಿಂತ ಮಹಾನ್ ವ್ಯಕ್ತಿಗಳಾಗಿದ್ದಾರೆ' ಎಂದು ನೂರುಲ್ಲಾ ಮುನೀರ್ ಅಫ್ಘನ್ ಭಾಷೆಯಲ್ಲಿ ಹೇಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋವನ್ನು ಸೈಯೆದ್ ಸುಲೈಮಾನ್ ಅಶ್ನಾ ಎಂಬುವರು ಅನುವಾದದೊಂದಿಗೆ ಟ್ವಿಟರ್ನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು ಹಲವು ರೀತಿಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿವಿಧ ಮೀಮ್ಗಳೂ ಹರಿದಾಡಿವೆ. ಫಾತಿಮಾ ಜಹ್ರಾ ಎಂಬುವರು, 'ಅವರು ಎಫ್ಬಿಐನ ಮೋಸ್ಟ್ ವಾಂಟೆಡ್ ಲಿಸ್ಟ್ನಲ್ಲಿದ್ದರು ಎನ್ನುವುದನ್ನು ಹೇಳಲು ಮರೆಯಬೇಡಿ. ಈಗ ಅವರು ಒಂದು ದೇಶವನ್ನು ನಡೆಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಟೀಕಿಸಿದ್ದಾರೆ. (ಏಜೆನ್ಸೀಸ್)
ಮಹಿಳೆಯರಿಗೂ ತೆರೆಯಲಿವೆ ಎನ್ಡಿಎ ಬಾಗಿಲು: ಸುಪ್ರೀಂ ಕೋರ್ಟ್ನಲ್ಲಿ ಸರ್ಕಾರ

