Dailyhunt Logo
  • Light mode
    Follow system
    Dark mode
    • Play Story
    • App Story
ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ ಉದ್ಘಾಟನೆ - vishwanews24

ಕಾರವಾರ : ವೀರ ಯೋಧ ಹುತಾತ್ಮ ವಿನೋದ ನಾಯಕ್ ಅವರ 21ನೇ ಪುಣ್ಯತಿಥಿ ಹಾಗೂ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ ಉದ್ಘಾಟನೆ - vishwanews24

Vishwa News24 2 weeks ago

ಕಾರವಾರ : ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡುತ್ತಿರುವಾಗಲೇ ವೀರ ಮರಣವನ್ನಪ್ಪಿದ್ದ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ ವೀರ ಯೋಧ ಹುತಾತ್ಮ ವಿನೋದ ನಾಯ್ಕ ಅವರ 21ನೇ ಪುಣ್ಯ ತಿಥಿ ಹಾಗೂ ಸ್ಮಾರಕ ಹೊಸದಾಗಿ ನಿರ್ಮಾಣಗೊಂಡ ಕಾಂಪೌಂಡ್ ಗೋಡೆಯನ್ನು ಬಿಜೆಪಿ ಪಕ್ಷದ ರಾಜ್ಯ ಉಪಾಧ್ಯಕ್ಷರು ಹಾಗೂ ಮಾಜಿ ಶಾಸಕಿಯಾದ ರೂಪಾಲಿ ಎಸ್ ನಾಯ್ಕ ಅವರು ಉದ್ಘಾಟಿಸಿದರು.

ನಂತರ ಮಾತನಾಡಿ ಹುತಾತ್ಮ ವೀರ ಯೋಧ ವಿನೋದ ನಾಯ್ಕ ಅವರ ಪುಣ್ಯ ತಿಥಿಯ ದಿನ ಅವರ ಪುಣ್ಯ ಭೂಮಿಯಲ್ಲಿ ಬಂದಿದ್ದೇವೆ. ಮತ್ತು ವೀರ ಯೋಧ ವಿನೋದ ನಾಯ್ಕ ಅವರ ತಂದೆ ಮಹಾದೇವ ನಾಯ್ಕ ಅಣ್ಣಾ ರವರಿಗೆ ಪಾದಗಳಿಗೆ ನಮಸ್ಕಕರಿಸುತೇನೆ. ಏಕೈಕ ಮಗನಾದರು ಭಾರತ ದೇಶಕ್ಕೆ ಅಮೂಲ್ಯವಾದ ರತ್ನ ಕೊಟ್ಟಿದ್ದು ಆ ರತ್ನ ಇಂದಿಗೂ ಇಲ್ಲಿ ಜೀವಂತವಾಗಿದೆ.ಅವರ ಕುಟುಂಬದ ದುಃಖಗಳಿಗೆ ಸಹಿಸುವ ಶಕ್ತಿ ಭಗವಂತ ನೀಡಲಿ ಎಂದರು.

ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಅಪಘಾತ: ಉಡುಪಿ ಮೂಲದ ಪೈಲಟ್‌ ಅಭಿಷೇಕ್ ಪೂಜಾರಿ ಸಾವು - vishwanews24

