ಲಂಡನ್: ಎರಡು ವರ್ಷಗಳ ಹಿಂದೆ ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳಾ ಡಬಲ್ಸ್ ವಿಭಾಗದಲ್ಲಿ ಜತೆಯಾಗಿ ಆಡಿದ್ದ ಜೆಕ್ ಗಣರಾಜ್ಯದ ತಾರೆಯರಾದ 10ನೇ ಶ್ರೇಯಾಂಕಿತೆ ಕರೋಲಿನಾ ಮುಚೋವಾ ಮತ್ತು 9ನೇ ಶ್ರೇಯಾಂಕಿತೆ ಲಿಂಡಾ ನೋಸ್ಕೋವಾ ವಿಂಬಲ್ಡನ್ (Wimbledon) ಟೆನಿಸ್ ಟೂರ್ನಿಯಲ್ಲಿ ಶನಿವಾರ ಆಲ್ ಇಂಗ್ಲೆಂಡ್ ಕ್ಲಬ್ನಲ್ಲಿ ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟಕ್ಕಾಗಿ ಪರಸ್ಪರ ಎದುರಾಗಲಿದ್ದಾರೆ.
2023ರ ಫ್ರೆಂಚ್ ಓಪನ್ನಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದ ಮುಚೋವಾ, ಈ ಬಾರಿ ಪ್ರಶಸ್ತಿ ಬರ ನೀಗಿಸಿಕೊಳ್ಳುವ ತವಕದಲ್ಲಿದ್ದಾರೆ. 2014ರ ನಂತರ ವಿಂಬಲ್ಡನ್ ಫೈನಲ್ಗೇರಿರುವ ಅತ್ಯಂತ ಕಿರಿಯರಾಗಿರುವ ನೋಸ್ಕೋವಾ, ಟೂರ್ನಿಗೆ ಮುನ್ನ ಬರ್ಲಿನ್ನಲ್ಲಿ ಪ್ರಶಸ್ತಿ ಗೆದ್ದ ವಿಶ್ವಾಸವನ್ನೂ ಹೊಂದಿದ್ದಾರೆ. ಅವರು ಗೆದ್ದರೆ ಕಳೆದ 15 ವರ್ಷಗಳಲ್ಲಿ ಅತ್ಯಂತ ಕಿರಿಯ ವಿಂಬಲ್ಡನ್ ವಿಜೇತೆ ಎನಿಸಲಿದ್ದಾರೆ. 2009ರ ಬಳಿಕ ವಿಂಬಲ್ಡನ್ನಲ್ಲಿ ಇದೇ ಮೊದಲ ಬಾರಿಗೆ ಒಂದೇ ದೇಶದ ಆಟಗಾರ್ತಿಯರು ಫೈನಲ್ನಲ್ಲಿ ಮುಖಾಮುಖಿ ಆಗಲಿದ್ದಾರೆ.
*ಆರಂಭ: ರಾತ್ರಿ 8.30*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್2
ಇನ್ನಷ್ಟು ಓದಿ

