Dailyhunt Logo
  • Light mode
    Follow system
    Dark mode
    • Play Story
    • App Story
ಕಾರ್ಕಳ ರೆಂಜಾಳದಲ್ಲಿ ಭೂಕುಸಿತದ ಆತಂಕ : ಡಿಸಿ ಸ್ವರೂಪಾ ಟಿ.ಕೆ ಭೇಟಿ, ಪರಿಶೀಲನೆ - vishwanews24

ಕಾರ್ಕಳ ರೆಂಜಾಳದಲ್ಲಿ ಭೂಕುಸಿತದ ಆತಂಕ : ಡಿಸಿ ಸ್ವರೂಪಾ ಟಿ.ಕೆ ಭೇಟಿ, ಪರಿಶೀಲನೆ - vishwanews24

Vishwa News24 1 month ago

ಡುಪಿ:ಕಾರ್ಕಳ ತಾಲೂಕಿನಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕೆಲ ಪ್ರದೇಶಗಳಲ್ಲಿ ಭೂಕುಸಿತದ ಆತಂಕ ಎದುರಾಗಿದ್ದು, ರೆಂಜಾಳ ಗ್ರಾಮದಲ್ಲಿ ಪರಿಸ್ಥಿತಿ ಗಂಭೀರಗೊಂಡಿದೆ.

ರೆಂಜಾಳ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಡಿಸಿ ಸ್ವರೂಪಾ ಟಿ.ಕೆ, ತಹಶೀಲ್ದಾ‌ರ್ ಪ್ರದೀಪ್ ಆರ್.

ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನಾಹುತವನ್ನು ತಪ್ಪಿಸುವ ಮುನ್ನೆಚ್ಚರಿಕೆ ಕ್ರಮವಾಗಿ ಸಂತ್ರಸ್ತ ಕುಟುಂಬದ ಸದಸ್ಯರನ್ನು ಸುರಕ್ಷತೆಯ ದೃಷ್ಟಿಯಿಂದ ಸಮೀಪದ ಸರಕಾರಿ ಶಾಲೆಯಲ್ಲಿ ತಾತ್ಕಾಲಿಕವಾಗಿ ವಾಸಿಸಲು ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದ್ದಾರೆ.

ಯಾವುದೇ ಅಡ್ಡಿ ಆತಂಕಗಳು ಎದುರಾಗದೆ ಮೀನುಗಾರಿಕೆ ಸುಗಮವಾಗಲಿ : ಗಂಗೊಳ್ಳಿಯಲ್ಲಿ ಸಮುದ್ರ ಪೂಜೆ - vishwanews24

ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರು ಪರಿಸ್ಥಿತಿಯನ್ನು ಪರಿಶೀಲಿಸಿ, ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದರು. ಭೂಕುಸಿತದ ಕಾರಣ ಹಾಗೂ ಮುಂದಿನ ಅಪಾಯದ ಮುನ್ಸೂಚನೆಗಳನ್ನು ಅಧ್ಯಯನ ಮಾಡಲು ಬೆಂಗಳೂರು ಜಿಎಸ್ ಐ ಸಂಸ್ಥೆ ಭೂ ವಿಜ್ಞಾನಿಗಳ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Vishwa News24