Thursday, 26 Nov, 12.10 pm Vishwa News24

ಉಡುಪಿ
ಗೃಹರಕ್ಷಕದಳ ಕುಂದಾಪುರ: ಕೋವಿಡ್ ಜನಜಾಗೃತಿ ಅಭಿಯಾನ -Vishwanews24

ಕುಂದಾಪುರ: ಉಡುಪಿ ಜಿಲ್ಲಾ ಗೃಹರಕ್ಷಕದಳ ಕುಂದಾಪುರ ಘಟಕ ಇವರ ವತಿಯಿಂದ ಕೊರೋನಾ ವೈರಸ್ ತಡೆಗಟ್ಟುವಿಕೆಯ ಸಲುವಾಗಿ ಕುಂದಾಪುರದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.

ಈ ಜನ ಜಾಗೃತಿ ಅಭಿಯಾನದಲ್ಲಿ ಸಾರ್ವಜನಿಕರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಸಲುವಾಗಿ, ಕುಂದಾಪುರ ಪೋಲೀಸ್ ಠಾಣೆಯಿಂದ ಶಾಸ್ತ್ರಿ ಸರ್ಕಲ್ ವರೆಗೆ ಜಾಥಾ ನಡೆಸಿ ಮಾಸ್ಕ್ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಸಮಾದೇಷ್ಟರಾದ ಡಾ.ಪ್ರಶಾಂತ್ ಶೆಟ್ಟಿ, ಉಪ ಸಮಾದೇಷ್ಟರಾದ ರಮೇಶ, ಕುಂದಾಪುರ ಪೋಲೀಸ್ ಠಾಣೆಯ ಠಾಣಾಧಿಕಾರಿ ಸುಭಾಷ್, ಬ್ರಹ್ಮಾವರ ಘಟಕದ ಪ್ರಭಾರ ಘಟಕಾಧಿಕಾರಿ ಸ್ಟೀವನ್ ಪ್ರಕಾಶ್, ಕುಂದಾಪುರ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್ ಹಾಗೂ ಕುಂದಾಪುರ ಘಟಕದ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Vishwa News24
Top