Dailyhunt Logo
  • Light mode
    Follow system
    Dark mode
    • Play Story
    • App Story
ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ - vishwanews24

ಉಡುಪಿ ಜಿಲ್ಲೆಯಾದ್ಯಂತ ಎಎನ್‌ಪಿಆರ್ ಕ್ಯಾಮೆರಾ ಅಳವಡಿಕೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಶೇ. 40-70ರಷ್ಟು ಇಳಿಕೆ - vishwanews24

Vishwa News24 1 week ago

ಡುಪಿ: ಸ್ವಯಂ ಚಾಲಿತ ವಾಹನ ನೋಂದಣಿ ಸಂಖ್ಯೆ ಗುರುತಿಸುವ(ಎಎನ್‌ಪಿಆರ್) ಕ್ಯಾಮೆರಾಗಳನ್ನು ಜಿಲ್ಲೆಯ ಆರು ಕಡೆಗಳಲ್ಲಿ ಅಳವಡಿಸಿದ್ದು, ಇದರಿಂದ ಜಿಲ್ಲೆಯಾದ್ಯಂತ ಪ್ರಮುಖ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಗಳಲ್ಲಿ ಶೇ.40ರಿಂದ ಶೇ.70ರವರೆಗೆ ಇಳಿಕೆ ಕಂಡು ಬಂದಿದೆ.

ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಚಾರವನ್ನು ಪರಿಣಾಮಕಾರಿಯಾಗಿ ನಿರ್ವ ಹಿಸಲು ಹಾಗೂ ತಂತ್ರಜ್ಞಾನದ ಮೂಲಕ ಸಂಚಾರ ನಿಯಮಗಳ ಜಾರಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ದಿಂದ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ ಉಡುಪಿ ಜಿಲ್ಲೆಯ ಪಡುಬಿದ್ರಿ- ಉಚ್ಚಿಲ, ಕಾಪು-ದಂಡತೀರ್ಥ, ಕೋಟ- ತೆಕ್ಕಟ್ಟೆ, ಗಂಗೊಳ್ಳಿ- ತ್ರಾಸಿ, ಬೈಂದೂರು- ಕೆರ್ಗಾಲ್ ಮತ್ತು ಕಾರ್ಕಳ- ದೂಪದಕಟ್ಟೆಗಳಲ್ಲಿ ಒಟ್ಟು ಆರು ಎಎನ್‌ಪಿಆರ್ ಕ್ಯಾಮೆರಾಗಳನ್ನು ಅಳವಡಿಸಿ, ಮೇ 21ರಂದು ಅನುಷ್ಠಾನ ಮಾಡಲಾಗಿತ್ತು.

ಇದನ್ನೂ ಓದಿ :

ಹೆಬ್ರಿ: ಕೂಡ್ಲು ಫಾಲ್ಸ್ ಪ್ರವೇಶಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕ ನಿಷೇಧ - vishwanews24

ಇಲ್ಲಿನ ಕ್ಯಾಮೆರಾಗಳು ವಾಹನದ ನೋಂದಣಿ ಸಂಖ್ಯೆಯನ್ನು ಸ್ವಯಂ ಚಾಲಿತವಾಗಿ ಗುರುತಿಸಿ, ವಾಹನದ ಮಾಲಕರ ವಿವರಗಳು ಹಾಗೂ ನಡೆದಿರುವ ಸಂಚಾರ ನಿಯಮ ಉಲ್ಲಂಘನೆಯ ಮಾಹಿತಿಯನ್ನು ದಾಖಲಿಸುತ್ತದೆ. ದಾಖಲಾದ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ಇ-ಚಲನ್ ನೋಟಿಸ್‌ಗಳನ್ನು ಸ್ವಯಂಚಾಲಿತವಾಗಿ ಸಿದ್ಧಪಡಿಸಿ, ಸಂಬಂಧಿತ ವಾಹನದ ಮಾಲಕರಿಗೆ ಕಳುಹಿಸಲಾಗುತ್ತದೆ. ಈವರೆಗೆ ಒಟ್ಟು 2,700 ಇ-ಚಲನ್‌ಗಳನ್ನು ಜಾರಿ ಮಾಡಲಾಗಿದೆ.

ಈ ಯೋಜನೆ ಜಾರಿಯಾದ ಮೊದಲ ವಾರ ಹಾಗೂ ಇತ್ತೀಚಿನ ವಾರದ ಸಂಚಾರ ನಿಯಮ ಉಲ್ಲಂಘನೆಗಳ ಹೋಲಿಕೆ ಮಾಡಿದರೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಸಾಕಷ್ಟು ಇಳಿಮುಖವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್ ತಿಳಿಸಿದ್ದಾರೆ.

ಇದನ್ನೂ ಓದಿ :

ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನ : ಅತ್ಯಾಚಾರ , ಕೊಲೆ ಪ್ರಕರಣದ ಆರೋಪಿ ಎನ್‌ಕೌಂಟರ್‌ನಲ್ಲಿ ಹತ್ಯೆ - vishwanews24

Dailyhunt
Disclaimer: This content has not been generated, created or edited by Dailyhunt. Publisher: Vishwa News24