Dailyhunt Logo
  • Light mode
    Follow system
    Dark mode
    • Play Story
    • App Story
ವಿಡಿಯೋ ರೆಕಾರ್ಡ್ ಮಾಡುತ್ತಾ ಕಳ್ಳತನ ಮಾಡಿದ  ಗ್ಯಾಂಗ್ ಸೆರೆ

ವಿಡಿಯೋ ರೆಕಾರ್ಡ್ ಮಾಡುತ್ತಾ ಕಳ್ಳತನ ಮಾಡಿದ ಗ್ಯಾಂಗ್ ಸೆರೆ

  • ಕ್ಯಾಲಿಫೋರ್ನಿಯಾದಾದ್ಯಂತ ಸರಕು ಸಾಗಣೆಯ ಟ್ರಕ್​ಗಳಲ್ಲಿ ಕಳ್ಳತನ.

  • ನೈಕ್​ ಶೂ, ಎಲೆಕ್ಟ್ರಾನಿಕ್ ವಸ್ತು ಸೇರಿದಂತೆ ಹಲವು ವಸ್ತುಗಳ ಕದ್ದ ಖದೀಮರು.

  • ಕದಿಯುವ ವಿಡಿಯೋ ಮಾಡಿಟ್ಟು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಖತರ್ನಾಕ್ ಗ್ಯಾಂಗ್

23 ರಿಂದ 38 ವರ್ಷದ ಖದೀಮರು ದಕ್ಷಿಣ ಕ್ಯಾಲಿಫೋರ್ನಿಯಾದಾದ್ಯಂತ ಸರಕು ಸಾಗಣೆಯ ಟ್ರಕ್​ಗಳಲ್ಲಿ 208 ಕೋಟಿ ಗೂ ಹೆಚ್ಚು ರೂ.

ಮೌಲ್ಯದ ವಸ್ತು ಕಳ್ಳತನ ಮಾಡಿದ್ದಾರೆ. ಈ ವೇಳೆ ತಾವೇ ಮಾಡಿ ಹರಿಬಿಟ್ಟಿದ್ದ ವಿಡಿಯೋ ವೈರಲ್​​​​ ಆಗಿ, ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಹೌದು, ವರದಿಗಳ ಪ್ರಕಾರ, 2024ರ ಫೆಬ್ರವರಿ ಮತ್ತು ಆಗಸ್ಟ್​ 2026ರ ನಡುವೆ 'ಲಾಸ್ ಟ್ರೆನೆಸ್' ಗ್ಯಾಂಗ್ ಸುಮಾರು 36ಕ್ಕೂ ಹೆಚ್ಚು ಸರಕು ಸಾಗಣೆ ರೈಲುಗಳನ್ನು ಗುರಿಯಾಗಿಸಿಕೊಂಡು ನೈಕ್ ಶೂ, ಕ್ರ್ಯಾಕ್ಸ್, ಎಲೆಕ್ಟ್ರಾನಿಕ್ಸ್ ವಸ್ತು ಸೇರಿದಂತೆ ಮೌಲ್ಯಯುತವಾದ, ದುಬಾರಿ ವಸ್ತುಗಳನ್ನು ಕದ್ದಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ 13 ಜನ ಆರೋಪಿಗಳನ್ನು ಕೋರ್ಟ್​ ಮುಂದೆ ಹಾಜರ ಪಡಿಸಲಾಗಿತ್ತು ಎನ್ನಲಾಗಿದೆ.

208 ಕೋಟಿ ಮೌಲ್ಯದ ವಸ್ತು ಕಳ್ಳತನ

ಸ್ನೀಕರ್ಸ್ ಮತ್ತು ವಿದ್ಯುತ್​ ಉಪರಕಣ, ಪೈಪ್​ಗಳನ್ನು ಮುರಿದು 22.5 ಮಿಲಿಯನ್ ಅಂದರೆ ಭಾರತದ ರೂಪಾಯಿಗಳಲ್ಲಿ 208 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ವಸ್ತುವನ್ನು ಕದ್ದು, ಕಾಳ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೂರ್ವ ಲಾಸ್ ಏಂಜಲೀಸ್‌ನ 21 ವರ್ಷದ ನೇಥನ್ ಡೇನಿಯಲ್ ಏಂಜೆಲ್ ಈ ಗ್ಯಾಂಗ್‌ನ ಸೂತ್ರಧಾರ. ಚಿಕ್ಕಪ್ಪ ಸೇರಿದಂತೆ ಒಂದೇ ಕುಟುಂಬದ ಸದಸ್ಯರು ಈ ಕಳ್ಳತನದಲ್ಲಿ ಭಾಗಿಯಾಗಿದ್ದರು ಎಂದು ಕೋರ್ಟ್​ಗೆ ಪ್ರಾಸಿಕ್ಯೂಟರ್ ಸಲ್ಲಿಸಿದ ವರದಿಯಲ್ಲಿತ್ತು ಎನ್ನಲಾಗಿದೆ.

ಕಳ್ಳತನದ ವಿಡಿಯೋ ವೈರಲ್

23 ರಿಂದ 38 ವರ್ಷದ 13 ಜನ ಖದೀಮರು, ಮೊದಲೇ ಯೋಜಿಸಿಕೊಂಡಂತೆ ಕಳ್ಳತನ ಮಾಡಲು ನಿರ್ಧರಿಸಿದ ಸ್ಥಳಕ್ಕೆ ಟ್ರಕ್​​, ವ್ಯಾನ್​ಗಳ ಮೂಲಕ ಸ್ಥಳಕ್ಕೆ ಆಗಮಿಸಿದ್ದರು. ಪಿಕೊ ರಿವೆರಾ ಮತ್ತು ಫುಲ್ಲರ್ಟನ್ ಸೇರಿದಂತೆ ದಕ್ಷಿಣ ಕ್ಯಾಲಿಫೋರ್ನಿಯಾದಾದ್ಯಂತ ಕಳ್ಳತನಕ್ಕೆ ಪ್ಲ್ಯಾನ್​ ಮಾಡಿಕೊಂಡಿದ್ದರು. ಲಾಸ್ ಏಂಜಲೀಸ್ ಮತ್ತು ಲಾಂಗ್ ಬೀಚ್ ಬಂದರುಗಳ ಮೂಲಕ ಅಮೆರಿಕಕ್ಕೆ ಬಂದ ಸರಕು ಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಆರೋಪಿಗಳು ತಾವು ಕಳ್ಳತನ ಮಾಡುತ್ತಿದ್ದೇವೆ ಎನ್ನುವ ವಿಡಿಯೋ ಮತ್ತು ಫ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅದರ ಆಧಾರದ ಮೇಲೆ ತನಿಖೆಯ ಬೆನ್ನತ್ತಿದ್ದ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಒಪ್ಪಸಿದ್ದಾರೆ. ಸದ್ಯ ಕೋರ್ಟ್ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, 13 ಜನರು ಅಪರಾಧಿಗಳು ಎಂದು ಸಾಬೀತಾದರೆ 10 ವರ್ಷಗಳ ಜೈಲು ಶಿಕ್ಷೆ ಅನುಭವಿಸುವುದು, ದಂಡ ಕಟ್ಟುಬೇಕಾದ ಸಾಧ್ಯತೆ ಇದೆ ಎನ್ನಲಾಗಿದೆ, (ಏಜೆನ್ಸೀಸ್).

Dailyhunt
Disclaimer: This content has not been generated, created or edited by Dailyhunt. Publisher: Vijayvani