ಹುತಾತ್ಮ ವೀರ ಯೋಧ ವಿನೋದ ನಾಯ್ಕ ಅವರ ಸ್ಮಾರಕವನ್ನು ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಆನಂದು ನಾಯ್ಕ ಅವರು ವೀರ ಯೋಧ ಹುತಾತ್ಮ ದಿ ವಿನೋದ ನಾಯ್ಕ ಅವರ ಶೌರ್ಯ ಬಲಿದಾನ ವೀರತ್ವದ ದೇಶಕ್ಕೆ ಸಲ್ಲಿಸಿದ ಪುಣ್ಯ ತಿಥಿಯ ನಿಮಿತ್ತ ನಮನ ಸಲ್ಲಿಸುತ್ತೇವೆ.ಅವರ ತಂದೆಯವರು ಕೂಡಾ ಹುತಾತ್ಮ ವೀರ ಯೋಧನ ಸ್ಮರಣೆಗಾಗಿ ಸಾಮಾಜಿಕ ಧಾರ್ಮಿಕ ಶಿಕ್ಷಣ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಿ ಸೇವೆ ಮಾಡುತ್ತಿದ್ದಾರೆ ಎಂದು ಹೇಳಿದರು. ನಂತರ ವೀರ ಹುತಾತ್ಮ ತಂದೆ ಮಹಾದೇವ ಡಿ . ನಾಯ್ಕ ಮಾತನಾಡಿ ಸ್ಮಾರಕಕ್ಕೆ ಸುತ್ತಲೂ ನೂತನ ಕಾಂಪೌಂಡ್ ಗೋಡೆ ಹಾಗೂ ಕಬ್ಬಿಣದ ಗೇಟು ನಿರ್ಮಾಣಕ್ಕೆ ಸ್ವಂತ ಧನ ಸಹಾಯ ನೀಡಿದ ಮಾಜಿ ಶಾಸಕಿಯಾದ ರೂಪಾಲಿ ನಾಯ್ಕ ಅವರಿಗೆ ಧನ್ಯವಾದಗಳು ಅರ್ಪಿಸಿದ್ದರು. ಬಿ. ಜೆ ಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಅವರು ಮಾತನಾಡಿ ಭಾರತ ಮಾತೆಯ ಹೆಮ್ಮೆಯ ಪುತ್ರನಿಗೆ ಗೌರವ ನಮನ ಸಲ್ಲಿಸುವ ಮೂಲಕ ವೀರ ಯೋಧನ ಕುಟುಂಬಕ್ಕೆ ಸಮಸ್ತ ದೇಶದ ಜನರ ಪರವಾಗಿ ಅಭಿನಂದನೆಗಳು ಸಲ್ಲಿಸೋಣ ಎಂದು ಹೇಳಿದರು.

