Dailyhunt
ವಿವಿ ಸಾಗರದಿಂದ ಸುವರ್ಣಮುಖಿ ನದಿಗೆ ನೀರು ಹರಿಸಿ

ವಿವಿ ಸಾಗರದಿಂದ ಸುವರ್ಣಮುಖಿ ನದಿಗೆ ನೀರು ಹರಿಸಿ

ಚಿತ್ರದುರ್ಗ: ಹಿರಿಯೂರು ತಾಲೂಕಿನಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಈ ಬಗ್ಗೆ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ.
ಆದ್ದರಿಂದ ಕುಡಿಯುವ ನೀರಿಗಾಗಿ ವಾಣಿವಿಲಾಸ ಸಾಗರ ಜಲಾಶಯದಿಂದ ಬಲದಂಡೆ ನಾಲೆ ಮೂಲಕ ಕುಂದಲಗುರ ಸಮೀಪದ ವಿತರಣಾ ತೊಟ್ಟಿಯಿಂದ ಸುವರ್ಣಮುಖಿ ನದಿಗೆ ನೀರು ಹರಿಸುವಂತೆ ಸಂಸದ ಗೋವಿಂದ ಎಂ.ಕಾರಜೋಳ ಅವರು ಮೈಸೂರು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅವರಿಗೆ ದೂರವಾಣಿ ಕರೆ ಮೂಲಕ ಸೋಮವಾರ ತಿಳಿಸಿದ್ದಾರೆ.
ಈ ನದಿಯಿಂದ ಕುಂದಲಗುರ ಹಾಗೂ ಸಮುದ್ರದಹಳ್ಳಿ, ಹೂವಿನಹೊಳೆ ಗಡಿಯಲ್ಲಿರುವ ೨ ಚೆಕ್‌ಡ್ಯಾಂಗಳಿಗೆ ನೀರು ಭರ್ತಿಯಾಗ ಲಿದೆ. ವಿವಿ ಸಾಗರದಿಂದ ನೀರು ಹರಿಸುವಂತೆ ರೈತರು ತಮಗೆ ಮನವಿ ಮಾಡಿದ್ದು, ಅವರ ಈ ಬೇಡಿಕೆ ಸ್ಪಂದಿಸಿದರೆ ಕುಡಿವ ನೀರು ಸಮ ಸ್ಯೆಗೆ ಪರಿಹಾರ ಸಿಗಲಿದೆ. ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಮನದಟ್ಟು ಮಾಡಿಕೊಟ್ಟಿದ್ದಾರೆ.


ಬಿರು ಬೇಸಿಗೆ ಈ ಸಂದರ್ಭದಲ್ಲಿ ಕುಂದಲಗುರ, ಮ್ಯಾದನಹೊಳೆ ಸಮುದ್ರದಹಳ್ಳಿ, ಇಕ್ಕನೂರು, ಕೋಡಿಹಳ್ಳಿ ಗ್ರಾಮಗಳಲ್ಲಿ ಅಂತ ರ್ಜಲ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿದ್ದು, ಕೊಳವೆ ಬಾವಿಗಳೂ ಬತ್ತಿ ಹೋಗಿವೆ. ಇದರಿಂದ ಜನ, ಜಾನುವಾರಗಳಿಗೆ ಕುಡಿಯು ವ ನೀರಿಗೆ ತುಂಬಾ ಸಮಸ್ಯೆಯಾಗಿದ್ದು, ಆದ್ದರಿಂದ ವಿವಿ ಸಾಗರದಿಂದ ನೀರು ಹರಿಸಿ ಈ ಸಮಸ್ಯೆಯನ್ನು ಶೀಘ್ರ ಪರಿಸ ಬೇಕೆಂಬ ಸೂಚನೆಗೆ ನಿತೇಶ್ ಪಾಟೀಲ್ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಇನ್ನಷ್ಟು ಓದಿ
Dailyhunt
Disclaimer: This content has not been generated, created or edited by Dailyhunt. Publisher: Vijayvani