Dailyhunt Logo
  • Light mode
    Follow system
    Dark mode
    • Play Story
    • App Story
ಸಣ್ಣ ಸಮುದಾಯಗಳಿಗೆ ಸಮಾನ ಅವಕಾಶ, ಸೂಕ್ತ ಪ್ರಾತಿನಿಧ್ಯ ದೊರೆಯಲಿ- ಕೌಟಿಲ್ಯ

ಸಣ್ಣ ಸಮುದಾಯಗಳಿಗೆ ಸಮಾನ ಅವಕಾಶ, ಸೂಕ್ತ ಪ್ರಾತಿನಿಧ್ಯ ದೊರೆಯಲಿ- ಕೌಟಿಲ್ಯ

ಮಡಿವಾಳ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟೇ ಅಸ್ತ್ರ: ರಘು ಕೌಟಿಲ್ಯ

ಸಣ್ಣ ಸಮುದಾಯಗಳಿಗೆ ಸಮಾನ ಅವಕಾಶ, ಸೂಕ್ತ ಪ್ರಾತಿನಿಧ್ಯ ದೊರೆಯಲಿ

ವಿನಯವಾಣಿ

ಶಹಾಪುರ: ಮಡಿವಾಳ, ಸವಿತಾ,‌ ನೇಕಾರ, ಉಪ್ಪಾರ ಸಮುದಾಯ ಸೇರಿದಂತೆ ಸಣ್ಣ ಸಣ್ಣ ಸಮುದಾಯಗಳಿಗೂ ಸಾಮಾಜಿಕ,‌ ರಾಜಕೀಯ ಮತ್ತು ಆರ್ಥಿಕವಾಗಿ ಸಬಲರಾಗಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು

ರಾಜ್ಯ ಹಿಂದುಳಿದ ವರ್ಗಗಳ ಮೊರ್ಚಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಆರದ.ರಘು ಕೌಟಿಲ್ಯ ತಿಳಿಸಿದರು.

ನಗರದ ಮಡಿವಾಳ ಮಾಚಿದೇವ ಮಂದಿರದಲ್ಲಿ ಮಡಿವಾಳ ಸಮಾಜದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಣ್ಣ ಸಣ್ಣ ಸಮುದಾಯದವರಿಗೆ ಎಂಎಲ್‌ಎ, ಎಂಪಿ ಆಯ್ಕೆಯಾಗಲು ಆಗಲ್ಲ ಆದರೆ ಓರ್ವ ಎಂಎಲ್‌ಎ ಯನ್ನು ಗೆಲ್ಲಿಸುವ ಅಥವಾ ಸೋಲಿಸುವ ಶಕ್ತಿ ಇರುತ್ತದೆ. ಆದರೆ ಸಮುದಾಯದ ಕನಿಷ್ಟ 3 ಸಾವಿರ ಮತಗಳೇ ಇರಲಿ, ಒಗ್ಗಟ್ಟಿನಿಂದ ನೀವೆಲ್ಲ ಮತ ಚಲಾಯಿಸಿದಲ್ಲಿ ಓರ್ವರನ್ನು ಗೆಲ್ಲಿಸುವ ಶಕ್ತಿ ಇರಲಿದೆ ಎಂಬುದು ತಿಳಿದಿರಲಿ. ಯಾವುದೇ ಆಮಿಷಕ್ಕೆ ಒಳಗಾಗದೆ ಸಮುದಾಯದ ಎಲ್ಲರ ಒಗ್ಗಟ್ಟು ಅಗತ್ಯವಾಗಿರುತ್ತದೆ . ಗ್ರಾಪಂ ಚುನಾವಣೆ ಎದುರಿಸುವದು ಕಷ್ಟ. ಆದರೆ ಒಗ್ಗಟ್ಟಿನಲಿ‌ ಬಲವಿದೆ ಎಂಬುದು ತೋರಿಸಬೇಕು.

ಸಮುದಾಯದ ಸಮಗ್ರ ಅಭಿವೃದ್ಧಿಗೆ ಸಂಘಟನೆ ಮತ್ತು ಒಗ್ಗಟ್ಟು ಅತ್ಯಂತ ಅಗತ್ಯ. ಸಣ್ಣ ಸಣ್ಣ ಸಮಾಜದ ಜನರು ಒಗ್ಗಟ್ಟಾಗಿ ತಮ್ಮ ಹಕ್ಕುಗಳು ಹಾಗೂ ಬೇಡಿಕೆಗಳಿಗಾಗಿ ಧ್ವನಿ ಎತ್ತದಿದ್ದರೆ ಎಷ್ಟೇ ವರ್ಷಗಳು ಕಳೆದರೂ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಿಲ್ಲ. ಇಂದಿಗೂ ಅತ್ಯಂತ ಸಣ್ಣ ಸಮುದಾಯಗಳಿಗೆ ಸಾಮಾಜಿಕ ಸ್ವಾತಂತ್ರ್ಯ, ಸಮಾನ ಅವಕಾಶ ಹಾಗೂ ಸೂಕ್ತ ಪ್ರಾತಿನಿಧ್ಯ ದೊರೆಯದಿರುವುದು ದುರಂತ ಎಂದರು.

