Dailyhunt Logo
  • Light mode
    Follow system
    Dark mode
    • Play Story
    • App Story
ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ  - vishwanews24

ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ಭೇಟಿ - vishwanews24

Vishwa News24 2 days ago

ಮಂಗಳೂರು:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಗೂ ಮುನ್ನ ತಮ್ಮ ಸಂಪುಟ ಸಹೋದ್ಯೋಗಿಗಳ ಜೊತೆಗೆ ಕದ್ರಿಯ ಮಂಜುನಾಥ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.

ಕದ್ರಿ ಸರ್ಕ್ಯೂಟ್ ಹೌಸ್ ನಿಂದ ವಾಹನದಲ್ಲಿ ದೇವಾಲಯಕ್ಕೆ ಬಂದ ಅವರನ್ನು ಚೆಂಡೆ ವಾದನ, ಯಕ್ಷಗಾನ ವೇಷದೊಂದಿಗೆ ಹೂಮಳೆ ಗರೆದು ಸ್ವಾಗತಿಸಲಾಯಿತು.

ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತ ಮೊಬೈಲ್ ನೆಟ್‌ವರ್ಕ್ ಸಮಸ್ಯೆ; ತಾಂತ್ರಿಕ ಪರಿಹಾರಕ್ಕೆ ಸರ್ಕಾರ ಕ್ರಮ: ಪ್ರಿಯಾಂಕ್ ಖರ್ಗೆ - vishwanews24

ಮುಖ್ಯಮಂತ್ರಿ, ಸಚಿವರ ಭೇಟಿಯ ಕಾರಣಕ್ಕೆ ದೇವಾಲಯದ ಆವರಣದಲ್ಲಿ ಭದ್ರತಾ ವ್ಯವಸ್ಥೆ ಬಿಗಿಗೊಳಿಸಲಾಗಿತ್ತು. ಬೆಳಿಗ್ಗೆ 8.30ರಿಂದಲೇ ಪಕ್ಷದ ಕಾರ್ಯಕರ್ತರು ದೇವಸ್ಥಾನದ ಬಳಿ ಸೇರಿ ಕಾಯುತ್ತಿದ್ದರು. 9 ಗಂಟೆಗೆ ಅವರ ಭೇಟಿ ನಿಗದಿಯಾಗಿತ್ತು. 11.15ರ ಸುಮಾರಿಗೆ ಮುಖ್ಯಮಂತ್ರಿ, ಸಚಿವರು ದೇವಾಲಯಕ್ಕೆ ಬಂದರು.

'ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕದ್ರಿ ದೇವಸ್ಥಾನ ಕ್ಕೆ ಭೇಟಿ ನೀಡುವ ಪ್ರಯುಕ್ತ ಅವರ ಹೆಸರಿನಲ್ಲಿ ಸಂಕಲ್ಪ ಮಾಡಿ, ಕದ್ರಿ ಮಂಜುನಾಥ ದೇವರಿಗೆ ಮಧ್ಯಾಹ್ನ ಏಕದಶರುದ್ರಾಭಿಷೇಕ, ಪಂಚಾಮೃತ ಪುರಸರ ಸೇವೆಯನ್ನು ನೆರವೇರಿಸಲಾಗುತ್ತದೆ. ಶುಕ್ರವಾರದ ಅನ್ನದಾನ ಸೇವೆಯೂ ಅವರ ಹೆಸರಿನಲ್ಲಿ ನಡೆಯುತ್ತದೆ' ಎಂದು ಅರ್ಚಕ ಕೃಷ್ಣ ಅಡಿಗ ತಿಳಿಸಿದರು.

ಕರಾವಳಿಯ ವಾತಾವರಣ ಕೆಡಿಸಲು ಹಾಗೂ ವೋಟ್ ಬ್ಯಾಂಕ್‌ಗಾಗಿ ಕ್ಯಾಬಿನಟ್‌ ಸಭೆ : ಯತ್ನಾಳ್ ಲೇವಡಿ - vishwanews24

Dailyhunt
Disclaimer: This content has not been generated, created or edited by Dailyhunt. Publisher: Vishwa News24