Dailyhunt Logo
  • Light mode
    Follow system
    Dark mode
    • Play Story
    • App Story
ರಿಯಾದ್ : ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವಾಯುದಾಳಿ ಎಚ್ಚರಿಕೆ - vishwanews24

ರಿಯಾದ್ : ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವಾಯುದಾಳಿ ಎಚ್ಚರಿಕೆ - vishwanews24

Vishwa News24 4 days ago

ರಿಯಾದ್ :ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾ ಮೇಲಿನ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿರುವ ಬೆನ್ನಲ್ಲೇ, ಪವಿತ್ರ ನಗರ ಮಕ್ಕಾದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 'ವಾಯುದಾಳಿ ಎಚ್ಚರಿಕೆ' ನೀಡಿ ಸೈರನ್ ಬಜಾಯಿಸಲಾಗಿದೆ.

ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಮಂಗಳವಾರ ಮಕ್ಕಾ, ಜಿದ್ದಾ ಹಾಗೂ ತಾಯಿಫ್ ಸೇರಿದಂತೆ ಪಶ್ಚಿಮ ಸೌದಿ ಅರೇಬಿಯಾದ ಪ್ರಮುಖ ನಗರಗಳಲ್ಲಿ ಜಾಗರೂಕರಾಗಿರುವಂತೆ ತುರ್ತು ಎಚ್ಚರಿಕೆ ನೀಡಿತು. ಆದರೆ, ಕೆಲವೇ ಕ್ಷಣಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ 'ಮಕ್ಕಾ ನಗರದಲ್ಲಿನ ಅಪಾಯ ದೂರವಾಗಿದೆ' ಎಂದು ಅಧಿಕೃತವಾಗಿ ಸ್ಪಷ್ಟಪಡಿಸಿತು.

ಕರಾವಳಿಯಲ್ಲಿ ಸಚಿವ ಸಂಪುಟ ಸಭೆ : ಮುಖ್ಯಮಂತ್ರಿ ಅವರದ್ದು ದಿಟ್ಟ ಮತ್ತು ಮಹತ್ವದ ಹೆಜ್ಜೆ : ರಮೇಶ್ ಕಾಂಚನ್ - vishwanews24

ಸೌದಿ ನಾಗರಿಕ ರಕ್ಷಣಾ ನಿರ್ದೇಶನಾಲಯವು ಸಾಮಾಜಿಕ ಜಾಲತಾಣ 'X' ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಾರ್ವಜನಿಕರು ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಹೊರಾಂಗಣದಲ್ಲಿ ಗುಂಪುಗೂಡುವುದು ಮತ್ತು ವೀಡಿಯೊ ಚಿತ್ರೀಕರಣ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಹಾಗೂ ಯಾವುದೇ ತುರ್ತು ಸಂದರ್ಭದಲ್ಲಿ 911 ಸಂಖ್ಯೆಗೆ ಕರೆ ಮಾಡಬೇಕೆಂದು ಖಡಕ್ ಸೂಚನೆ ನೀಡಿದೆ.

ಯೆಮೆನ್‌ನಿಂದ ಹೌದಿ ಬಂಡುಕೋರರು ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಿಂದ ಸೌದಿಯ ತೈಲ ಘಟಕಗಳಿಗೆ ಬೆಂಕಿ ಹೊತ್ತಿಕೊಂಡಿದ್ದು, ಕನಿಷ್ಠ 73 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಸೌದಿ ಅರೇಬಿಯಾದ ಖಮಿಸ್ ಮುಶೈತ್‌ನಲ್ಲಿರುವ 'ಕಿಂಗ್ ಖಾಲಿದ್ ವಾಯುನೆಲೆ' ಮೇಲೆ ಡಜನ್‌ಗಟ್ಟಲೆ ಕ್ಷಿಪಣಿಗಳನ್ನು ಬಳಸಿ ಬೃಹತ್ ದಾಳಿ ನಡೆಸಿರುವುದಾಗಿ ಹೌದಿಗಳು ಹೇಳಿಕೊಂಡಿದ್ದಾರೆ.

ದಾಳಿಯ ಭೀತಿಯಿಂದಾಗಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲಝೀಝ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು.

Dailyhunt
Disclaimer: This content has not been generated, created or edited by Dailyhunt. Publisher: Vishwa News24