ಮಡಿವಾಳ ಸಮುದಾಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯದ ಬಹುತೇಕ ಕುಟುಂಬಗಳಿಗೆ ಸ್ವಂತ ಜಮೀನು, ಮನೆ ಸೇರಿದಂತೆ ಆರ್ಥಿಕ ಭದ್ರತೆಯ ಕೊರತೆಯ ನಡುವೆ ಜೀವನ ಸಾಗಿಸುತ್ತಿದ್ದಾರೆ.‌ಸಣ್ಣ ಸಣ್ಣ ಸಮುದಾಯ ಒಗ್ಗಟ್ಟಾಗಿ ಗಟ್ಟಿಯಾಗಿ ಮೆಟ್ಟಿ ನಿಲ್ಲಬೇಕಿದೆ ಅಂದಾಗ ಸುಧಾರಣೆ ಯಾಗಲು ಸಾಧ್ಯ ಎಂದರು.

ಬಿಜೆಪಿ ಮುಖಂಡ ಅಮೀನರಡ್ಡಿ ಯಾಳಗಿ ಮಾತನಾಡಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ತಾವು ಹಾಗೂ ತಮ್ಮ ಪಕ್ಷ ಸದಾ ಬೆಂಬಲವಾಗಿ ನಿಲ್ಲಲಿದೆ. ಸರ್ಕಾರದ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳು ಅರ್ಹರಿಗೆ ತಲುಪಬೇಕಾದರೆ ಸಮುದಾಯದ ಜನರು ಒಗ್ಗಟ್ಟಿನಿಂದ ಸಂಘಟಿತರಾಗಬೇಕು. ಸಂಘಟಿತ ಶಕ್ತಿಯ ಮೂಲಕವೇ ತಮ್ಮ ಹಕ್ಕುಗಳನ್ನು ಸಮರ್ಥವಾಗಿ ಪ್ರತಿಪಾದಿಸಿ ಸರ್ಕಾರದ ಗಮನ ಸೆಳೆಯಲು ಸಾಧ್ಯ ಎಂದರು.

ಬಿಜೆಪಿ ಓಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಅವಣ್ಣ ಮ್ಯಾಕೇರಿ ಮಾತನಾಡಿ, ಸಣ್ಣ ಸಣ್ಣ ಸಮುದಾಯಗಳು ಒಗ್ಗಟ್ಟಾದಾಗ ಅವುಗಳ ಶಕ್ತಿ ಹೆಚ್ಚುತ್ತದೆ. ಸಂಘಟಿತ ಸಮುದಾಯದ ಧ್ವನಿಗೆ ಸರ್ಕಾರವೂ ಮನ್ನಣೆ ನೀಡುತ್ತದೆ. ಮಡಿವಾಳ ಸಮಾಜವು ಸಹಕಾರ ಮತ್ತು ಸೌಹಾರ್ದತೆಯೊಂದಿಗೆ ಸಂಘಟಿತರಾಗಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಮುಂದೆ ಬರಬೇಕು. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಸಲು ಸಮುದಾಯದ ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಓಬಿಸಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಂದಕೂರ, ತಾಲೂಕ ಮಡಿವಾಳ ಸಂಘದ ಅಧ್ಯಕ್ಷ ಭೀಮರಾಯ ಮಡಿವಾಳಕರ್, ಹಳಿಸಗರ ಮಡಿವಾಳೇಶ್ವರ ಮಠದ ಶರಣ ಶೇಖಪ್ಪ ಸಾಧು ಮಡಿವಾಳ, ರಾಜಕುಮಾರ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ್ ಯಾಳಗಿ, ಪತ್ರಕರ್ತ ಮಲ್ಲಿಕಾರ್ಜುನ್ ಮುದ್ನೂರ್, ಮಂಜುನಾಥ ಮಡಿವಾಳ, ನಾಗು ಮಡಿವಾಳ, ಶ್ರೀಶೈಲ ಮುಡಬೂಳ, ಸಂಗಪ್ಪ ಮಡಿವಾಳ ಸೇರಿದಂತೆ ಸಮಾಜದ ಯುವಕರು ಮತ್ತು ಹಿರಿಯರು ಭಾಗವಹಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vinayavani