Saturday, 01 Aug, 11.08 pm ವಿಜಯವಾಣಿ

ಕ್ರೀಡೆ
VIDEO: ಸುನೀಲ್ ಛೇಟ್ರಿ ಏಷ್ಯಾಕಪ್ ಫೇವರಿಟ್ ಆಟಗಾರ

ನವದೆಹಲಿ: ಭಾರತ ಫುಟ್‌ಬಾಲ್ ತಂಡದ ನಾಯಕ ಸುನೀಲ್ ಛೇಟ್ರಿ, 2019ರ ಎಎಫ್ ಸಿ ಏಷ್ಯಾ ಕಪ್ ಟೂರ್ನಿಯ ಅಭಿಮಾನಿಗಳ ಫೇವರಿಟ್ ಆಟಗಾರ ಎನಿಸಿಕೊಂಡಿದ್ದಾರೆ. ಉಜ್ಬೇಕಿಸ್ತಾನದ ಇಲ್ಡೊರ್ ಶೋಮುರೊಡೊವ್ ಅವರನ್ನು ಹಿಂದಿಕ್ಕಿ ಛೇಟ್ರಿ ಈ ಸಾಧನೆ ಮಾಡಿದ್ದಾರೆ. ಭಾರತದ ಸ್ಟಾರ್ ಆಟಗಾರ ಛೇಟ್ರಿ ಒಂದು ಹಂತದಲ್ಲಿ ಹಿನ್ನಡೆಯಲ್ಲಿದ್ದರೂ ಮುನ್ನಡೆ ಸಾಧಿಸಲು ಯಶಸ್ವಿಯಾಗಿದರು. 19 ದಿನಗಳಲ್ಲಿ 5, 61, 856 ಮತದಾರರು ಏಷ್ಯಾಕಪ್ 2019ರ ಫೇವರಿಟ್ ಆಟಗಾರರನ್ನು ತೀರ್ಮಾನಿಸಿದ್ದಾರೆ ಎಂದು ಏಷ್ಯಾನ್ ಫುಟ್‌ಬಾಲ್ ಕಾನ್ಫೆಡರೇಷನ್ (ಎಎಫ್ ಸಿ) ಟ್ವಿಟರ್‌ನಲ್ಲಿ ಪ್ರಕಟಿಸಿದೆ.

ಬಿಕಿನಿ ಚಿತ್ರಗಳಿಗೆ ಟೀಕೆ, ದಿಟ್ಟ ತಿರುಗೇಟು ನೀಡಿದ ಟೆನಿಸ್​ ತಾರೆ ನವೊಮಿ ಒಸಾಕಾ

35 ವರ್ಷದ ಸುನೀಲ್ ಛೇಟ್ರಿ, ಏಷ್ಯಾ ಕಪ್‌ನ ಗುಂಪಿನ ಹಂತದಲ್ಲಿ 2 ಗೋಲು ದಾಖಲಿಸಿದ್ದರು. ಟೂರ್ನಿ ಉದ್ಘಾಟನಾ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 2 ಗೋಲು ಗಳಿಸಿದ್ದರು. ಟೂರ್ನಿಯಲ್ಲಿ 16ನೇ ಸುತ್ತಿಗೆ ಸನಿಹಕ್ಕೇರಿದ್ದ ಭಾರತ, ಯುಎಇ ಹಾಗೂ ಬಹ್ರೇನ್ ಎದುರು ನಿರಾಸೆ ಅನುಭವಿಸಿತ್ತು. ಎಎಫ್ ಸಿ ಅಧಿಕೃತ ಇನ್‌ಸ್ಟಾಗ್ರಾಂ ಪುಟದಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿತ್ತು. 115 ಅಂತಾರಾಷ್ಟ್ರೀಯ ಪಂದ್ಯಗಳಿಂದ ಛೇಟ್ರಿ 72 ಗೋಲು ದಾಖಲಿಸಿದ್ದರು. ಇದಕ್ಕೂ ಮೊದಲು ಛೇಟ್ರಿ ಅವರನ್ನು ತಮ್ಮ 34ನೇ ಹುಟ್ಟುಹಬ್ಬ ದಿನದಂದೇ ಏಷ್ಯಾ ಐಕಾನ್ ಆಗಿ ಹೆಸರಾಗಿದ್ದರು.

ಈದ್​ ಹಬ್ಬದಂದು ಪತ್ನಿಗೆ ದುಬಾರಿ ಉಡುಗೊರೆ ನೀಡಿದ ಬಾಂಗ್ಲಾ ಕ್ರಿಕೆಟಿಗ ಶಕೀಬ್​ ಅಲ್​ ಹಸನ್​

ಫುಟ್‌ಬಾಲ್ ದಿಗ್ಗಜ ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೋನಾಲ್ಡೋ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ 2ನೇ ಆಟಗಾರ ಎನಿಸಿಕೊಂಡಿದ್ದಾರೆ. ಅರ್ಜೆಂಟೀನಾದ ಲಿಯೊನಿಲ್ ಮೆಸ್ಸಿ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಸುನೀಲ್ ಛೇಟ್ರಿ ಸಾರಥ್ಯದ ಭಾರತ ತಂಡ ಅಕ್ಟೋಬರ್ 8 ರಂದು ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಕತಾರ್ ತಂಡವನ್ನು ಅದರ ನೆಲದಲ್ಲೇ ಎದುರಿಸಲಿದೆ. ನ.12 ರಂದು ಬಾಂಗ್ಲಾದೇಶ ಹಾಗೂ ನ.17 ರಂದು ಅಫ್ಘಾನಿಸ್ತಾನ ತಂಡಗಳು ಎದುರಾಗಲಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vijayvani
Top