ಈ ಹುತಾತ್ಮ ಯೋಧನ 21 ನೇ ವರ್ಷ ಸಂದರೂ ಅವರ ವೀರತ್ವ ಬಲಿದಾನ ಶೌರ್ಯ ದೇಶ ಸೇವೆ ಅಜರಾಮರವಾಗಿದೆ. ಏಕೈಕ ಪುತ್ರರಾಗಿದ್ದ ವೀರ ಯೋಧ ಲ್ಶಾನ್ಸ್ ನಾಯಕ ದಿ. ವಿನೋದ ನಾಯ್ಕ ಅವರು ಅಗಸ್ಟ್ 18 ರಂದು 2005 ರಲ್ಲಿ ಭಾರತ ದೇಶದ ಜಮ್ಮುಕಾಶ್ಮೀರ ಪೂಂಚ್ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಹೋರಾಟದಲ್ಲಿ ಹುತಾತ್ಮ ರಾಗಿದ್ದರು. ಅಂದು ಕುಟುಂಬದಲ್ಲಿ ತಂದೆತಾಯಿ ಸೋದರಿ ಇವರನ್ನು ಕಳೆದುಕೊಂಡು ದುಃಖ ಮಡುವಿನಲ್ಲಿ ಇದ್ದ ಸ್ವಾಂತನ ಹೇಳಲು ಹಾಗೂ ಹುತಾತ್ಮ ಯೋಧನ ಪ್ರಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲು ಕಡವಾಡದತ್ತ ಸಾವಿರಾರು ಸಂಖ್ಯೆಯಲ್ಲಿ ತಾಲ್ಲೂಕಿನ ಜನರು ಅಭಿಮಾನಿಗಳು ಕಣ್ಣಿರು ಗೆರೆಯುತ್ತಾ ಬಂದಿದ್ದರು. ಮತ್ತು ಅಂದು ಅಣ್ಣ ತಂಗಿಯರ ರಕ್ಷಾ ಬಂಧನದ ಹಬ್ಬದ ಸಂದರ್ಭದಲ್ಲಿ ವೀರ ಯೋಧ ಹುತಾತ್ಮ ವಿನೋದ ನಾಯ್ಕ ಉಗ್ರರ ಗುಂಡೇಟಿಗೆ ಗಡಿಯಲ್ಲಿ ವೀರ ಮರಣವನ್ನಪ್ಪಿದ್ದರು. ಈ ಯೋಧನ ಸ್ಮರಣಾರ್ಥ ತಂದೆ ತಾಯಿ ಗ್ರಾಮದಲ್ಲಿ ನೂತನ ಬಸ್ ತಂಗುದಾಣ ನಿರ್ಮಿಸಿ ಕಳೆದ ಆಗಸ್ಟ್ 15 ರಂದು ನಿವೃತ್ತ ಸೈನಿಕರ ಅಮೃತ ಹಸ್ತದಿಂದ ಉದ್ಘಾಟಿಸಿ ಗ್ರಾಮ ಪಂಚಾಯಿತಿಗೆ ಹಸ್ತಾತರಿ ದೇಶಕ್ಕೆ ಮಾದರಿಯಾಗಿದ್ದರು. ಇದ್ದರಿಂದ ಕಡವಾಡ ಗ್ರಾಮದ ಐತಿಹಾಸಿಕ ನೆಲೆಯಲ್ಲಿ ಹೆಚ್ಚಿನ ಮಹತ್ವ ತಂದು ಕೊಟ್ಟಿದೆ. ಈ ಸ್ಮಾರಕಕ್ಕೆ ನೂತನ ಕಾಂಪೌಂಡ್ ಗೋಡೆ ನಿರ್ಮಾಣಕ್ಕಾಗಿ ಧನ ಸಹಾಯವನ್ನು ಮಾಜಿ ಶಾಸಕಿಯಾದ ರೂಪಾಲಿ ನಾಯ್ಕ ಅವರು ನೀಡಿದರು. ವಂದೇ ಮಾತರಂ ಹಾಗೂ ರಾಷ್ಟ್ರ ಗೀತೆ ಹಾಡಲಾಯಿತು.

ಮೈಸೂರು ದಸರಾಕ್ಕೆ ಅದ್ದೂರಿ ಸಿದ್ಧತೆ : ಅರಮನೆ ಪ್ರವೇಶಿಸಿದ ಗಜಪಡೆಗೆ ಭರ್ಜರಿ ಸ್ವಾಗತ - vishwanews24

ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಆನಂದು ಆರ್ ನಾಯ್ಕ ಮಾಜಿ ಸದಸ್ಯರಾದ ಕಿಶೋರ ಕಡವಾಡಕರ ದೇವಿದಾಸ ತಳೇಕರ ನಿವೃತ್ತ ಸೈನಿಕರಾದ ಶೆಶಾಂಕ ಕಡವಾಡಕರ ಬಾಲಕೃಷ್ಣ ಭೋವಿ ಅನಿಲ ನಾಯ್ಕ ಗಣಪತಿ ಗುರವ ಕೃಷ್ಣಪ್ಪ ಬಾಂದೇಕರ ಲಿಂಗೇಶ್ವರ ತಳೇಕರ ಉದಯ ಮಾಂಜ್ರೇಕರ ಅಶೋಕ ತಾಮಸೆ ಪ್ರವೀಣ ಮಾಂಜ್ರೇಕರ ಹಾಗೂ ರಾಜಾರಾಮ ನಾಯ್ಕ ನಂದನ ಮಾಂಜ್ರೇಕರ ರಾಮನಾಥ ನಾಯ್ಕ ರೋಹಿದಾಸ ನಾಯ್ಕ ರೇಖಾ ಆರ್ ನಾಯ್ಕ ವಿಷ್ಣು ಗಾಯಕ ಗಣ್ಯರು ಅಭಿಮಾನಿಗಳು ಊರ ನಾಗರಿಕರು ಮುಂದಲಾದವರು ಉಪಸ್ಥಿತರಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Vishwa News24